Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore

View full book text
Previous | Next

Page 200
________________ (७) सप्तभाषी आत्मसिद्धि 158 SAPTABHASHI ATMASIDDHI ಶುಭ್ ಕರೇ ಫಳ್ ಭೋಗ್ವೇ , ದೇವಾದಿ ಗತಿಮಾಂಯ್ | ಅಶುಭ್ ಕರೇ ನಕಾದಿ ಫಳ್, ಕರ್ಮ್ ರಹಿತ್ ನ ಕ್ಯಾಂಯ್ 188| ಜೀವನು ಶುಭಕರ್ಮಗಳನ್ನು ಮಾಡಿದರೆ ಅದರಿಂದ ದೇವಾದಿಗತಿಗಳಾಗಿ ಅದರ ಶುಭ ಫಲಗಳನ್ನು ಭೋಗಿಸುತ್ತಾನೆ. ಅಶುಭ ಕರ್ಮಗಳನ್ನು ಮಾಡಿದರೆ ನರಕಾದಿಗತಿಗಳಲ್ಲಿ ಅಶುಭ ಫಲದ ಭೋಗವನ್ನು ಭೋಗಿಸುತ್ತಾನೆ. ಆದರೆ ಯಾವ ಸ್ಥಳದಲ್ಲಿಯೂ ಜೀವನು ಕರ್ಮರಹಿತನಾಗಿರುವುದಿಲ್ಲ. ಸಮಾಧಾನ : ಸದ್ಗುರು ಹೇಳಿದ್ದು: ಚೇಮ್ ಶುಭಾಶುಭ್ ಕರ್ಮ್ಪದ್, ಜಾಣ್ಯಾಂ ಸಫಳ್ ಪ್ರಮಾಕ್ | ತೇಮ್ ನಿವೃತ್ತಿ ಸಫಳ್ತಾ, ಮಾಟೇ ಮೋಕ್ಷ ಸುಜಾಣ್ (189|| ಯಾವ ಪ್ರಕಾರ ನೀನು ಜೀವನನ್ನು ಶುಭಾಶುಭ ಕರ್ಮಮಾಡಲು ಕಾರಣನೆಂದೂ, ಜೀವನೇ ಕರ್ಮದ ಕರ್ತೃವೆಂದೂ ಕರ್ತೃವಾಗಿರುವುದರಿಂದ ಭೋಕ್ಷವೆಂದೂ ತಿಳಿದಿರುವೆಯೋ ಹಾಗೆಯೇ ಅದನ್ನು ಮಾಡದಿರುವುದರಿಂದ ಅಥವಾ ಆ ಕರದ ನಿವೃತ್ತಿಮಾಡುವುದರಿಂದ ಅದರ ನಿವೃತ್ತಿಯೂ ಆಗುವ ಸಂಭವವಿದೆ. ಆದ್ದರಿಂದ ಆ ನಿವೃತ್ತಿಯೂ ಕೂಡ ಸಫಲವಾಗಿದೆ. ಅಂದರೆ ಯಾವ ಪ್ರಕಾರ ಆ ಶುಭಾಶುಭ ಕರ್ಮಗಳ ನಿಷ್ಪಲವಾಗುವುದಿಲ್ಲವೋ ಅದೇ ಪ್ರಕಾರ ಅದರ ನಿವೃತ್ತಿಯೂ ಸಹ ನಿಷ್ಪಲವಾಗದು. ಆದರಿಂದ ಎಲೆ ಜಾಣನೇ ! ಈ ನಿವೃತ್ತಿರೂಪವೇ ಮೋಕ್ಷವಿದೆ ಎಂಬುದನ್ನು ನೀನು ವಿಚಾರಮಾಡು. ವೀಟ್ರೋ ಕಾಲ್ ಅನಂತ್ ತೇ, ಕರ್ಮ್ ಶುಭಾಶುಭ್ ಭಾವ್ | ತೇಹ್ ಶುಭಾಶುಭ್ ಛೇದ್ತಾಂ , ಉಪ್ಜೇ ಮೋಕ್ಷ ಸ್ವಭಾವ್ 119oII ಈ ಮೊದಲು ಕರ್ಮಸಹಿತ ಅನಂತ ಕಾಲ ಕಳೆಯಿತು. ಅದಕ್ಕೆ ಎಲ್ಲಾ ಶುಭಾಶುಭ ಕರ್ಮಗಳ ವಿಷಯದಲ್ಲಿ ಜೀವನ ಆಸಕ್ತಿ ಇರುವುದೇ ಕಾರಣವಾಗಿದೆ. ಆದರೆ ಕರ್ಮದ ಮೇಲೆ ಉದಾಸೀನನಾಗುವುದರಿಂದ ಕರ್ಮದ ಫಲವನ್ನು ಛೇದಿಸಲಿಕ್ಕೆ ಆಗುತ್ತದೆ. ಇದರಿಂದ ಮೋಕ್ಷ ಸ್ವಭಾವವು ಪ್ರಕಟವಾಗುತ್ತದೆ. ದೇಹಾದಿಕ್ ಸಂಯೋಗ್ನೋ , ಆತ್ಯಂತಿಕ್ ವಿಯೋಗ್ || ಸಿದ್ ಮೋಕ್ಷ ಶಾಶ್ವತ್ ಪದೇ, ನಿಜ್ ಅನಂತ್ ಸುಮ್ಭೋಗ್ 119 111 ದೇಹಾದಿಗಳ ಸಂಯೋಗದ ಅನುಕ್ರಮದಿಂದ ವಿಯೋಗವಂತೂ ಸದಾ ಆಗುತ್ತಿರುತ್ತದೆ. ಆದರೆ ಅದರ ವಿಯೋಗವು ತಿರುಗಿ ಅದು ಮತ್ತೊಮ್ಮೆ ಆಗದಂತೆ ಆಗಬೇಕು. ಅದೇ ಸಿದ್ಧ ಸ್ವರೂಪವಾಗಿದೆ. ಮೋಕ್ಷ ಸ್ವಭಾವದ ಪ್ರಕಟಸ್ಥಿತಿಯಾಗಿದೆ. ಆಗ ಶಾಶ್ವತ ಪದವನ್ನು ಹೊಂದಿ ಅನಂತ ಆತ್ಮಾನಂದವನ್ನು ಭೋಗಿಸಲು ಸಿಗುತ್ತದೆ. ಸಂದೇಹ : ಶಿಷ್ಯ ಕೇಳಿದ್ದು : ಹೊಯ್ ಕದಾಪಿ ಮೋಕ್ಷಪದ್, ನಹಿ ಅವಿರೋಧ ಉಪಾಮ್ | ಕರ್ಮೊ ಕಾಳ್ ಅನಂತ್ನಾಂ , ಶಾಠೀ ಛೇದ್ಯಾಂ ಜಾಯ್ ? 1192| ಒಂದು ವೇಳೆ ಮೋಕ್ಷ ಪದವಿ ಇದ್ದಿತು. ಆದರೆ ಅದನ್ನು ಪಡೆಯಲಿಕ್ಕೆ ಅವಿರೋಧಿಯಾದ ಉಪಾಯವು ಇದ್ದಂತೆ ತೋರುವುದಿಲ್ಲ. ಅದರ ಯಥಾತಥ್ಯಪ್ರತೀತಿಗೂ ಉಪಾಯವು ಗೊತ್ತಾಗುವುದಿಲ್ಲ. ಯಾಕೆಂದರೆ ಅನಂತ ಕಾಲದ ಕರ್ಮವನ್ನು ಈ ಮನುಷ್ಯ ಶರೀರದ ಅಲ್ಪ ಆಯುಷ್ಯದ ಅವಧಿಯಲ್ಲಿ ಹೇಗೆ ಛೇದಿಸುವುದು ಸಾಧ್ಯವಿದೆ ? 0 GHROJINA-BHARATI Jain Education Intemational 2010_04 For Private & Personal Use Only www.jainelibrary.org

Loading...

Page Navigation
1 ... 198 199 200 201 202 203 204 205 206 207 208 209 210 211 212 213 214 215 216 217 218 219 220 221 222 223 224 225 226