Book Title: Yasodhara Carita
Author(s): Janna
Publisher: Kannada Sahitya Parishattu

View full book text
Previous | Next

Page 10
________________ ಉಪೋದ್ಘಾತ ಪ್ರಾಣಿಬಲಿಯನ್ನು ಕೊಟ್ಟು ಶಾಂತಿ ಮಾಡುವಂತೆ ಮಗನನ್ನು ಒತ್ತಾಯಿಸುವಳು. ಕಟ್ಟಕಡೆಗೆ ಹಿಟ್ಟಿನ ಕೋಳಿಯನ್ನು ಬಲಿಕೊಡುವ ನಿರ್ಧಾರಕ್ಕೆ ಇಬ್ಬರೂ ಬರುತ್ತಾರೆ. ಹಾಗೆ ಬಲಿಕೊಡುತ್ತಿದ್ದಾಗ ಹಿಟ್ಟಿನ ಕೋಳಿಯಲ್ಲಿ ಸೇರಿದ್ದ ಬೆಂತರವೊಂದು ಕೋಳಿಯಂತೆ ಕೂಗುತ್ತದೆ. ದೊರೆಗೆ ದಿಗಿಲಾಗುತ್ತದೆ. ಅವನು ಮನೆಗೆ ಬಂದು, ಮಗ ಯಶೋಮತಿಗೆ ಪಟ್ಟಕಟ್ಟಿ ತಪಸ್ಸಿಗೆ ಹೊರಡಲು ಸಿದ್ಧವಾಗುತ್ತಾನೆ. ಅದನ್ನು ತಿಳಿದ ಅಮೃತಮತಿ ಅವನನ್ನೂ ಅತ್ತೆಯನ್ನೂ ಔತಣಕ್ಕೆ ಬರಿಸಿ, ಅವರಿಬ್ಬರನ್ನೂ ವಿಷವಿಕ್ಕಿ ಕೊಲ್ಲುತ್ತಾಳೆ. ∞ ಹಾಗೆ ಸತ್ತ ಈ ಇಬ್ಬರೂ ಹಲವು ಸಲ ಜನ್ಮವೆತ್ತಿ, ಕಡೆಗೆ ಯಶೋಮತಿಗೆ ಅಭಯರುಚಿ ಅಭಯಮತಿಗಳೆಂಬ ಅವಳಿ ಮಕ್ಕಳಾಗಿ ಹುಟ್ಟುತ್ತಾರೆ. ಅವರು ಎಳವೆಯಲ್ಲಿ ದೀಕ್ಷೆವಹಿಸಿ ಸುದತ್ತಾಚಾರ್ಯರ ಶಿಷ್ಯರಾಗುತ್ತಾರೆ. ಚರಿಗೆಗೆ ಹೊರಟಾಗ ಮಾರಿದತ್ತನ ತಳಾರನಾದ ಚಂಡಕರ್ಮನು ಅವರನ್ನು ಹಿಡಿದು, ಚಂಡಮಾರಿ ದೇವತೆಯ ಮನೆಗೊಯ್ದಾಗ ಅಭಯರುಚಿ ಈ ಕಥೆಯನ್ನು ಹೇಳುತ್ತಾನೆ. ಮಾರಿದತನ ಮನಸ್ಸು ಮಾರ್ಪಟ್ಟು ದೀಕ್ಷೆ ವಹಿಸುತ್ತಾನೆ. ಇವನು ಸತ್ತು, ಮುಂದೆ ಮೂರನೆಯ ಸ್ವರ್ಗದಲ್ಲಿ ದೇವನೆ ಆಗುತ್ತಾನೆ. ಅಭಯರುಚಿ ಅಭಯಮತಿಗಳೂ ಕಾಲಾಂತರದಲ್ಲಿ ಈಶಾನ ಕಲ್ಪದಲ್ಲಿ ಹುಟ್ಟುತ್ತಾರೆ. ಅಮೃತಮತಿ ಧೂಮಪ್ರಭೆಯೆಂಬ ನರಕದಲ್ಲಿ ತೊಳಲುತ್ತಾಳೆ. ೪. ಪರಿಶೀಲನ ಇದಿಷ್ಟು ಕಥೆಯನ್ನು ಸ್ಕೂಲವಾಗಿ ನೋಡುವಾಗ ಕಾಣದ ಸಮಸ್ಯೆಗಳು ಸೂಕ್ಷಾವಲೋಕನ ಸಂದರ್ಭದಲ್ಲಿ ತಲೆಯೆತ್ತುತ್ತವೆ. ಎಲ್ಲವಕ್ಕಿಂತಲೂ ಪ್ರಮುಖ ವಾದುದು ಅಮೃತಮತಿಯ ವರ್ತನೆಯ ಸಮಸ್ಯೆ. ಯಶೋಧರನು ಕಬ್ಬಿನ ಬಿಲ್ಲಿಗೂ ನನೆಯ ನಾರಿಗೂ ಜನಮೋಹನ ಬಾಣವು ಹುಟ್ಟುವಂತೆ ಹುಟ್ಟಿದವನು ಮಾತ್ರವಲ್ಲದೆ, ಎಳವೆಯಿಂದಲೇ ಸೌಂದರ್ಯದ ಮೂರ್ತಿಯಾಗಿ ರೂಪುಗೊಂಡವನು. ತಾರುಣ್ಯದಲ್ಲಿ ಎಳೆಯ ಬೆಟ್ಟಿಂಗಳು, ಪುಷ್ಪಬಾಣ, ಮಲಯಮಾರುತ ಇವುಗಳ ಆಕರ್ಷಕತೆಯನ್ನು ಪಡೆದವನು. ಇಂಥವನ ಮನಃಪ್ರಿಯೆ ಅಮೃತಮತಿ, “ಕನ್ಯಾ ವರಯತೇ ರೂಪಂ' ಎಂಬ ಮಾತಿನಂತೆ ಅಮೃತಮತಿ ಯಶೋಧರನ ರೂಪವನ್ನು ಮೆಚ್ಚಿ ಅವನನ್ನು ವರಿಸಿದಳೆಂದಾದರೆ, ಅವನ ಸೌಂದರ್ಯಕ್ಕೆ ಅದೊಂದು ಪ್ರಶಸ್ತಿಯೇ ಸರಿ. ಅವನು ಸ್ವತಃ ರಾಜನಾಗಿದ್ದನೆಂದ ಮೇಲೆ ಅಧಿಕಾರ ಐಶ್ವರ್ಯಗಳೂ ಅವನಿಗೆ ಬೇಕಾದಷ್ಟಿದ್ದುವು ಎಂದು ಬೇರೆ ಹೇಳಬೇಕಾಗಿಲ್ಲ. ಅರಸುತನದಲ್ಲಿ ಕೂಡ ಅವನು ದುರ್ಬಲನೂ ಅಲ್ಲ: ಹೇಡಿಯೂ ಅಲ್ಲ. ಅವನ ಅಸಿಲತೆ (ಖಡ್ಗ) ರಣಭೌತವಾಗಿತ್ತೆಂದು ಅವನೇ ಹೇಳುತ್ತಾನೆ. ಅದು ಅವನ ಹಿರಿಯರಿಂದ ಬಂದುದೆಂದಾಗಿದ್ದರೆ ಅವನು ಅದರ ಮೇಲೆ ಅಷ್ಟೊಂದು

Loading...

Page Navigation
1 ... 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 ... 536