Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore
View full book text
________________
(७) सप्तभाषी आत्मसिद्धि
150
SAPTABHASHI ATMASIDDHI
ಷಟ್ಸ್ಥಾನಕ್ ಸಂಕ್ಷೇಪಮಾಂ, ಷಟ್ ದರ್ಶನ್ ಪಣ್ ತೇಜ್ ||
ಸಮ್ಜಾವಾ ಪರಮಾರ್ಥನೇ, ಕಹ್ಯಾಂ ಜ್ಞಾನೀಏ ಏಹ್ II441 ಈ ಆರು ಸ್ಥಾನ ಅಥವಾ ಆರು ಪದಗಳನ್ನು ಇಲ್ಲಿ ಸಂಕ್ಷೇಪವಾಗಿ ಹೇಳಲಾಗಿದೆ. ವಿಚಾರ ಮಾಡಿ ನೋಡಿದರೆ ಷಟ್ ದರ್ಶನವೂ ಇದೇ ಆಗಿದೆ. ಪರಮಾರ್ಥವನ್ನು ತಿಳಿಯುವುದಕ್ಕಾಗಿ ಜ್ಞಾನಿಪುರುಷರು ಈ ಆರು ಪದಗಳನ್ನು ಹೇಳಿದ್ದಾರೆ. ೧. ಸಂದೇಹ: ಶಿಷ್ಯನು ಕೇಳಿದ:
ನಥೀ ದೃಷ್ಟಿಮಾಂ ಆವತೋ, ನಥೀ ಜಣಾತುಂ ರೂಪ್ |
ಬೀಜೋ ಪಣ್ ಅನುಭವ್ ನಹೀಂ, ತೇಥೀ ನ ಜೀವ್ಸ್ವರೂಪ್ II45ll ಶಿಷ್ಯನು ಆತ್ಮನ ಅಸ್ತಿತ್ವರೂಪ ಪ್ರಥಮ ಸ್ಥಾನದ ವಿಷಯದಲ್ಲಿ ಸಂದೇಹವನ್ನು ಪ್ರಕಟಿಸುತ್ತಾನೆ. ಆತ್ಮನು ದೃಷ್ಟಿಗೆ ಬೀಳುವುದಿಲ್ಲ. ಅವನ ಯಾವ ರೂಪ ಗೊತ್ತಾಗುವುದಿಲ್ಲ. ಹಾಗೆಯೇ ಸ್ಪರ್ಶಮೊದಲಾದ ಬೇರೆ ಅನುಭವದಿಂದಲೂ ಅವನ ಜ್ಞಾನವಾಗುವುದಿಲ್ಲ. ಆದುದರಿಂದ ಜೀವನು ನಿಜವಾದ ಸ್ವರೂಪದಲ್ಲಿ ಇಲ್ಲ. ಅಂತೂ ಜೀವನು ಇಲ್ಲವೇ ಇಲ್ಲ,
ಅಥವಾ ದೇಹ್ ಜ ಆತ್ಮಾ, ಅಥವಾ ಇಂದ್ರಿಯ್ ಪ್ರಾಣ್ |
ಮಿಥ್ಯಾ ಜೂಡೋ ಮಾನವೋ, ನಹಿ ಜೂದುಂ ಏಂಧಾಣ 146ll ಯಾವುದು ದೇಹವೋ ಅದೇ ಆತ್ಮ. ಅಥವಾ ಇಂದ್ರಿಯಗಳೇ ಆತ್ಮ ಅಥವಾ ಶ್ವಾಸೋಛಾಸವೇ ಆತ್ಮನಾಗಿರಬೇಕು ಅರ್ಥಾತ್ ಇವೆಲ್ಲವೂ ಒಂದೊಂದೂ ದೇಹದ ಸ್ವರೂಪವಾಗಿವೆ. ಆದುದರಿಂದ ಆತನನ್ನು ದೇಹದಿಂದ ಬೇರೆ ಎಂದು ತಿಳಿಯುವುದು ಮಿಥ್ಯಾ ಎನಿಸುತ್ತದೆ. ಯಾಕೆಂದರೆ ಅವನ ಯಾವ ಚಿಹ್ನವೂ ಬೇರೆಯಾಗಿ ಕಂಡು ಬರುವುದಿಲ್ಲ,
ವಳೀ ಜೋ ಆತ್ತಾ ಹೋಯ್ ತೋ, ಜಣಾಯ್ ತೇ ನಹಿ ಕೇಮ್ ?
ಜಣಾಮ್ ಜೋ ತೇ ಹೋಯ್ ತೋ, ಘಟ್ ಪಟ್ ಆದಿ ಚೇಮ್ 14711 ಒಂದು ವೇಳೆ ಆತನು ಇದ್ದರೆ ನಮಗೆ ಇವನು ಕಂಡು ಬರುವುದಿಲ್ಲವೇಕೆ ? ಯಾವ ಪ್ರಕಾರ ಮಡಿಕೆ, ಪರದೆ ಇತ್ಯಾದಿ ವಸ್ತುಗಳು ಕಂಡು ಬರುತ್ತವೆ. ಹಾಗೆ ಅವು ಅಸ್ತಿತ್ವದಲ್ಲಿಯೂ ಇವೆ. ಇವುಗಳಂತೆ ಆತನೂ ಇದ್ದರೆ ಅವನು ಕಾಣುವುದಿಲ್ಲವೇಕೆ ?
ಮಾಟೇ ಛ ನಹಿ ಆತ್ಮಾ, ಮಿಥ್ಯಾ ಮೋಕ್ಷ ಉಪಾಮ್ |
ಏ ಅಂತರ್ ಶಂಕಾ ತಣೋ, ಸಮ್ಜಾವೋ ಸದುಪಾಯ್ T48| ಒಟ್ಟಿನಲ್ಲಿ ಆತ್ಮನು ಇಲ್ಲ. ಆತ್ಮನೇ ಇಲ್ಲವೆಂದ ಮೇಲೆ ಅವನ ಮುಕ್ತಿಗಾಗಿ ಉಪಾಯಗಳನ್ನು ಮಾಡುವುದು ವ್ಯರ್ಥವಾಗಿದೆ- ನನ್ನ ಅಂತರಂಗದ ಈ ಸಂದೇಹಕ್ಕೆ ಏನಾದರೂ ಸದುಪಾಯವಿದ್ದರೆ ದಯಮಾಡಿ ನನಗೆ ತಿಳಿಸಿ ಹೇಳಿರಿ. ಅರ್ಥಾತ್ ಇದಕ್ಕೇನಾದರೂ ಸಮಾಧಾನವಿದ್ದರೆ ಹೇಳಿರಿ. ಸಮಾಧಾನ - ಸದ್ಗುರು ಹೇಳಿದ್ದು :
ಭಾಸ್ಕೋ ದೇಹಾಧ್ಯಾಸಥೀ, ಆತ್ಸಾ ದೇಹ್ ಸಮಾನ್ |
ಪಣ್ ತೇ ಬನ್ನೇ ಭಿನ್ನ ಛೇ, ಪ್ರಕಟ ಲಕ್ಷಣೇ ಭಾನ್ [49| ದೇಹಾಧ್ಯಾಸದಿಂದ ಅಂದರೆ ಅನಾದಿ ಕಾಲದಿಂದಲೂ ಇರುವ ಅಜ್ಞಾನದಿಂದ ದೇಹದ ಪರಿಚಯವಿದೆ. ಆದ್ದರಿಂದ ನಿನಗೆ ಆತ್ಮನು ದೇಹದಂತೆ ಅರ್ಥಾತ್ ಆತ್ಮನೆಂದರೆ ದೇಹವೆಂದೇ ಭಾಸವಾಗುತ್ತದೆ. ಆದರೆ ಆತ್ಮ ಹಾಗೂ ದೇಹ ಇವೆರಡೂ ಭಿನ್ನ ಭಿನ್ನವಾಗಿವೆ. ಯಾಕೆಂದರೆ ಎರಡೂ ಭಿನ್ನ ಭಿನ್ನ ಲಕ್ಷಣಗಳಿಂದ ಪ್ರಕಟವಾಗಿ ಕಂಡು ಬರುತ್ತವೆ.
• fugir
JINA-BHARATI •
Jain Education International 2010_04
Jain Education Intemational 2010_04
For Private & Personal Use Only
For Private & Persona
www.jainelibrary.org

Page Navigation
1 ... 190 191 192 193 194 195 196 197 198 199 200 201 202 203 204 205 206 207 208 209 210 211 212 213 214 215 216 217 218 219 220 221 222 223 224 225 226