Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore

View full book text
Previous | Next

Page 203
________________ (७) सप्तभाषी आत्मसिद्धि 161 SAPTABHASHI ATMASIDDHI ಕರ್ಮ್ಬಂಧ ಕ್ರೋಧಾದಿಥೀ, ಹಣೇ ಕ್ಷಮಾದಿಕ್ ತೇಜ್ | ಪ್ರತ್ಯಕ್ ಅನುಭವ್ ಸರ್ವ್ನೇ , ಏಮಾಂ ಶೋ ಸಂದೇಹ್ ? ||104I ಕ್ರೋಧಾದಿ ಭಾವಗಳಿಂದ ಕರ್ಮಬಂಧವು ಆಗುತ್ತದೆ. ಹಾಗೆಯೇ ಕ್ಷಮೆಯೇ ಮೊದಲಾದವುಗಳಿಂದ ಅದರ ನಾಶವಾಗುತ್ತದೆ. ಅರ್ಥಾತ್ ಕ್ಷಮೆಯನ್ನು ಧಾರಣೆಮಾಡುವುದರಿಂದ ಕ್ರೋಧವು ತಡೆಯಲ್ಪಡುತ್ತದೆ. ಸರಳತೆಯಿಂದ ಮಾಯೆಯು ತಡೆಯಲ್ಪಡುತ್ತದೆ. ಸಂತೋಷದಿಂದ ಲೋಭವು ತಡೆಯಲ್ಪಡುತ್ತದೆ. ಇದೇ ರೀತಿಯಲ್ಲಿ ರತಿ ಆರತಿ ಮೊದಲಾದುವುಗಳ ಪ್ರತಿಪಕ್ಷ ಇವೆಲ್ಲವುಗಳನ್ನು ತಡೆಯಬಹುದು. ಇದೇ ಕರ್ಮಬಂಧದ ನಿರೋಧವಾಗಿದೆ. ಅದೇ ಅದರ ನಿವೃತ್ತಿಯಾಗಿದೆ. ಈ ಮಾತಿನ ಪ್ರತ್ಯಕ್ಷ ಅನುಭವವು ಎಲ್ಲರಿಗೂ ಇದೆ ಅಥವಾ ಇದು ಎಲ್ಲರೂ ಅನುಭವಿಸುವಂಥದಾಗಿದೆ. ಕ್ರೋಧಾದಿಗಳನ್ನು ತಡೆದರೆ ತಡೆಯಬಹುದು. ಇವು ಕರ್ಮಬಂಧವನ್ನು ತಡೆಯುತ್ತದೆ. ಇವು ಅಕರ್ಮದೆಶೆಯ ಮಾರ್ಗವಾಗಿವೆ. ಈ ಮಾರ್ಗಗಳು ಪರಲೋಕದಲ್ಲಿ ಅಲ್ಲ, ಇಲ್ಲಿಯೇ ಅನುಭವಕ್ಕೆ ಬರುತ್ತವೆ. ಆದ್ದರಿಂದ ಇದರಲ್ಲಿ ಏಕೆ ಸಂದೇಹ ಮಾಡಬೇಕು ? ಛೋಡೀ ಮತ್ ದರ್ಶನ್ ತಗೋ, ಆಗ್ರಹ್ ತೇಮ್ ವಿಕಲ್ಸ್ | ಕಹೋ ಮಾರ್ಗ್ ಆ ಸಾಥ್ಶೇ, ಜನ್ಸ್ ತೇಹ್ ನಾ ಅಲ್ಫ್ II1091 ಇದು ನನ್ನ ಮತವಾಗಿದೆ. ಆದ್ದರಿಂದ ನಾನು ನನ್ನ ಮತವನ್ನು ಅನುಸರಿಸಲೇಬೇಕು. ಇದು ನನ್ನ ದರ್ಶನವಾಗಿದೆ. ಆದ್ದರಿಂದ ಏನೇ ಬರಲಿ ಯಾವುದೇ ರೀತಿಯಿಂದ ಇದನ್ನು ಸಿದ್ದ ಮಾಡಲೇಬೇಕು. ಇಂಥ ಆಗ್ರಹ ಅಥವಾ ವಿಕಲ್ಪವನ್ನು ಬಿಟ್ಟು ಮೇಲೆ ಹೇಳಿದ ಮಾರ್ಗದ ಸಾಧನೆಯನ್ನು ಯಾರು ಮಾಡುವರೋ ಅವರಿಗೆ ಇನ್ನು ಕೆಲವೇ ಜನ್ಯಗಳು ಉಳಿದಿವೆಯೆಂದು ತಿಳಿಯಬೇಕು. ಷಟ್ಪದ್ನಾಂ ಷಟ್ಪ್ರಶ್ನೆ ತೇಂ, ಪೂಲ್ಯಾಂ ಕರೀ ವಿಚಾರ್ | ತೇ ಪದ್ನೀ ಸರ್ವಾಂಗ್ತಾ, ಮೋಕ್ಷಮಾರ್ಗ್ ನಿರ್ಧಾರ್ 111061 ಎಲೈ ಶಿಷ್ಯನೇ ! ನೀನು ವಿಚಾರಮಾಡಿ ಆರು ಪದಗಳ ಆರು ಪ್ರಶ್ನೆಗಳನ್ನು ಕೇಳಿರುವೆಯೋ ಆ ಪದಗಳ ಸರ್ವಾಂಗ ರೂಪದಲ್ಲಿ ಮೋಕ್ಷಮಾರ್ಗವಿದೆ ಎಂದು ನಿಶ್ಚಯವಾಗಿ ತಿಳಿ. ಇವುಗಳಲ್ಲಿ ಯಾವ ಪದವನ್ನು ಏಕಾಂತದಿಂದ ಅಥವಾ ಅವಿಚಾರದಿಂದ ಉತ್ಥಾನ ಮಾಡುವುದರಿಂದ ಮೋಕ್ಷಮಾರ್ಗವು ಸಿದ್ದವಾಗುವುದಿಲ್ಲ - ಜಾತಿ ವೇಷ್ನೋ ಭೇದ್ ನಹಿ, ಕಹೋ ಮಾರ್ಗ್ ಜೋ ಹೋಮ್ | ಸಾಧೇ ತೇ ಮುಕ್ತಿಲಹೇ, ಏಮಾಂ ಭೇದ್ ನ ಕೋಯ್ Il1071 ಯಾವುದನ್ನು ಮೋಕ್ಷಮಾರ್ಗವೆಂದೂ ಹೇಳಿದೆಯೋ ಅದನ್ನು ಸಾಧಿಸಿದರೆ ಯಾವ ಜಾತಿ ಅಥವಾ ವೇಷವುಳ್ಳವನಿಗೂ ಸಹ ಮುಕ್ತಿಯು ಲಭಿಸುತ್ತದೆ. ಇದರಲ್ಲಿ ಯಾವ ಭೇದವೂ ಇಲ್ಲ. ಯಾರು ಇದನ್ನು ಸಾಧಿಸುತ್ತಾರೋ ಅವರು ಮೋಕ್ಷಪದವನ್ನು ಹೊಂದುವರು. ಅಲ್ಲದೆ ಈ ಮೋಕ್ಷಪದದಲ್ಲಿ ಬೇರೆ ಯಾವ ಉಚ್ಚ ನೀಚಾದಿ ಭೇದಗಳಿಲ್ಲ ಅಥವಾ ಇಲ್ಲಿ ಹೇಳಿದ ವಚನಗಳಲ್ಲಿಯೂ ಇನ್ನಾವ ಹೆಚ್ಚು ಕಡಿಮೆಯೂ ಕಷಾಯ್ನೀ ಉಪ್ಶಾಂತತಾ, ಮಾತ್ ಮೋಸ್ಟ್ ಅಭಿಲಾಷ್ | ಭವೇ ಖೇದ್ ಅಂತರ್ ದಯಾ, ತೇ ಕಹಿಯೇ ಜಿಜ್ಞಾಸ್ 11108 ಯಾರ ಕ್ರೋಧಾದಿ ಕಷಾಯಗಳು ಮಂದವಾಗಿವೆಯೋ, ಆತನಲ್ಲಿ ಮೋಕ್ಷವನ್ನುಳಿದು ಇನ್ನಾವ ಬೇರೆ ಅಪೇಕ್ಷೆಯು ಇರುವುದಿಲ್ಲವೋ, ಸಂಸಾರದ ಭೋಗಗಳ ವಿಷಯದಲ್ಲಿ ಯಾರ ಅಂತರಂಗದಲ್ಲಿ ದಯೆಯು ಇರುವುದೋ, ಇಂಥ ಜೀವಗಳಿಗೆ ಮೋಕ್ಷಮಾರ್ಗದ ಜಿಜ್ಞಾಸುಗಳೆಂದು ಹೇಳುತ್ತಾರೆ ಅರ್ಥಾತ್ ಇಂಥ ಜೀವಗಳೇ ಮೋಕ್ಷಮಾರ್ಗವನ್ನು ಹೊಂದಲು ಯೋಗ್ಯರಾಗಿದ್ದಾರೆ. ತೇ ಜಿಜ್ಞಾಸು ಜೀವ್ನೇ, ಥಾಯ್ ಸದ್ಗುರು ಬೋರ್ | ತೋ ಪಾಮೇ ಸಮ್ಕಿತ್ತೇ, ವರ್ತೆ ಅಂತರ್ ಶೋರ್ 1109/ ಇಂಥ ಜಿಜ್ಞಾಸು ಜೀವಗಳಿಗೆ ಸದ್ಗುರುವಿನ ಉಪದೇಶವು ಲಭಿಸಿದರೆ ಅವರು ಸಮಕೀತವನ್ನು ಹೊಂದುತ್ತಾರೆ. ಮತ್ತು ಆಂತರಿಕ ಶೋಧನೆಯಲ್ಲಿ ತೊಡಗುತ್ತಾರೆ. • for JINA-BHARATI • Jain Education Intemational 2010_04 For Private & Personal Use Only www.jainelibrary.org

Loading...

Page Navigation
1 ... 201 202 203 204 205 206 207 208 209 210 211 212 213 214 215 216 217 218 219 220 221 222 223 224 225 226