Book Title: Yasodhara Carita Author(s): Janna Publisher: Kannada Sahitya Parishattu View full book textPage 7
________________ ಯಶೋಧರ ಚರಿತೆ ಶಾಸನಗಳ ಅಂತ್ಯದ 'ಜನ್ನಯ್ಯನ ಕವಿತೆ' ಎಂಬ ಮಾತಿನಿಂದ ತಿಳಿದುಬರುತ್ತದೆ. ಅವನಿಗೆ ಸಾಹಿತ್ಯರತ್ನಾಕರ, ರಾಜವಿದ್ವತ್ಸಭಾಕಲಹಂಸ, ಕವಿ ವೃಂದಾರಕವಾಸವ, ಕವಿಕಲ್ಪಲತಾ ಮಂದಾರ ಮುಂತಾದ ಬಿರುದುಗಳಿವೆ. ಜನ್ನಮರರಸ, ಜನ್ನಯ್ಯ, ಜನ್ನಿಗ, ಜನಾರ್ದನ, ಜಾನಕಿ ಮುಂತಾದ ಹೆಸರುಗಳಿಂದ ತನ್ನನ್ನು ಕರೆದುಕೊಂಡಿದ್ದಾನೆ. ಈ ಮೇಲೆ ಹೇಳಿದ ಶಾಸನಗಳಲ್ಲದೆ, ಜನ್ನನು ಬರೆದುದು 'ಯಶೋಧರ ಚರಿತೆ' ಮತ್ತು 'ಅನಂತನಾಥ ಪುರಾಣ' ಎಂಬ ಗ್ರಂಥಗಳನ್ನು, ಸರತಂತ್ರವೆಂಬ ಗ್ರಂಥವನ್ನೂ ಬರೆದಿದ್ದಾನೆಂದು ವಿದ್ವಾಂಸರು ಹೇಳುತ್ತಾರೆ. ಇವುಗಳಲ್ಲಿ ಅನಂತನಾಥಪುರಾಣವು ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನ ಚರಿತವಾಗಿದೆ. ಹದಿನಾಲ್ಕು ಆಶ್ವಾಸಗಳುಳ್ಳ ಈ ಕೃತಿ 'ಅರುಹನ ಮೂರ್ತಿಯಂತಿರೆ ನಿರಾಭರಣ'ವಾಗಿ ಮೆರೆಯುವುದೆಂದು ಹೇಳಿದ್ದಾನೆ. ಆದರೆ ಅನೇಕ ಅಲಂಕಾರಗಳು ಕಾವ್ಯದಲ್ಲಿ ಬರುತ್ತವೆ. ಇದು ಮುಖ್ಯವಾಗಿ ಧಾರ್ಮಿಕಕಥೆಯಾಗಿದ್ದು, ಮಧ್ಯದಲ್ಲಿ ಬರುವ 'ಚಂಡಶಾಸನನ ಕಥೆ'ಯಿಂದ ಇದು ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಇದನ್ನು ಇವನು ಕ್ರಿ.ಶ. ೧೨೩೦ರಲ್ಲಿ ಬರೆದು ಮುಗಿಸಿದನೆಂದು ಈ ಗ್ರಂಥದ ಅಂತ್ಯದಲ್ಲಿ ಬರುವ ಈ ಕೆಳಗಣ ಪದ್ಯದಿಂದ ಗೊತ್ತಾಗುತ್ತದೆ: ಶಕಸಂವತ್ಸರಮಂದು ಸಾಸಿರದ ನೂರೈವತ್ತೆರನಂ ವಿಕೃತಾಬ್ದಂ ಬರೆ ಚೈತ್ರಶುದ್ಧದಶಮೀ ದೇವೇನೊಳ್ಳುಷ್ಕತಾ ರಕದೊಳ್ಯಾಡಿಸಿದಂ ಪ್ರತಿಷ್ಟೆಯನನಂತ ಶ್ರೀ ಪುರಾಣಕ್ಕೆ ಕ ಮೈಕುಲಾಂಭೋರುಹಭಾನು ಜನ್ನಮರಸಂ ಸಾಹಿತ್ಯರತ್ನಾಕರಂ (ಆ xiv ; ಪ ೮೪) ೨. ಕಾವ್ಯ - ಯಶೋಧರಚರಿತೆಯೇ ಪ್ರಕೃತ ವಿಚಾರಕ್ಕೆ ಒಳಗಾಗಬೇಕಾದ ಗ್ರಂಥ. ಆದುದರಿಂದ ಇದರ ವಿಷಯವಾಗಿ ಸ್ವಲ್ಪ ವಿಸ್ತಾರವಾಗಿ ಪರಿಶೀಲಿಸೋಣ. ಯಶೋಧರಚರಿತೆಯ ವಿಷಯವಾಗಿ ಆರ್. ನರಸಿಂಹಾಚಾರ್ಯರು ಬರೆದ “ಕವಿಚರಿತೆ'ಯ ಪ್ರಥಮಾವೃತ್ತಿಯಲ್ಲಿ ಈ ಮಾತುಗಳಿವೆ: “ಇದು ವರ್ಣಕ ಪ್ರಬಂಧಕವು; ಇದರಲ್ಲಿ ಗದ್ಯಭಾಗವೇ ಇಲ್ಲ ; ಸುಮಾರು ಎಂಟು ಹತ್ತು ವೃತ್ತಗಳು ಹೊರತು ಉಳಿದುವೆಲ್ಲಾ ಕಂದ ಪದ್ಯಗಳೇ ಆಗಿವೆ. ಈ ಗ್ರಂಥವು ನಾಲ್ಕು ಅವತಾರಗಳಾಗಿ ಭಾಗಿಸಲ್ಪಟ್ಟಿದೆ ; ಇದರಲ್ಲಿ ಒಟ್ಟು ಕಂದ ವೃತ್ತಗಳು ಸಹ ೩೧೧ ಇವೆ ........ ಇದೇ ಕಥೆಯನ್ನು ಈ ಕವಿಯ ಕಾಲಕ್ಕೆ ಹಿಂದೆ ಇತರ ಕವಿಗಳು ಸಂಸ್ಕೃತದಲ್ಲಿಯೂ ಪ್ರಾಕೃತದಲ್ಲಿಯೂ ಕನ್ನಡದಲ್ಲಿಯೂ ಬರೆದಿದ್ದರು.. ಗ್ರಂಥಾವತಾರದಲ್ಲಿ ಇಪ್ಪತ್ತನೆಯ ತೀರ್ಥಂಕರನಾದ ಮುನಿಸುವ್ರತನನ್ನು ಸ್ತುತಿಸಿ ಬಳಿಕ ಸಿದ್ಧಾದಿಗಳನ್ನೂ ವೀರಸೇನ, ಜಿನಸೇನ, ಸಿಂಹನಂದಿ, ಕೊಂಡಕುಂದ, ಸಮಂತPage Navigation
1 ... 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 ... 536