Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore
View full book text
________________
(७) सप्तभाषी आत्मसिद्धि
157
SAPTABHASHI ATMASIDDHI
ಝರ್ ಸುಧಾ ಸಮ್ಜೇ ನಹೀಂ, ಜೀವ್ ಖಾಯ್ ಫಳ್ ಥಾಯ್ |
ಏಮ್ ಶುಭಾಶುಭ ಕರ್ಮ್ನುಂ , ಭೋಕ್ತಾಪಣುಂ ಜಣಾಯ್ 118311 ವಿಷ ಹಾಗೂ ಅಮೃತಗಳು ತಾವು ಸ್ವತ: ಜೀವಗಳಿಗೆ ಇಂಥ ಫಲವನ್ನು ಕೊಡುತ್ತೇವೆಂದು ತಿಳಿಯುವುದಿಲ್ಲ. ಆದರೂ ಅವುಗಳನ್ನು ಉಪಯೋಗಿಸಿದ ಜೀವನು ಅದರ ಫಲವನ್ನು ಅನುಭವಿಸುತ್ತಾನೆ. ಇದೇ ಪ್ರಕಾರ ಶುಭಾಶುಭ ಕರ್ಮಗಳು ತಾವು ಸ್ವತಃ ಜೀವಗಳಿಗೆ ಇಂಥ ಫಲಗಳನ್ನು ಕೊಡಬಲ್ಲೆವೆಂದು ತಿಳಿಯದಿದ್ದರೂ ಅವುಗಳನ್ನು ಗ್ರಹಣ ಮಾಡುವ ಜೀವನು ವಿಷ ಹಾಗೂ ಅಮೃತದ ಫಲಗಳನ್ನು ಅನುಭವಿಸುವಂತೆ ಕರ್ಮದ ಫಲಗಳನ್ನು ಹೊಂದುತ್ತಾನೆ.
ಏಕ್ ರಾಂಕ್ ನೇ ಏಕ್ ನೃಪ್, ಏ ಆದಿ ಜೇ ಭೇದ್ |
ಕಾರಣ್ ವಿನಾ ನ ಕಾರ್ಯ್ ತೇ, ತೇಜಶುಭಾಶುಭ್ ವೇಲ್ಸ್ II84I ಒಬ್ಬನು ಬಡವ, ಇನ್ನೊಬ್ಬನು ರಾಜ. ಈ ಪ್ರಕಾರ ನೀಚತೆ - ಉಚ್ಚತೆ - ಕುರೂಪತೆ- ಸುರೂಪತೆ ಮೊದಲಾದ ವಿಚಿತ್ರಗಳು ಕಂಡು ಬರುತ್ತವೆ. ಮತ್ತು ಈ ಪ್ರಕಾರದ ಭೇದಗಳು ಎಲ್ಲರಲ್ಲಿಯೂ ಸಮಾನವಾಗಿರುವುದಿಲ್ಲ. ಯಾಕೆಂದರೆ ಕಾರಣವಿಲ್ಲದೆ ಕಾರ್ಯದ ಉತ್ಪತ್ತಿ ಇಲ್ಲ. ಒಂದು ವೇಳೆಇದು ಶುಭ-ಅಶುಭ ಕರ್ಮಗಳ ಫಲವು ಆಗಿರದಿದ್ದರೆ ಒಬ್ಬರಾಜ, ಇನ್ನೊಬ್ಬ ಬಡವನಾಗಿರುವ ಈ ಭೇದಗಳು ಆಗಲು ಕಾರಣವಿರಲಿಲ್ಲ.
ಫಳ್ ದಾತಾ ಈಶ್ವರ್ ತಣಿ, ಏಮಾಂ ನಥೀ ಜರೂರ್ |
ಕರ್ಮ್ ಸ್ವಭಾವೇ ಪರಿಣ್‌ಮೇ, ಥಾಯ್ ಭೋಗ್ ಥೀ ದೂರ್ 18511 ಫಲಕೊಡುವ ಈಶ್ವರನ ಅವಶ್ಯಕತೆಯು ಇದರಲ್ಲಿ ಏನೂ ಇಲ್ಲ. ವಿಷ ಹಾಗೂ ಅಮೃತದಂತೆ ಶುಭಾಶುಭ ಕರ್ಮಗಳ ಫಲಗಳೂ ಸಹ ಅವುಗಳ ಸ್ವಭಾವದಿಂದಲೇ ಉಂಟಾಗುತ್ತವೆ. ಯಾವ ಪ್ರಕಾರ ವಿಷ ಹಾಗೂ ಅಮೃತಗಳು ನಿಸ್ಸತ್ಯ ಆದ ಮೇಲೆ ಫಲಕೊಡುವುದರಿಂದ ನಿವೃತ್ತವಾಗುತ್ತವೆಯೋ ಅದೇ ಪ್ರಕಾರ ಶುಭಾಶುಭ ಕರ್ಮಗಳನ್ನು ಭೋಗಿಸುವುದರಿಂದ ಅವುಗಳು ನಿಸ್ಸತ್ರವಾಗಿ ನಿವೃತ್ತಿಯನ್ನು ಹೊಂದುತ್ತವೆ.
ತೇ ತೇ ಭೋಗ್ಯ ವಿಶೇಷ್ನಾಂ , ಸ್ಥಾನಕ್ ದ್ರವ್ಯ ಸ್ವಭಾವ್ |
ಗಹನ್ ವಾತ್ ಛೇ ಶಿಫ್ಟ್ ಆ, ಕಹೀ ಸಂಕ್ಷೇಪೇ ಸಾವ್ (186ll ಉತೃಷ್ಟ ಶುಭ ಅಧ್ಯವಸಾಯವು ಉತ್ಕೃಷ್ಟ ಶುಭಗತಿಯಾಗಿದೆ. ಉತ್ಕಷ್ಟ ಅಶುಭ ಅಧ್ಯವಸಾಯವು ಅಶುಭಗತಿಯಾಗಿದೆ. ಶುಭಾಶುಭ ಅಧ್ಯವಸಾಯವು ಮಿಶ್ರಗತಿಯಾಗಿದೆ. ಆಯಾ ಜೀವಗಳ ಪರಿಣಾಮವನ್ನೇ ಮುಖ್ಯವಾಗಿ ಗತಿಯೆಂದು ಹೇಳಲಾಗಿದೆ. ಉತ್ಕಷ್ಟಶುಭ ದ್ರವ್ಯದ ಊರ್ಧ್ವಗಮನ, ಉತ್ಕೃಷ್ಟ ಅಶುಭ ದ್ರವ್ಯದ ಅಧೋಗಮನ, ಶುಭ ಅಶುಭದ ಮಧ್ಯಸ್ಥಿತಿ ಈ ಪ್ರಕಾರ ದ್ರವ್ಯಗಳ ವಿಶೇಷ ಸ್ವಭಾವಗಳಾಗುತ್ತವೆ. ಆದ್ದರಿಂದ ಆಯಾ ಕಾರಣಗಳಿಂದ ಭೋಗ್ಯಸ್ಥಾನಗಳೂ ಆಗುವುದುಂಟು. ಎಲೈ ಶಿಷ್ಯನೇ! ಇದರಲ್ಲಿ ಜಡ ಚೈತನ್ಯಗಳ ಸ್ವಭಾವ, ಸಂಯೋಗ ಸೂಕ್ಷ್ಮ ಸ್ವರೂಪ ಅನೇಕ ವಿಚಾರಗಳು ಸಮಾವೇಶಗೊಳ್ಳುತ್ತವೆ. ಆದ್ದರಿಂದ ಈ ಮಾತುಗಳು ಗಹನವಾಗಿವೆ. ಆದರೂ ಇದನ್ನು ಅತ್ಯಂತ ಸಂಕ್ಷೇಪವಾಗಿ ಇಲ್ಲಿ ಹೇಳಲಾಗಿದೆ. ಸಂದೇಹ: ಶಿಷ್ಯನು ಕೇಳಿದ್ದು:
ಕರ್ತಾ ಭೋಕ್ತಾಜೀವ್ , ಪಣ್ ತೇನೋ ನಹೀಂ ಮೋಕ್ಷ |
ವೀಳ್ಕೊ ಕಾಳ್ ಅನಂತ್ ಪಣ್, ವರ್ತಮಾನ್ ಛೇ ದೊಷ್ 118711 ಜೀವನು ಕರ್ತಾ ಮತ್ತು ಭೋಕಾ - ಆಗಲಿ. ಆದರೆ ಅದರಿಂದ ಅವನಿಗೆ ಮೋಕ್ಷವಾಗುವುದಿಲ್ಲ. ಅನಂತ ಕಾಲ ಕಳೆದು ಹೋಗಿದೆ. ಆದರೂ ಇನ್ನೂ ಜೀವನಲ್ಲಿ ಕರ್ಮವನ್ನು ಮಾಡುವ ದೋಷವು ಇದ್ದೇ ಇದೆ.
0 GHTROOJINA-BHARATI
Jain Education Intemational 2010_04
For Private & Personal Use Only
www.jainelibrary.org