Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore

View full book text
Previous | Next

Page 191
________________ (७) सप्तभाषी आत्मसिद्धि 149 SAPTABHASHI ATMASIDDHI ಏಮ್ ವಿಚಾರೀ ಅಂತರೇ, ಶೋಧೀ ಸದ್ಗುರು ಯೋಗ್ | ಕಾಮ್ ಏಕ್ ಆತಾರ್ಥನುಂ, ಬೀಜೋ ನಹಿ ಮನ್ರೋಗ್113711 ಈ ಪ್ರಕಾರ ಮನಸ್ಸಿನಲ್ಲಿ ವಿಚಾರಮಾಡಿ ಯಾವನು ಸದ್ಗುರು ಸಮಾಗಮದ ಶೋಧವನ್ನು ಮಾಡುತ್ತಾನೋ ಮತ್ತು ಕೇವಲ ಆತ್ಮಾರ್ಥವನ್ನೇ ಬಯಸುತ್ತಾನೋ, ಮಾನ-ಪೂಜೆ, ಋದ್ದಿ-ಸಿದ್ದಿ ಮೊದಲಾದುವುಗಳನ್ನು ಇಚ್ಚಿಸುವುದಿಲ್ಲವೋ ಈ ಮಾನಾದಿಗಳ ರೋಗವು ಯಾರ ಮನಸ್ಸಿನಲ್ಲಿ ಇಲ್ಲವೋ ಕಷಾಯ್ನೀ ಉಪ್ಶಾಂತ್‌ತಾ, ಮಾತ್ರಮೋಕ್ಷ ಅಭಿಲಾಷ್ | ಭವೇ ಖೇದ್, ಪ್ರಾಣಿದಯಾ, ತ್ಯಾಂ ಆತ್ಮಾರ್ಥ್ ನಿವಾಸ್ II38ll ಯಾರಲ್ಲಿ ಕಷಾಯಗಳು ಕೃಶವಾಗಿವೆಯೋ ಕೇವಲ ಒಂದು ಮೋಕ್ಷ ಪದವನ್ನು ಬಿಟ್ಟು ಇನ್ನಾವ ಪದದ ಅಭಿಲಾಷೆಯೂ ಇಲ್ಲವೋ, ಸಂಸಾರದಲ್ಲಿ ವೈರಾಗ್ಯವೂ ಪ್ರಾಣಿಗಳಲ್ಲಿ ದಯೆಯೂ ಇದೆಯೋ ಇಂಥ ಜೀವನಲ್ಲಿ ಆತ್ಮಾರ್ಥದ ನಿವಾಸವಿದೆ. ದಶಾ ನ ಏವೀ ಟ್ಯಾಂ ಸುಧೀ, ಜೀವ್ ಲಹೇ ನಹಿ ಜೋಗ್ | ಮೋಕ್ಷಮಾರ್ಗ್ ಪಾಮೇ ನಹೀ, ಮಟೇ ನ ಅಂತರ್ ರೋಗ್ ||39|| ಎಲ್ಲಿಯವರೆಗೆ ಇ೦ಥ ಯೋಗಸ್ಥಿತಿಯನ್ನು ಜೀವನು ಹೊಂದುವುದಿಲ್ಲವೋ ಅಲ್ಲಿಯವರೆಗೆ ಅವನಿಗೆ ಮೋಕ್ಷಮಾರ್ಗವು ಪ್ರಾಪ್ತಿಯಾಗುವುದಿಲ್ಲ. ಅಲ್ಲದೆ ಆತ್ಮಭ್ರಾಂತಿರೂಪದಲ್ಲಿರುವ ಅನಂತ ದುಃಖದ ಹೇತುವೆನಿಸುವ ಆಂತರರೋಗವು ನಾಶವಾಗುವುದಿಲ್ಲ, ಆವೇ ಜ್ಯಾಂ ಏವೀ ದಶಾ, ಸದ್ಗುರುಬೋದ್ ಸುಹಾಯ್ || ತೇ ಬೋಧೇ ಸುವಿಚಾರ್ಣಾ, ತ್ಯಾಂ ಪ್ರಗಟೇ ಸುಖ್ ದಾಯ್ Idoll ಎಲ್ಲಿ ಇಂಥ ದಶೆಯು ಇರುವುದೋ ಅಲ್ಲಿ ಸದ್ಗುರುವಿನ ಬೋಧನೆ ಶೋಭಿಸುತ್ತದೆ. ಅದು ಅಲ್ಲಿ ಪರಿಣಾಮವಾಗುತ್ತದೆ. ಆ ಜ್ಞಾನದ ಪರಿಣಾಮದಿಂದ ಸುಖದಾಯಕವಾದ ಸುವಿಚಾರಸ್ಥಿತಿಯು ಪ್ರಕಟವಾಗುತ್ತದೆ. ಜ್ಞಾ ಪ್ರಗಟೇ ಸುವಿಚಾರಣಾ, ತ್ಯಾಂ ಪ್ರಗಟೇ ನಿಜ್ಜ್ಞಾಅನ್ | ಜೇ ಜ್ಞಾನೇ ಕ್ಷಯ್ ಮೋಡ್ ಥಈ, ಪಾಮೇ ಪದ್ ನಿರ್ವಾಣ್ I1411 ಎಲ್ಲಿ ಸುವಿಚಾರ ಸ್ಥಿತಿಯು ಪ್ರಕಟವಾಗುವುದೋ ಅಲ್ಲಿ ಆತ್ಮಜ್ಞಾನವು ಉತ್ಪನ್ನವಾಗುವುದು. ಆ ಜ್ಞಾನದಿಂದ ಮೋಹವನ್ನು ಕ್ಷಯಗೊಳಿಸಿ ಆತ್ಮನು ನಿರ್ವಾಣಪದವನ್ನು ಹೊಂದುತ್ತಾನೆ. ಉಪಜೇ ತೇ ಸುವಿಚಾರಣಾ, ಮೋಕ್ಷಮಾರ್ಗ್ ಸಮ್ಜಾಯ್ | ಗುರು ಶಿಷ್ಯ ಸಂವಾದಥೀ, ಭಾಖಂ ಷಟ್ಟದ್ ಆಂಹಿ |4211 ಯಾವುದರಿಂದ ಸುವಿಚಾರ ಸ್ಥಿತಿಯು ಪ್ರಾಪ್ತವಾಗುತ್ತದೆಯೋ ಮತ್ತು ಮೋಕ್ಷಮಾರ್ಗವು ತಿಳಿದುಬರುತ್ತದೆಯೋ ಆ ವಿಷಯವನ್ನು ಇಲ್ಲಿ ಷಟ್ಪದರೂಪದಿಂದ ಗುರುಶಿಷ್ಯರ ಸಂವಾದಕ್ರಮದಲ್ಲಿ ಹೇಳುತ್ತೇನೆ. ಪಟ್ಟದ ನಾಮಕಥನ : “ ಆತ್ಮಾ ಛೇ” “ತೇ ನಿತ್ಯ ಛೇ”, “ಛೇ ಕರ್ತಾ ನಿಜ್ಕರ್ಮ್" ; “ ಛೇ ಭೋಕ್ತಾ' ವಳೀ “ ಮೋಕ್ಷ ಛೇ” , “ಮೋಕ್ಷ ಉಪಾಯ್ ಸುಧರ್ಮ್" [43|| “ಆತ್ಮನು ಇದ್ದಾನೆ.” “ಆ ಆತ್ಮನು ನಿತ್ಯವಾಗಿದ್ದಾನೆ.' “ಆತ್ಮನು ತನ್ನ ಕರ್ಮದ ಕರ್ತೃವಾಗಿದ್ದಾನೆ', "ಅವನು ಕರ್ಮದ ಭೋಕ್ತವಾಗಿದ್ದಾನೆ'. * ಅವನಿಗೆ ಕರ್ಮದಿಂದ ಮೋಕ್ಷವಾಗುತ್ತದೆ' . " ಆ ಮೋಕ್ಷದ ಉಪಾಯವಾದ ಸದ್ದರ್ಮವಿದೆ'. • ಇTROJINA-BHARATIC Jain Education Intemational 2010_04 For Private & Personal Use Only www.jainelibrary.org

Loading...

Page Navigation
1 ... 189 190 191 192 193 194 195 196 197 198 199 200 201 202 203 204 205 206 207 208 209 210 211 212 213 214 215 216 217 218 219 220 221 222 223 224 225 226