________________
೧೬
ಆರೆಣೆಯೆಂಬೆನಂಬದ
ಬೀರಮನೀ ಜಗಮನಾವಗಂ ಸುತ್ತಿದ ಮುನೀರೆಂಬುದು ಬಿರುದಿನ ಬೆ ಳ್ಳಾರೆನಿಸಿದುದದಟರಾಯ ಕೋಳಾಹಳನಾ
ಚಲದ ಬಲದೆಸಕದಿಂ ಸಲೆ
ನಿಲೆ ನಾಲ್ಕುಂ ದೆಸೆಯ ಮೂರುವರೆ ರಾಯರ ಮುಂ
ದಲೆಯೊಳಗುಂದಲೆಯನೆ ನಿಂ
ದಲೆವುದು ತೇಜಂ ಪ್ರತಾಪಚಕ್ರೇಶ್ವರನಾ
ನೆಗಲ್ಲಿ ನೃಪರೊಳಗೆ ಮುಂ ಕವಿ
ತೆಗೆ ಮುಂಜಂ ಭೋಜನುತ್ಸಲಂ ಶ್ರೀಹರ್ಷ೦ ಮಿಗಿಲವರಿಂ ಬಲ್ಲಾಳಂ
ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ
ಆ ನೃಪನ ಸಭೆಯೊಳಖಿಳಕ
ಳಾನಿಪುಣರ ನಟ್ಟನಡುವೆ ಬೊಟ್ಟೆ ಗೆಲಲ್ ತಾನೆ ಚತುರ್ವಿಧಪಂಡಿತ
ನೇನೆಂಬುದೊ ಸುಕವಿ ಭಾಳಲೋಚನನಳವಂ
ಯಶೋಧರ ಚರಿತೆ
೫
೧೬
02
೧೮
ಹೇಳ ಹೆಸರಿಲ್ಲದಂತೆ ಹಾಳಾಗಿ ಹೋದವು. ೧೫. ಇಡೀ ಭೂಮಂಡಲವನ್ನು ಸದಾ ಸುತ್ತಿಕೊಂಡಿರುವ ಸಾಗರವೂ, ಮಹಾವೀರನಾದ ಬಲ್ಲಾಳನ ಕೀರ್ತಿಯ ಧವಳ ಪ್ರವಾಹದಂತೆ ಕಾಣುತ್ತಿತ್ತು. ಅವನು ಸಾಗರಾಂತಧರಿತ್ರಿಯನ್ನೂ ತನ್ನ ಸ್ವಾಧೀನ ಪಡಿಸಿಕೊಂಡವನು ; ಅರಸರಿಗೆಲ್ಲ ಅಂಜಿಕೆಯನ್ನುಂಟುಮಾಡಿದವನು. ೧೬. ಅವನ ಚಲದ ಬಲದ ಎಸಕ ಅದ್ಭುತವಾಗಿದೆ. ಪ್ರತಾಪ ಚಕ್ರೇಶ್ವರನಾದ ಆತನ ತೇಜಸ್ಸು ನಾಲ್ಕೂ ದಿಕ್ಕುಗಳಲ್ಲಿ ಸ್ಥಿರಸ್ಥಾನವನ್ನು ಪಡೆದುಕೊಂಡಿದೆ. ಅಲ್ಲಿನ ಮೂರೂ ಮತ್ತು ಇತರ ಕೆಲವು ರಾಜರ ಮುಂದಲೆಯಲ್ಲಿ ಅದು ವಿಶೇಷವಾಗಿ ನೆಲೆನಿಂತು ಅವರಿಗೆ ತೀವ್ರವಾದ ಬಾಧೆಯನ್ನುಂಟುಮಾಡುತ್ತದೆ. ೧೭. ಹಿಂದೆ ಕವಿತೆಗೆ ಹೆಸರುಗೊಂಡವರೆಂದರೆ ಮುಂಜ, ಭೋಜ, ಉತ್ಪಲ ಮತ್ತು ಶ್ರೀಹರ್ಷ ಎಂಬ ರಾಜರು. ಈ ಬಲ್ಲಾಳನು ಅವರಿಗಿಂತ ಇಮ್ಮಡಿ, ಮುಮ್ಮಡಿ, ನಾಲ್ಮಡಿ, ಐಮಡಿ ಮಿಗಿಲಾಗಿದ್ದಾನೆ. ೧೮. ಈ ರಾಜನ ಆಸ್ಥಾನದಲ್ಲಿ ಅನೇಕ ಕಲಾನಿಪುಣರಿದ್ದಾರೆ. ಅವರೆಲ್ಲರ ಮಧ್ಯದಲ್ಲಿ ಬೆರಳೆತ್ತಿ ನಿಂತು ಅವರನ್ನೆಲ್ಲ ಗೆಲ್ಲುವುದಕ್ಕೆ ಅತಿ ಸಮರ್ಥನಾದವನೇ ಜನ್ಮ ಅವನು ಚತುರ್ವಿಧ ಪಂಡಿತನೆಂದಾದ ಮೇಲೆ ಅವನ ಅಳವನ್ನು ಏನೆನ್ನಲಿ ? ಅವನು ಸುಕವಿಭಾಳಲೋಚನನಾಗಿದ್ದಾನೆ.