Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore

View full book text
Previous | Next

Page 194
________________ (७) सप्तभाषी आत्मसिद्धि 152 SAPTABHASHI ATMASIDDHI ಪರಮ್ ಬುದ್ದಿ ಕೃಶ್ ದೇಡ್ ಮಾಂ, ಸ್ಕೂಲ್ ದೇಹ ಮತಿ ಅಲ್ಟ್ | ದೇಹ ಹೊಯ್ ಜೊ ಆತ್ಮಾ , ಘಟೇ ನ ಆಮ್ ವಿಕಲ್ಸ್ I156ll ಕೃಶ ದೇಹದಲ್ಲಿ ಪರಮ ಬುದ್ಧಿಯೂ ಸ್ಫೂಲ ದೇಹದಲ್ಲಿ ಅಲ್ಪ ಬುದ್ದಿಯೂ ಇರುವುದು ಕಂಡು ಬರುತ್ತದೆ. ದೇಹವೇ ಆತ್ಮನಾಗಿದ್ದರೆ ಈ ವಿಕಲ್ಪ - ಅಂದರೆ ವಿರೋಧವಿರಲು ಅವಕಾಶವಾಗುತ್ತಿರಲಿಲ್ಲ. ಜಡ್ ಚೀತ್‌ನನೋ ಭಿನ್ನ ಛೇ, ಕೇವಲ್ ಪ್ರಗಟ್ ಸ್ವಭಾವ್ | ಏಕ್ಪಣುಂ ಪಾಮೇ ನಹೀ, ತ್ರಣೇ ಕಾಳ್ ದ್ವಯ್ ಭಾವ್ | 115711 ಯಾವ ಕಾಲದಲ್ಲಿ ಯಾವುದರಲ್ಲಿ ತಿಳಿಯುವ ಸ್ವಭಾವವು ಇಲ್ಲವೋ ಅದು ಜಡ, ಸದಾ ತಿಳಿಯುವ ಸ್ವಭಾವವುಳ್ಳದ್ದೂ ಅದು ಚೇತನ. ಈ ಪ್ರಕಾರ ಜಡ ಮತ್ತು ಚೇತನ ಈ ಎರಡರ ಸ್ವಭಾವವು ಭಿನ್ನಭಿನ್ನವಾಗಿದೆ. ಇವೆರಡೂ ಯಾವ ಪ್ರಕಾರದಿಂದಲೂ ಒಂದೇ ಆಗುವುದಕ್ಕೆ ಯೋಗ್ಯವಲ್ಲ. ಮೂರುಕಾಲದಲ್ಲಿಯೂ ಜಡವು ಜಡರೂಪದಲ್ಲಿಯೂ ಚೇತನವು ಚೇತನರೂಪದಲ್ಲಿಯೂ ಇರುತ್ತವೆಂಬ ಇವೆರಡರ ಭಿನ್ನ ಭಿನ್ನ ದೈತಭಾವವು ಸ್ಪಷ್ಟ ಅನುಭವಕ್ಕೆ ಬರುತ್ತದೆ. ಆತ್ಮಾನೀ ಶಂಕಾ ಕರೇ, ಆತ್ಮಾ ಪೋತೇ ಆಪ್ | ಶಂಕಾನೋ ಕರ್‌ನಾರ್ ತೇ, ಅಚ್ರಜ್ ಏಕ್ ಅಮಾಪ್ 115811 ಆತ್ಮನು ಸ್ವಂತ ಆತ್ಮನ ವಿಷಯದಲ್ಲಿ ತಾನೇ ಸಂಶಯವನ್ನು ಮಾಡುತ್ತಾನೆ. ಯಾರು ಸಂಶಯವನ್ನು ಮಾಡುತ್ತಾನೋ ಅವನೇ ಆತ್ಮನು. ಇದನ್ನು ತಿಳಿಯುತ್ತ ಇಲ್ಲ. ಇದು ಅಪರಿಮಿತ ಆಶ್ಚರ್ಯವಾಗಿದೆ. ಸಂದೇಹ : ಶಿಷ್ಯನು ಕೇಳಿದ್ದು : ಆತ್ಮಾನಾ ಅಸ್ತಿತ್ವನಾ, ಆಪೇ ಕಹ್ಯಾ ಪ್ರಕಾರ್ | ಸಂಭವ್ ತೇನೋ ಥಾಯ್ ಛೇ, ಅಂತರ್ ಕರ್ಯೇ ವಿಚಾರ್ 115911 ಆತ್ಮನ ಅಸ್ತಿತ್ವದ ವಿಷಯದಲ್ಲಿ ತಾವು ಯಾವ ಯಾವ ಯುಕ್ತಿ ಮಾತುಗಳನ್ನು ಹೇಳಿದಿರೋ ಅವುಗಳನ್ನು ಅಂತರಂಗದಲ್ಲಿ ವಿಚಾರ ಮಾಡುವುದರಿಂದ ಅವನ ಅಸ್ತಿತ್ವವು ಸಂಭವನೀಯವಾಗುತ್ತದೆ. ಬೀಜೀ ಶಂಕಾ ಥಾಯ್ ತ್ಯಾಂ, ಆತ್ತಾ ನಹೀ ಅವಿನಾಶ್ | ದೇಹ ಯೋಗ್ ಥೀ ಊಪ್ ಜೇ, ದೇಹ್ ವಿಯೋಗೇ ನಾಶ್ |60|| ಆದರೆ ಇನ್ನೊಂದು ಸಂಶಯವು ಉಂಟಾಗುತ್ತದೆ. ಈ ಆತ್ಮನು ಇದ್ದಾನೆ. ಆದರೆ ಅವನು ಅವಿನಾಶಿ ಅಂದರೆ ನಿತ್ಯನಲ್ಲ. ಅಂದರೆ ಮೂರೂ ಕಾಲಗಳಲ್ಲಿ ಇರುವ ಪದಾರ್ಥ(ವಸ್ತು)ವಲ್ಲ. ಅವನು ಕೇವಲ ದೇಹಸಂಯೋಗದಿಂದ ಉತ್ಪನ್ನನಾಗುತ್ತಾನೆ. ಮತ್ತು ಅದರ ವಿಯೋಗದಿಂದ ನಾಶವಾಗುತ್ತಾನೆ. ಅಥವಾ ವಸ್ತು ಕ್ಷಣಿಕ್ ಛೇ, ಕಣೇ, ಕ್ಷಣೇ ಪಲ್ಟಾಯ್ | ಏ ಅನುಭವ್ ಥೀ ಪಣ್ ನಹೀ, ಆತ್ಮಾ ನಿತ್ ಜಣಾಯ್ 1611 ಅಥವಾ ವಸ್ತುವು ಕ್ಷಣ-ಕ್ಷಣಕ್ಕೂ ಬದಲಾಗುತ್ತಿರುವುದನ್ನು ಕಾಣುವುದರಿಂದ ಎಲ್ಲಾ ವಸ್ತುಗಳೂ ಕ್ಷಣಿಕವಾಗಿವೆ. ಮತ್ತು ಅನುಭವದಿಂದ ನೋಡಿದರೂ ಕೂಡ ಆತ್ಮನು ನಿತ್ಯನೆಂದು ಕಂಡು ಬರವುದಿಲ್ಲ. • ford JINA-BHARATI Jain Education Intemational 2010_04 For Private & Personal Use Only www.jainelibrary.org

Loading...

Page Navigation
1 ... 192 193 194 195 196 197 198 199 200 201 202 203 204 205 206 207 208 209 210 211 212 213 214 215 216 217 218 219 220 221 222 223 224 225 226