Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore

View full book text
Previous | Next

Page 206
________________ (७) सप्तभाषी आत्मसिद्धि 164 SAPTABHASHI ATMASIDDHI ಅಹೋ ! ಅಹೋ ! ಶ್ರೀ ಸದ್ಗುರು ! ಕರುಣಾಸಿಂಧು ಅಪಾರ್ | ಆ ಪಾಮರ್ ಪರ್ ಪ್ರಭು ಕರ್ಯೋ | ಅಹೋ ! ಅಹೋ ! ಉಪ್ಕಾರ್ |11241 ಎಲ್ಲೆ! ಎಲೈ ! ಅಪಾರ ಕರುಣಾಕರನೇ, ಕರುಣಾ ಸಾಗರನೇ, ಆತ್ಮ ಲಕ್ಷಿಯಿಂದ ಕೂಡಿದ ಸದ್ಗುರುವೇ ! ತಾವು ಇಂಥ ಪಾಮರ ಜೀವನ ಮೇಲೆ ಆಶ್ಚರ್ಯಕರವಾದ ಉಪಕಾರವನ್ನು ಮಾಡಿರುವಿರಿ. - ಶುಂ ಪ್ರಭು ಚರಣ್ ಕನೇ ಧರುಂ, ಆತ್ಮಾಥೀ ಸೌ ಹೀನ್ | ತೇ ತೋ ಪ್ರಭು ಏ ಆಪಿಯೊ, ವರ್ತುಂ ಚರಣಾಧೀನ್ 111291 ನಾನು ಸದ್ಗುರುಗಳ ಚರಣಸನ್ನಿಧಿಯಲ್ಲಿ ಏನನ್ನು ಅಗ್ನಿಸಲಿ ?(ಸದ್ಗುರುವಂತೂ ಪರಮ ನಿಷ್ಕಾಮನು, ಕೇವಲ ನಿಷ್ಕಾಮ ಕರುಣೆಯಿಂದಲೇ ಉಪದೇಶವನ್ನು ಕೊಡುವಂಥವರು. ಆದರೆ ಶಿಷ್ಯನು ಶಿಷ್ಟಧರ್ಮವನ್ನನುಸರಿಸಿ ಈ ಮಾತುಗಳನ್ನು ಹೇಳಿದ್ದಾನೆ.) ಜಗತ್ತಿನಲ್ಲಿರುವ ಎಲ್ಲ ಪದಾರ್ಥಗಳೂ ಆತನ ಅಪೇಕ್ಷೆಯಿಂದ ಬೆಲೆಯಿಲ್ಲದವುಗಳಾಗಿವೆ. ಆದ್ದರಿಂದ ಅಂಥ ಆತನನ್ನೇ ಧಾರಣ ಮಾಡಿದವರ ಪಾದಗಳ ಸಮೀಪದಲ್ಲಿ ನಾನು ಬೇರೆ ಯಾವ ಕಾಣಿಕೆಯನ್ನು ಸಲ್ಲಿಸಲಿ?ಕೇವಲ ಉಪಚಾರಕ್ಕಾಗಿ ಇಷ್ಟನ್ನು ಮಾಡಲು ಸಮರ್ಥನಾಗಿರುವೆನು ಅಂದರೆ ನಾನು ಸದ್ಗುರುವಿನ ಚರಣಗಳ ಆಶ್ರಯದಲ್ಲಿಯೇ ಇರುವೆನು. ಆ ದೇಹಾದಿ ಆಜ್ ಥೀ, ವರ್ತೊ ಪ್ರಭು ಆಧೀನ್ | ದಾಸ್, ದಾಸ್, ಹುಂ ದಾಸ್ ಭುಂ, ತೇಹ್ ಪ್ರಭೂನೋ ದೀನ್ Il1261 ಈ ದೇಹಾದಿ ಶಬ್ದಗಳಿಂದ ಯಾವುದನ್ನು ನನ್ನದು ಎಂದು ತಿಳಿಯಲಾಗುವುದೋ ಅದೆಲ್ಲವೂ ಇಂದಿನಿಂದ ಸದ್ಗುರುವಿನ ಅಧೀನವಾಗಿದೆ. ನಾನು ಈ ಪ್ರಭುವಿನ ದಾಸನಾಗಿರುವೆ, ದೀನ ದಾಸನಾಗಿರುವೆ. ಪಟ್ ಸ್ಥಾನಕ್ ಸಮ್ಜಾವೀನೇ, ಭಿನ್ನ ಬತಾವೋ ಆಪ್ | ಮ್ಯಾನ್ ಫಕೀ ತ‌ವಾರ್‌ವತ್, ಏ ಉಪ್ಕಾರ್ ಅಮಾಪ್ 111271 ಎಲೈ ಸದ್ಗುರುವೇ ! ಆರು ಸ್ಥಾನಗಳ ತಿಳುವಳಿಕೆಯನ್ನು ಮಾಡಿಕೊಟ್ಟಿರುವಿರಿ. ಒರೆಯಿಂದ ಖಡ್ಗವನ್ನು ಹೊರಗೆ ತೆಗೆದು ತೋರಿಸುವಂತೆ ನಮ್ಮ ದೇಹಾದಿಗಳಿಂದ ಆತ್ಮನು ಭಿನ್ನ ಎಂದು ಸ್ಪಷ್ಟವಾಗಿ ಹೇಳಿದಿರಿ. ಇದರಿಂದ ನೀವು ನನ್ನ ಮೇಲೆ ಅಪಾರ ಉಪಕಾರವನ್ನು ಮಾಡಿರುವಿರಿ. ಉಪಸಂಹಾರ : ದರ್ಶನ್ ಪಟೇ ಸಮಾಮ್ ಛೇ, ಆ ಷಟ್ ಸ್ಥಾನಕ್ ಮಾಂಹೀ | ವಿಚಾರ್‌ತಾಂ ವಿಸ್ತಾರ್ ಥೀ, ಸಂಶಮ್ ರಹೇ ನ ಕಾಂತ್ |11281 ಆರು ದರ್ಶನಗಳು ಈ ಆರು ಸ್ಥಾನಗಳಲ್ಲಿ ಸಮಾವೇಶವಾಗುತ್ತವೆ. ಇದನ್ನು ವಿಶೇಷವಾಗಿ ವಿಚಾರಮಾಡುವುದರಿಂದ ಇದರಲ್ಲಿ ಯಾವ ಪ್ರಕಾರವಾದ ಸಂಶಯವೂ ಉಳಿಯುವುದಿಲ್ಲ, ಆತ್ಮಭ್ರಾಂತಿ ಸಮ್ ರೋಗ್ ನಹಿ, ಸದ್ಗುರು ವೈದ್ಯ ಸುಜಾಣ್ | - ಗುರು ಆಜ್ಞಾಸಮ್ ಪಥ್ ನಹಿ, ಔಷಧ ವಿಚಾರ್ ಧ್ಯಾನ್ 11 291 ಆತ್ಮನು ತನ್ನ ಸ್ವರೂಪವನ್ನು ತಾನು ಮರೆಯುವುದಕ್ಕಿಂತ ಹೆಚ್ಚಿನ ರೋಗವು ಇನ್ನಾವುದೂ ಇಲ್ಲ. ಅದಕ್ಕೆ ಸದ್ಗುರುವಿನಂಥ ಯೋಗ್ಯ ವೈದ್ಯನು ಬೇರೊಬ್ಬನಿಲ್ಲ. ಸದ್ಗುರುವಿನ ಆಜ್ಞೆಯಂತೆ ನಡೆಯುವುದಕ್ಕೆ ಸಮಾನವಾದ ಪಥ್ಯವು ಇನ್ನೊಂದಿಲ್ಲ. ವಿಚಾರ ಹಾಗೂ ನಿದಿಧ್ಯಾಸನಕ್ಕೆ ಸಮಾನವಾದ ಬೇರೆ ಯಾವ ಔಷಧಿಯೂ ಅದಕ್ಕೆ ಇಲ್ಲ. ಜೋ ಇಷ್ಟೋ ಪರ್‌ ಮಾರ್ಫ್ ತೋ, ಕರೋ ಸತ್ಯ ಪುರುಷಾರ್ಥ್ ಭವ್‌ ಸ್ಥಿತಿ ಆದಿ ನಾಮ್ ಲಈ, ಛೇದೋ ನಹಿ ಆತ್ಕಾರ್ಫ್ II1 3al ನೀನು ನಿಜವಾಗಿಯೂ ಪರಮಾರ್ಥದ ಇಚ್ಛೆಯನ್ನು ಮಾಡುವುದಾದರೆ ಯೋಗ್ಯ ಪುರುಷಾರ್ಥವನ್ನು ಮಾಡು. ಭವಸ್ಥಿತಿ ಮೊದಲಾದವುಗಳ ಹೆಸರನ್ನು ತಕ್ಕೊಂಡು ಆತ್ಮಾರ್ಥದ ಛೇದನವನ್ನು ಮಾಡಬೇಡ. 0 HIROJINA-BHARATIC Jain Education Intemational 2010_04 For Private & Personal Use Only www.jainelibrary.org

Loading...

Page Navigation
1 ... 204 205 206 207 208 209 210 211 212 213 214 215 216 217 218 219 220 221 222 223 224 225 226