________________
a ವಿಮಶ್ರಪಾಲಂ
,
ಒಂದನೆಯ ಅವತಾರ
ವಿನಯಾದಿತ್ಯನ ಹೊಯ್ಸಳ ಜನಪತಿಗಳ ಕೀರ್ತಿಪುಂಡರೀಕಿನಿಗುಲನಮನೊಡರ್ಚಿದನತೆಯಂಗನ್ನಪಾಲನ ತಂದೆ ಬಿಟ್ಟಿದೇವಂಗಜ್ಜಂ ಅರಸಾದಂ ಸಂವರಣೆಗೆ ಪರರಾಷ್ಟಂ ಗಂಗವಾಡಿ ತೊಂಬತ್ತಲುಸಾಸಿರಮಂ ಬ್ರಾಹ್ಮಣದತ್ತಿಗೆ ವರಸಪ್ತಮಚಕ್ರವರ್ತಿ ವಿಷ್ಣುನೃಪಾಲಂ | ಈವಿಚಿವ ಕಾವ ಗುಣದಿಂದಾ ವಿಷ್ಣುವಿನೊರೆಗೆ ದೊರೆಗೆವರಲುಟಿದ ಧರಿಶ್ರೀವಲ್ಲಭರೇನೇಚಲ ದೇವಿಗಮೆಅಲೆಯಂಗ ನೃಪತಿಗಂ ಪುಟ್ಟಿದರೇ ಧೀರನಿಧಿ ಬಿಟ್ಟಿದೇವನೊ- - ಟೋರಗೆ ಬಲ್ಲಾಳನಿಂತು ನರಸಿಂಹಸುತಂಗಾರೆಣೆ ಗಗನಂ ಗಗನಾಕಾರಮೆನಲ್ ತಮ್ಮೊಳಣೆ ಪಿತಾಮಹ ಪೌತ್ರರ್ , ಆಯಾಟಿಗೆ ಬಲ್ಲಾಳನ . ದಾಚೆಯ ದಾವಣಿಯ ತುರಗದ ಖುರಹತಿಯಂ ಪೇಟಿ ಪಸರಿಲ್ಲದಂತಿರೆ |
ಪಾಲಾದುವು ವೈರಿದುರ್ಗಮೆನಿತೊಳವನಿತುಂ ೧೦. ವಿಕ್ರಮಾದಿತ್ಯನು ಹೊಯ್ಸಳರಾಜರ ಕೀರ್ತಿಯೆಂಬ ಕಮಲಸರೋವರವನ್ನು ಅರಳಿಸಿದನು. ಈತನು ಎರೆಯಂಗ ಎಂಬ ರಾಜನ ತಂದೆ, ಬಿಟ್ಟಿದೇವನಿಗೆ ಈತನು ಅಜ್ಜ..೧೧. ಮುಂದೆ ವಿಷ್ಣುನೃಪಾಲ [ಬಿಟ್ಟಿದೇವ) ನು ರಾಜನಾದನು. ಪರರಾಷ್ಟ್ರವಾದ ಗಂಗವಾಡಿ ತೊಂಬತ್ತಾರು ಸಾವಿರವು ಅವನ ಅಂಕೆಗೊಳಗಾಯಿತು: ಬಹು ಪ್ರದೇಶ ವನ್ನು ಬ್ರಾಹ್ಮಣದತ್ತಿಗೆ ವಿನಿಯೋಗಿಸಿದ ಆತನು ಹೊಯ್ಸಳರಲ್ಲಿ ಏಳನೇ ಚಕ್ರವರ್ತಿ ಯಾಗಿದ್ದನು. ೧೨. ದಾನಕೊಡುವ, ಹೋರಾಡುವ ಹಾಗೂ ರಕ್ಷಿಸುವ ಗುಣದಿಂದ ಆ ವಿಷುವಿನ ಸಮಕ್ಕೆ ಬರಲು ಉಳಿದ ಯಾವ ಭೂಪತಿಗಳಿಗೂ ಸಾಧ್ಯವಾಗಲಿಲ್ಲ. ಉಳಿದವರೇನು ಏಚಲದೇವಿಗೂ ಎರೆಯಂಗಭೂಪತಿಗೂ ಮಕ್ಕಳಾಗಿದ್ದರೆ ?೬ ೧೩. ಧೀರನಿಧಿಯಾದ ಬಿಟ್ಟಿದೇವನಿಗೆ ಸಮಾನನಾದವವನೇ ಬಲ್ಲಾಳನು. ಈತನು ನರಸಿಂಹನ ಮಗ. ಈತನಿಗೆ ಸರಿಸಮಾನರಾದವರು ಬೇರೆ ಯಾರೂ ಇಲ್ಲ. ಈ ಅಜ್ಜ ಮೊಮ್ಮಕ್ಕಳು 'ಆಕಾಶವು ಆಕಾಶದಂತೆ' ಎನ್ನುವ ಹಾಗೆ ಪರಸ್ಪರ ಎಣೆಯಾಗಿದ್ದಾರೆ. ೧೪. ಬಲ್ಲಾಳನು ಹಗೆಗಳ ಹಟಮಾರಿತನವನ್ನು ಕಂಡಾಗ ಅವರ ದುರ್ಗಗಳನ್ನು ಆಕ್ರಮಿಸುತ್ತಿದ್ದನು. ಆಗ ಆತನ ಕಡೆಯ ವೀರಭಟರ ಹೊಡೆತಗಳಿಂದಲೂ, ಲಾಯ ದಲ್ಲಿ ಕಟ್ಟಿಹಾಕಿ ಸಾಕಿದ ಅಶ್ವಸೈನ್ಯದ ಗೊರಸಿನ ಪೆಟ್ಟಿನಿಂದಲೂ ಶತ್ರುಗಳ ಕೋಟೆಗಳೆಲ್ಲ