Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore

View full book text
Previous | Next

Page 207
________________ सप्तभाषी आत्मसिद्धि 165 SAPTABHASHI ATMASIDDHI ನಿಶ್ಚಯ್ ವಾಣೀ ಸಾಂಬ್‌ಳೀ, ಸಾಧನ್ ತಜ್ಞಾಂ ನೋಯ್ | ನಿಶ್ಚಯ್ ರಾಖೀ ಲಕ್ಷ ಮಾಂ, ಸಾಧನ್ ಕರ್‌ಾಂ ಸೋಯ್ ಆತ್ಮನು ಅಬಂಧನು, ಅಸಂಗನು, ಸಿದ್ಧನು. ಈ ನಿಶ್ಚಯನಯ ಮುಖ್ಯ ಮಾತುಗಳನ್ನು ಕೇಳಿ ಸಾಧನಗಳನ್ನು ತ್ಯಾಗಮಾಡುವುದು ಯೋಗ್ಯವಲ್ಲ. ಅದರ ಅಂತಹ ನಿಶ್ಚಯವನ್ನು ಲಕ್ಷದಲ್ಲಿಟ್ಟು ಸಾಧನೆಯನ್ನು ಮಾಡಿ ನಿಶ್ಚಯಸ್ವರೂಪವನ್ನು ಪಡೆಯಬೇಕು. ನಯ್ ನಿಶ್ಚಯ್ ಏಕಾಂತ್ , ಆಮಾಂ ನಥೀ ಕಹೇಲ್ | ಏಕಾಂತೇ ವ್ಯವಹಾರ್ ನಹಿ, ಬನ್ನೇ ಸಾಥ್ ರಹೇಲ್ Jain Education International 2010_04 ಇಲ್ಲಿ ಏಕಾಂತದೃಷ್ಟಿಯಿಂದ ನಿಶ್ಚಯನಯವನ್ನು ಹೇಳಿಲ್ಲ. ಹಾಗೆಯೇ ಏಕಾಂತದೃಷ್ಟಿಯಿಂದ ವ್ಯವಹಾರನಯವನ್ನೂ ಹೇಳಿಲ್ಲ. ಎರಡೂ, ಎಲ್ಲೆಲ್ಲಿ ಹೇಗೆ ಹೇಗೆ ಸಂಭವಿಸುತ್ತವೆಯೋ ಅದೇ ರೀತಿ ಜೊತೆಯಾಗಿ ಇರುತ್ತವೆ. II1 3 1II ಗಚ್ಛಮತ್‌ನೀ ಚೇ ಕಲ್ಪನಾ, ತೇ ನಹಿ ಸದೈವ್ಯವಹಾರ್ | ಭಾನ್ ನಹೀಂ ನಿರೂನುಂ, ತೇ ನಿಶ್ಚಯ್ ನಹಿ ಸಾರ್ II1 3311 ಗಚ್ಛ, ಮತದ ಕಲ್ಪನೆಯು ಸವ್ಯವಹಾರವಾಗಿಲ್ಲ. ಆದರೆ ಆತ್ಮಾರ್ಥಿಯ ಲಕ್ಷಣದಲ್ಲಿ ಹೇಳಿರುವ ಸ್ಥಿತಿ, ಮೋಕ್ಷದ ಉಪಾಯದಲ್ಲಿ ಜಿಜ್ಞಾಸುವಿನ ಲಕ್ಷಣ ಮೊದಲಾದವುಗಳನ್ನು ಹೇಳಿದೆ. ಅದು ಸದ್ ವ್ಯವಹಾರವಾಗಿದೆ. ಅದನ್ನು ಇಲ್ಲಿ ಸಂಗ್ರಹವಾಗಿ ಹೇಳಿದೆ. ಜೀವನಿಗೆ ತನ್ನ ನಿಜಸ್ವರೂಪದ ಅನುಭವವಿರುವುದಿಲ್ಲ. ದೇಹದ ಅನುಭವ ಮಾತ್ರ ಇರುತ್ತದೆ. ಅದೇ ಪ್ರಕಾರ ಆತ್ಮನ ಅನುಭವಂತೂ ಇಲ್ಲ. ದೇಹಾಧ್ಯಾಸ ಮಾತ್ರವಿದೆ ಮತ್ತು ವೈರಾಗ್ಯ ಮೊದಲಾದ ಸಾಧನಗಳನ್ನು ಪ್ರಾಪ್ತ ಮಾಡಿಕೊಳ್ಳದೆ ” ನಿಶ್ಚಯ-ನಿಶ್ಚಯ'' ಎಂದು ಚೀರುತ್ತಾರೆ. ಆದರೆ ಇಂಥ ನಿಶ್ಚಯವು ಸಾರಭೂತವೆನಿಸುವುದಿಲ್ಲ. 1113211 ಆಗಳ್ ಜ್ಞಾನೀ ಥಈ ಗಯಾ, ವರ್ತಮಾನ್‌ಾಂ ಹೋಯ್ | ಥಾಶೇ ಕಾಳ್ ಭವಿಷ್ಯಮಾಂ, ಮಾರ್ಗ್ ಭೇದ್ ನಹಿ ಕೋಯ್ 113411 ಹಿಂದಿನ ಕಾಲದಲ್ಲಿ ಆದ ಜ್ಞಾನಿಪುರುಷರು, ವರ್ತಮಾನ ಕಾಲದಲ್ಲಿ ಇರುವಂಥ ಜ್ಞಾನಿಪುರುಷರು, ಭವಿಷ್ಯತ್‌ ಕಾಲದಲ್ಲಿ ಆಗುವಂಥ ಜ್ಞಾನಿಗಳು ಇವರೆಲ್ಲರ ಮಾರ್ಗದಲ್ಲಿ ಯಾವ ಅಂತರವೂ ಇಲ್ಲ. ಪರಮಾರ್ಥದೃಷ್ಟಿಯಿಂದ ಇವರೆಲ್ಲರ ಮಾರ್ಗವೂ ಒಂದೇ ಆಗಿದೆ. ಒಂದು ವೇಳೆ ಅದನ್ನು ಪಡೆಯುವುದಕ್ಕಾಗಿ ಮಾಡುವ ವ್ಯವಹಾರ, ಅದೇ ಪರಮಾರ್ಥದ ಸಾಧಕ ರೂಪದಲ್ಲಿರುವುದರಿಂದ ದೇಶಕಾಲಾದಿಗಳಿಂದ ಭಿನ್ನವಾಗಿ ಹೇಳಿದಂತೆ ಕಂಡರೂ ಅವೆಲ್ಲವೂ ಒಂದೇ ಫಲವನ್ನು ಉತ್ಪನ್ನ ಮಾಡುವುದರಿಂದ ಅವುಗಳಲ್ಲಿ ಪರಮಾರ್ಥದೃಷ್ಟಿಯಿಂದ ಭೇದವಿಲ್ಲ. ಸರ್ವ್ ಜೀವ್ ಛೇ ಸಿದ್ ಸಮ್, ಜೇ ಸಮ್ಜೇ ತೇ ಥಾಮ್ | जिनभारती ಸದ್ಗುರು ಆಜ್ಞಾಜಿನ್‌ನಾ, ನಿಮಿತ್ ಕಾರಣ್ ಮಾಂಯ್ ||13511 ಎಲ್ಲ ಜೀವರಲ್ಲಿಯೂ ಸಿದ್ದಸತ್ತೆಯು ಸಮಾನವಾಗಿದೆ. ಅದು ಯಾರಿಗೆ ಪ್ರಕಟವಾಗುತ್ತದೆಯೋ ಅವರಿಗೇ ತಿಳಿಯುತ್ತದೆ. ಅದನ್ನು ಪ್ರಕಟ ಮಾಡಿಕೊಳ್ಳುವುದಕ್ಕಾಗಿ ಸದ್ಗುರುವಿನ ಆಜ್ಞೆಯಂತೆ ಪ್ರವೃತ್ತಿ ಮಾಡಬೇಕು. ಸದ್ಗುರುವು ಉಪದೇಶ ಮಾಡಿದ ಜಿನೇಂದ್ರ ಸ್ಥಿತಿ ದಶೆಯನ್ನು ವಿಚಾರ ಮಾಡಬೇಕು. ಇವೆರಡೂ ನಿಮಿತ್ತ ಕಾರಣವಾಗಿವೆ. ಉಪಾದಾನ್‌ನುಂ ನಾಮ್ ಲಈ, ಏ ಜೇ ತಜೇ ನಿಮಿತ್ ಪಾಮೇ ನಹಿ ಸಿದ್ಧತ್ವನೇ, ರಹೇ ಭ್ರಾಂತಿಮಾಂ ಸ್ಥಿತ್ II1 3611 ಸದ್ಗುರುವಿನ ಆಜ್ಞೆ ಮೊದಲಾದವುಗಳು ಆತ್ಮ ಸಾಧನೆಗೆ ನಿಮಿತ್ತ ಕಾರಣಗಳಾಗಿವೆ. ಆತ್ಮನ ಜ್ಞಾನದರ್ಶನ ಮೊದಲಾದವುಗಳು ಅದರ ಉಪಾದಾನ ಕಾರಣಗಳಾಗಿವೆ. ಹೀಗೆ ಶಾಸ್ತ್ರದಲ್ಲಿ ಹೇಳಿದೆ. ಆದ್ದರಿಂದ ಯಾವನು ಉಪಾದಾನಗಳ ಹೆಸರನ್ನು ನಿಮಿತ್ತಮಾಡಿಕೊಂಡು ಉಳಿದ ನಿಮಿತ್ತಗಳನ್ನು ತ್ಯಾಗ ಮಾಡುವನೋ ಅವನು ಸಿದ್ಧತ್ವಗಳನ್ನು ಹೊಂದಲಾರನು. ಅವನು ಭ್ರಾಂತಿಯಲ್ಲಿಯೇ ಉಳಿದು ಬಿಡುವನು. ಯಾಕೆಂದರೆ ಶಾಸ್ತ್ರದಲ್ಲಿ ಆ ಉಪಾದಾನಗಳ ವ್ಯಾಖ್ಯೆಯ ಒಳ್ಳೆಯ ನಿಮಿತ್ತಗಳನ್ನು ನಿಷೇಧ ಮಾಡಿಲಿಕ್ಕೆಂದು ಇಲ್ಲ. ಆದರೆ ಶಾಸ್ತ್ರದಲ್ಲಿ ಹೇಳಿದ ಪರಮಾರ್ಥವು ಇಷ್ಟೇ ಆಗಿದೆ. ಉಪಾದಾನಗಳನ್ನು ಅಜಾಗೃತವಾಗಿ ಇಟ್ಟಲ್ಲಿ ಒಳ್ಳೆಯ ನಿಮಿತ್ತಗಳು ದೊರೆತರೂ ಕೂಡ ಕಾರವು ಆಗದು. ಆದ್ದರಿಂದ ಒಳ್ಳೆಯ ನಿಮಿತ್ತಗಳು ಲಭಿಸಿದಲ್ಲಿ ಆ ನಿಮಿತ್ತಗಳ ಅವಲಂಬನವನ್ನು ಹೊಂದಿ ಉಪಾದಾನಗಳನ್ನು ಸಾಧಿಸಬೇಕು ಅಲ್ಲದೆ ಪುರಷಾರ್ಥಹೀನನಾಗಕೂಡದು. JINA-BHARATI For Private & Personal Use Only www.jainelibrary.org

Loading...

Page Navigation
1 ... 205 206 207 208 209 210 211 212 213 214 215 216 217 218 219 220 221 222 223 224 225 226