Book Title: Yasodhara Carita
Author(s): Janna
Publisher: Kannada Sahitya Parishattu

View full book text
Previous | Next

Page 11
________________ ಯಶೋಧರ ಚರಿತೆ ಅಭಿಮಾನವಿರಿಸಿಕೊಳ್ಳುತ್ತಿದ್ದನೆ? ಅಂತೂ ಯಾವ ಬಗೆಯ ನ್ಯೂನತೆಯೂ ಇಲ್ಲದ ಯಶೋಧರ ಯಾವ ದುರ್ಗುಣವನ್ನೂ ಪಡೆದಿದ್ದನೆಂದಿಲ್ಲ. ಇಂತಹ ಯಶೋಧರನ ಪತ್ನಿ ಅಮೃತಮತಿ. ಆಕೆ ಆತನಿಗೆ ಮನಃಪ್ರಿಯೆ. ಆದರೆ ಅವಳಿಗೆ ಅವನು ಮನಃಪ್ರಿಯನಾಗಿದ್ದನೆ ? ಕವಿಯ ಈ ಒಂದು ಮಾತು ಇಲ್ಲಿ ವಿಚಾರಣೀಯ: ಅಮೃತಮತಿ ಗಡ ಯಶೋಧರ ನ ಮನಃಪ್ರಿಯೆ ಆಕೆ ದೀವಮಾಗೆ ಪುಳಿಂದಂ ಸುಮನೋಬಾಣಂ ತದ್ರೂ ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ. ಇದರ ಪ್ರಕಾರ, ಯಶೋಧರನು ಅಮೃತಮತಿಯಿಂದ ಆಕರ್ಷಿತನಾಗಿದ್ದನು. ಏಕೆ ? ಕಾಮನ ಪ್ರಭಾವದಿಂದ ಎಂಬುದು ಸ್ಪಷ್ಟ, ಎಂದರೆ ಯಶೋಧರನಲ್ಲಿ ಕಾಮುಕತೆಯಿತ್ತೆಂದು ಸಾಧಿಸುವಂತಿದೆ ಈ ಮಾತು. ಹಾಗೆಯೇ ಅಮೃತಮತಿ ಆತನನ್ನು ಒಲಿದಿದ್ದಳೆ? ಬೇಟೆಗಾರನ ದೀವಕ್ಕೆ ತನ್ನಿಂದಾಗಿ ಗೋರಿಗೊಳ್ಳುವ ಪ್ರಾಣಿಯಲ್ಲಿ ಪ್ರೀತಿ ಆಸಕ್ತಿ ಉಳಿಯುವುದೇ ? ಮಾತ್ರವಲ್ಲ, ಬೇಟೆಗಾರನು ಅದೇ ದೀವವನ್ನು ಇನ್ನೊಂದು ಪ್ರಾಣಿಯನ್ನಾಕರ್ಷಿಸುವುದಕ್ಕೆ ಬಳಸುತ್ತಾನೆ. ಆ ಪ್ರಾಣಿಯೂ ಹಾನಿಗೊಳಗಾಗುತ್ತದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಪರಿಭಾವಿಸಿದರೆ, ಯಶೋಧರನು ಅಮೃತಮತಿಯಲ್ಲಿ ಆಸಕ್ತನಾಗಿದ್ದನೇ ಹೊರತು, ಅಮೃತಮತಿ ಅವನಲ್ಲಿ ಅನುರಕ್ತಿಯಾಗಿದ್ದಳು ಎನ್ನುವಂತಿಲ್ಲ. ಆದರೆ ಮುಂದೆ ಅಮೃತಮತಿಸಹಿತಮಾ ಚಂ ದ್ರಮತಿಯ ಸುತನಂತು ಮೇಜಿನ ದವಳಾರದೊಳ ಭಮುವೆರಸಭಗಜಂ ವಿ ಭ್ರಮದಿಂದ ಸೆಜ್ಜರಕ್ಕೆ ಬಂದವೊಲೆಸೆಗುಂ ಎಂಬ ಪದ್ಯ ಬರುತ್ತದೆ. ಸಾಲದುದಕ್ಕೆ 'ಖಚರದಂಪತಿಗಳವೊಲ್ ತಾಮೆಸೆದರ್' ಎಂದೂ 'ಮನೋಜನಾಡಿಸುವ ಜಂತ್ರದಂತಿರೆ ನೆರೆದರ್‌' ಎಂದೂ ಆ “ಹೃದಯಪ್ರಿಯ'ರ ವಿಷಯ ಮಾತು ಬರುತ್ತದೆ. ಇವುಗಳಿಂದ ಅವರಿಬ್ಬರೂ ಪರಸ್ಪರ ಪ್ರೇಮಬದರಾಗಿದ್ದರೆಂದು ವಾದಿಸಬಹುದಾದರೂ, ಮುಂದಣ ಘಟನೆಯನ್ನು ಎಣಿಸುವಾಗ ಅವೆಲ್ಲ ಬರಿಯ ಆಲಂಕಾರಿಕ ವಾಕ್ಯಗಳೆಂದು ಮಾತ್ರ ಹೇಳಬೇಕಾಗುತ್ತದೆ. ಏಕೆಂದರೆ ಕರುಮಾಡದ ಪಕ್ಕದಲ್ಲಿದ್ದ ಪಟ್ಟದಾನೆಯ ಬದಗನು ವಿನೋದಕ್ಕೆ ಹಾಡುತ್ತಿದ್ದಾಗ, ಅದನ್ನು ಕೇಳಿ ಅಮೃತಮತಿ ತನ್ನ ಮನಸ್ಸನ್ನು ತೊಟ್ಟನೆ-ಏನೂ ವಿಚಾರಮಾಡದೆ-ಪಸಾಯದಾನ ಕೊಟ್ಟಳಂತೆ! ಅವಳ ಮನಸ್ಸು ಮಾವನ್ನು ಮೆಚ್ಚದ ಮನಸ್ಸಾಗಿತ್ತು ; ಅದು ಬೇವನ್ನೆ ಬಯಸುತ್ತಿತ್ತು. ಪಂಚೇಂದ್ರಿಯಗಳಲ್ಲಿ ಶ್ರವಣೇಂದ್ರಿಯವೊಂದರ ಆಕರ್ಷಣೆ ಅವಳಿಗೆ ತೀವ್ರವಾಯಿತು. ಅನಂತರವೇ “ನೋಡುವ ಕೂಡುವ ಚಿಂತೆ ಕಡಲ್ವರಿದುದು. ಯಾವುದಾದರೊಂದು ವ್ಯಕ್ತಿಯ ಹೆಸರು

Loading...

Page Navigation
1 ... 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 103 104 105 106 107 108 109 110 111 112 ... 536