Book Title: Yasodhara Carita
Author(s): Janna
Publisher: Kannada Sahitya Parishattu

View full book text
Previous | Next

Page 9
________________ ಯಶೋಧರ ಚರಿತೆ ಎಳೆಯರನ್ನು ಹಿಡಿತರಿಸುತ್ತಾನೆ. ಅವನ ಪ್ರಜೆಗಳು ಸಾವಿರಾರು ಸಂಖ್ಯೆಯ ಪ್ರಾಣಿಗಳನ್ನು ತಂದಿದ್ದಾರೆ. ಆ ಸನ್ನಿವೇಶದಲ್ಲಿ ಅಲ್ಲಿಗೆ ತರಲ್ಪಟ್ಟ ಮರ್ತ್ಯಯುಗಲಕವು ನಿಶ್ಚಿಂತೆಯಿಂದ ಮಾರಿಯ ಮನೆಯನ್ನು ಹೊಕ್ಕು, ಪದ್ಧತಿಯಂತೆ, ಅರಸನನ್ನು ಹರಸಬೇಕೆಂದಿದ್ದಾಗ, ಅವರಲ್ಲಿ ಒಬ್ಬನಾದ ಅಭಯರುಚಿಕುಮಾರನು “ನಿರ್ಮಲ ಧರ್ಮದಿಂದೆ ಪಾಲಿಸು ಧರೆಯಂ” ಎನ್ನುತ್ತಾನೆ. ಅವರ ರೂಪಧೈರ್ಯಗಳು ರಾಜನನ್ನು ಬೆರಗುಗೊಳಿಸುತ್ತವೆ. ಆಗ ಮಾರಿದತ್ತನಿಗೆ ಅವರ ವಿಷಯವನ್ನು ತಿಳಿಯುವ ಕುತೂಹಲವುಂಟಾಯಿತು. ಅವನು ಅವರನ್ನು ಪ್ರಶ್ನಿಸಿದಾಗ ಅಭಯರುಚಿ ತಮ್ಮ ಜನ್ಮಾಂತರದ ಕಥೆಯನ್ನು ಹೇಳುತ್ತಾನೆ. ಉಜ್ಜಯಿನಿಯ ಯಶೌಘರಾಜನಿಗೆ ತನ್ನ ಮಡದಿ ಚಂದ್ರಮತಿಯಲ್ಲಿ ಹುಟ್ಟಿದವನೇ ಯಶೋಧರ, ಅವನ 'ಮನಃಪ್ರಿಯೆ' ಅಮೃತಮತಿ, ಯಶೌಘನು ವೃದ್ದಾಪ್ಯಕ್ಕಡಿಯಿಟ್ಟಾಗ ಮಗನಿಗೆ ಪಟ್ಟಕಟ್ಟಿ ತಪಸ್ಸಿಗೆ ಹೋಗುತ್ತಾನೆ. ಯಶೋಧರ ಅಮೃತಮತಿಯರು ಪರಸ್ಪರಾನುಬದ್ದರಾಗಿ ಕಾಲ ಕಳೆಯುತ್ತಾರೆ. ಒಂದು ರಾತ್ರಿ ಅವರಿಬ್ಬರೂ ಮಂಚದ ಮೇಲೆ ಮಲಗಿದ್ದಾಗ, ನಟ್ಟಿರುಳು ಅಮೃತಮತಿಗೆ ಪಕ್ಕದ ಗಜಶಾಲೆಯ ಮಾವಟಿಗನ ಹಾಡಿನ ಇಂಚರ ಕೇಳುತ್ತದೆ. ಅವಳು ಕೂಡಲೇ ಆತನಿಗೆ ತನ್ನ ಮನಸ್ಸನ್ನು 'ಪಸಾಯದಾನಂಗೊಟ್ಟಳು. ಅವನನ್ನು ನೋಡುವ, ಆಮೇಲೆ ಕೂಡುವ ಚಿಂತೆ ಅವಳಿಗೆ ಕಡಲ್ವರಿಯಿತು. ಬೆಳಗಾದ ಮೇಲೆ ತನ್ನ ಕೆಳದಿಯನ್ನು ಆತನ ಬಳಿಗೆ ಕಳುಹಿಸುತ್ತಾಳೆ. ಅವಳು ಅಷ್ಟವಂಕನನ್ನು ಕಂಡು ಹೇಸಿ ಫಕ್ಕನೆ ಮರಳುತ್ತಾಳೆ. ಅತ್ಯಾತುರದಿಂದಿದ್ದ ಅಮೃತಮತಿಯೊಡನೆ 'ಇಂತಹ ಕಾಮದೇವನನ್ನು ಹೇಗೆ ಹುಡುಕಿ ಒಲಿದೆಯೋ !' ಎಂದು ವ್ಯಂಗ್ಯವಾಗಿ ನುಡಿಯುತ್ತಾಳೆ. ಅಮೃತಮತಿಯ ಕಾಮ ಕೆರಳಿ, ವ್ಯಂಗ್ಯ ತಿಳಿಯದೆ, ಆತನ ರೂಪವನ್ನು ತಿಳಿಯಬಯಸುತ್ತಾಳೆ. ಅಷ್ಟಾವಕ್ರನ ವಿಕಾರಗಳ ವರ್ಣನೆಯನ್ನು ಕೇಳಿ, ಕಾಮದ ಕೋಟಲೆಯಿಂದ 'ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೋಳ್' ಎಂದು ಸಮಾಧಾನ ತಂದುಕೊಳ್ಳುತ್ತಾಳೆ. ಅನಂತರ ದೂತಿಗೆ ಲಂಚವಿತ್ತು ಮಾವಟಿಗನ ಒಡನಾಟವನ್ನು ದಕ್ಕಿಸಿಕೊಂಡು, ಕ್ರಮಕ್ರಮವಾಗಿ ಯಶೋಧರನಿಂದ ದೂರವಾಗುತ್ತಾಳೆ. ಇದರ ಸೋವು ಸಿಕ್ಕಿದ ಯಶೋಧರನು ಪರೀಕ್ಷಿಸಿ ನೋಡಲು ಮುಂದಾಗುತ್ತಾನೆ. ಅಮೃತಮತಿ ಜಾರನಲ್ಲಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸಿ ಗುಟ್ಟನ್ನು ತಿಳಿಯುತ್ತಾನೆ. ಆಗ ಅವಳನ್ನೂ ಅವಳ ನಲ್ಲನನ್ನೂ ಎರಡು ಭಾಗ ಮಾಡಬೇಕೆಂಬ ಎಣಿಕೆ ಮೂಡಿ, ಕೂಡಲೇ ಕೃತಿ ಬಂದು, ಕೊಲ್ಲದೆ ಅವನು ಮರಳುತ್ತಾನೆ. ಮರುದಿನ ತನ್ನ ಗುಟ್ಟು ರಟ್ಟಾದುದು ಅಮೃತಮತಿಗೂ ಗೊತ್ತಾಗುತ್ತದೆ. - ಯಶೋಧರನು ಕದಡಿದ ಮನಸ್ಸಿನಿಂದ ತಾಯಿಯ ಬಳಿಗೆ ಹೋಗಿ ಹಿಂದಿನ ರಾತ್ರಿಯ ಘಟನೆಯನ್ನು ಕನಸಿನ ರೂಪದಿಂದ ತಿಳಿಸುವನು. ಆ ತಾಯಿ, ಚಂದ್ರಮತಿ,

Loading...

Page Navigation
1 ... 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 ... 536