________________
ಯಶೋಧರ ಚರಿತೆ ಹಾಗೆಂದು ಯಶೋಧರನು ಬೇರೆ ಹಿಂಸೆಯನ್ನೆ ಮಾಡಿಲ್ಲವೆ? ಅವನ ಅಸಿಲತೆ ರಣಭೌತವಾಗಿತ್ತು. ವಿಜಿಗೀಷು ವೃತ್ತಿ ರಾಜಧರ್ಮವಾದುದರಿಂದ ಅವನು ಆ ರೀತಿ ಶತ್ರುಗಳನ್ನು ಕೊಂದಿದ್ದಾನೆಂದೂ, ಅದು ಅಪರಾಧವಾಗುವುದಿಲ್ಲವೆಂದೂ ಇಲ್ಲಿ ಹೇಳಬಹುದೆ ? ಹಾಗೆಯೇ ಅವನ ಮಗ ಯಶೋಮತಿ ಬೇಟೆಯ ನೆವದಿಂದ ಎಷ್ಟು ಜೀವಹಿಂಸೆ ಮಾಡಿಲ್ಲ? ಅವನಿಗೇನು ಗತಿಯೊದಗಿತೋ ತಿಳಿಯದು.
ಯಶೋಧರನು ಎರಡನೆಯದಾದ ಈಶಾನಕಕ್ಕೆ ಮಾತ್ರ ಅರ್ಹನಾದುದಕ್ಕೆ ಅವನು ಸತ್ಯವ್ರತವನ್ನು ಪರಿಪಾಲಿಸದಿದ್ದುದೂ ಕಾರಣವಾಗಿರಬಹುದೆ? ಅಮೃತಮತಿ ಅಷ್ಟವಂಕನಲ್ಲಿ ಕಾಮುಕತೆಯಿಂದ ವ್ಯಭಿಚಾರಿಯಾದಳೆಂಬುದನ್ನು ಅವನು ತನ್ನ ತಾಯಿಗೆ ಹೇಳುವಾಗ ಕನಸಿನ ನೆವದಿಂದ ಮರಸಿ ಹೇಳಿದನು. ಇದರಿಂದಾಗಿ ಅವನಿಗೆ ಈಶಾನಕಲ್ಪದಲ್ಲಿ ಜನವೊದಗಿತೋ ಏನೋ. ಯಾವ ಸಂದರ್ಭಗಳಲ್ಲಿ ಸುಳ್ಳು ಹೇಳಬಹುದೆಂಬುದನ್ನು ಈ ಕೆಳಗಣ ಶ್ಲೋಕ ತಿಳಿಸುತ್ತದೆ :
ವಿವಾಹಕಾಲೇ ರತಿಸಂಪ್ರಯೋಗೇ ಪ್ರಾಣಾಯೇ ಸರ್ವಧನಾಪಹಾರೇ ವಿಪ್ರಸ್ಕಚಾರ್ಥಹ್ಮನೃತಂ ವದೇತ
ಪಂಚಾಮೃತಾನ್ಯಾಹುರಪಾತಕಾನಿ | (ವಿವಾಹಕಾಲದಲ್ಲಿ, ಸಂಭೋಗ ಸಮಯದಲ್ಲಿ, ಪ್ರಾಣಾಪಾಯವು ಒದಗಿದಾಗ, ಸರ್ವಸ್ವವೂ ಅಪಹಾರವಾಗುತ್ತಿರುವಾಗ, ವಿಪ್ರರಿಗೋಸ್ಕರವಾಗಿ ಅವೃತವನ್ನು ಹೇಳಬಹುದು. ಬಲ್ಲವರು ಈ ಐದು ಅನೃತಗಳು ಪಾಪವಲ್ಲ ಎಂದು ಹೇಳುತ್ತಾರೆ)
ನೀಷು ನರ್ಮವಿವಾಹೇಚ ವೃತ್ಯರ್ಥೇ ಪ್ರಾಣಸಂಕಟೇ ಗೋಬ್ರಾಹ್ಮಣಾರ್ಥೇ ಹಿಂಸಾಯಾಂ ನಾನೃತಂ ಸ್ಕಾಜುಗುಪ್ಪಿತಂ
(ಹೆಂಗುಸರಲ್ಲಿ, ನರ್ಮವಿವಾಹದಲ್ಲಿ ವೃತ್ತಿಗಾಗಿ, ಪ್ರಾಣಸಂಕಟದಲ್ಲಿ, ಗೋಬ್ರಾಹ್ಮಣರ ಸಲುವಾಗಿ, ಹಿಂಸೆಯಲ್ಲಿ ಸುಳ್ಳು ಜುಗುಪ್ಪೆಗೆ ಒಳಗಾಗುವುದಿಲ್ಲ.) ಯಶೋಧರನಿಗೆ ಈ ಕಾರಣಗಳಲ್ಲಿ ಯಾವುದಾದರೊಂದು ಅನುಕೂಲವಾಗಿ ಅವನನ್ನು ಪಾಪಕ್ಕೆ ಪಕ್ಕಾಗದಂತೆ ಮಾಡಿದೆಯೆನ್ನೋಣವೇ? ಹಾಗಿದ್ದರೆ ಒಂದಿಲ್ಲೊಂದು ಕಾರಣವನ್ನು ನಮ್ಮ ನಮ್ಮ ಅನುಕೂಲತೆಗೆ ಹೊಂದಿಸಿಕೊಂಡು ಸುಳ್ಳು ಹೇಳುವುದನ್ನು ಅಂಗೀಕರಿಸಬಹುದು.
ಇನ್ನೂ ಒಂದು ಕಾರಣವನ್ನು ಊಹಿಸಬಹುದು : ಯಶೋಧರನು ನವಿಲಿನ ಜನ್ಮದಲ್ಲಿದ್ದಾಗ ಅಷ್ಟವಂಕನ ಕಣ್ಣನ್ನು ಕುಕ್ಕಿ ಪಾಪಕ್ಕೆ ಪಕ್ಕಾಗಿದ್ದಾನೆ. ಇದು ಅವನಿಗೆ ಅರಿವಿಲ್ಲದೆ ಆದುದಲ್ಲ; ಭವರೋಷದಿಂದ, ಎಂದರೆ ಯಶೋಧರನಾಗಿದ್ದಾಗ ಬಂದ ಧೃತಿ ಅವನಿಗೆ ನವಿಲಾಗಿದ್ದಾಗ ಬರಲಿಲ್ಲ, ಇಲ್ಲಿ ಹಿಂಸಾಬುದ್ದಿಯೇ ಉಳಿಯಿತು.