Book Title: Sapta Bhashi Atmasiddhi
Author(s): Shrimad Rajchandra, Pratapkumar J Toliiya, Sumitra Tolia
Publisher: Jina Bharati Bangalore

View full book text
Previous | Next

Page 188
________________ (७) सप्तभाषी आत्मसिद्धि 146 SAPTABHASHI ATMASIDDHI ಏವೋ ಮಾರ್ಗ್ ವಿನಯ್ ತಗೋ, ಭಾಸ್ಕೋ ಶ್ರೀ ವೀತ್‌ರಾಗ್ | ಮೂಳ ಹೇತು ಏ ಮಾರ್ಗ್ನೋ, ಸಮ್ಜೇ ಕೋಈ ಸುಭಾಗ್ಯ 12011 ಈ ಪ್ರಕಾರ ಶ್ರೀ ಜಿನೇಶ್ವರ ಭಗವಾನನು ವಿನಯಮಾರ್ಗದ ಉಪದೇಶವನ್ನು ಮಾಡಿದ್ದಾರೆ. ಈ ಮಾರ್ಗದ ಮೂಲ ಉದ್ದೇಶವು ಆತ್ಮನಿಗೆ ಉಪಕಾರಕರವಾಗಿದೆ. ಇದನ್ನು ಸೌಭಾಗ್ಯಶಾಲಿಯೂ ಸುಲಭ ಬೋಧಿಯೂ ಆದ ಕೆಲವೇ ಆರಾಧಕ ಜೀವರು ತಿಳಿದುಕೊಳ್ಳಬಲ್ಲರು. ಅಸದ್ಗುರು ಏ ವಿನಯ್ನೋ , ಲಾಬ್ ಲಹೇ ಜೋ ಕಾಂ | ಮಹಾಮೋಹನೀಮ್ ಕರ್ಮಥೀ, ಬೂಡೇ ಭವ್ಜ ಮಾಂಹಿ 12 111 ಇಲ್ಲಿ ಹೇಳಿದ ವಿನಯಮಾರ್ಗವನ್ನು ಯಾವನಾದರೂ ಅಸದ್ಗುರುವು ತನಗೆ ಶಿಷ್ಯರೇ ಮೊದಲಾದವನ್ನು ಮಾಡಿಕೊಳ್ಳುವ ಇಚ್ಛೆಯಿಂದ ತನ್ನಲ್ಲಿ ಸದ್ದುರುತ್ವವನ್ನು ಸ್ಥಾಪಿಸಿಕೊಳ್ಳುತ್ತಾನೆಯೋ ಅವನು ಮಹಾ ಮೋಹನೀಯ ಕರ್ಮದ ಉಪಾರ್ಜನೆ ಮಾಡಿ ಭವಸಮುದ್ರದಲ್ಲಿ ಮುಳುಗುವನು. ಹೋಯ್ ಮುಮುಕ್ಷು ಜೀವ್ ತೇ, ಸಮ್ಜೇ ಏಹ್ ವಿಚಾರ್ | ಹೋಮ್ ಮತಾರ್ಥಿ ಜೀವತೇ, ಅವಳೋ ಲೇ ನಿರ್ಧಾರ್ 112211 ಮುಮುಕ್ಷು (ಮೋಕ್ಷವನ್ನು ಅಪೇಕ್ಷಿಸುವ) ಜೀವನು ಈ ವಿನಯ ಮಾರ್ಗ ಮೊದಲಾದವುಗಳ ವಿಚಾರ ತಿಳಿದುಕೊಳ್ಳುತ್ತಾನೆ. ಆದರೆ ಮತಾರ್ಥಿ ಜೀವನು ಅದಕ್ಕೆ ವಿರೋಧವಾಗಿಯೇ ನಿಶ್ಚಯ ಮಾಡುತ್ತಾನೆ. ಇಂಥವನು ಸ್ವಂತ ವಿನಯವನ್ನು ಶಿಷ್ಯಾದಿಗಳಿಂದ ಮಾಡಿಸಿಕೊಳ್ಳುತ್ತಾನೆ ಅಲ್ಲದೆ ಅಸದ್ಗುರುವಿನಲ್ಲಿ ಸದ್ದುರುವಿನ ಭ್ರಾಂತಿಯನ್ನು ಉತ್ಪನ್ನ ಮಾಡುವುದರಿಂದ ಸ್ವತಃ ಈ ವಿನಯಮಾರ್ಗದ ಉಪಯೋಗವನ್ನು ಮಾಡಿಕೊಳ್ಳುತ್ತಾನೆ. ಹೋಮ್ ಮತಾರ್ಥಿ ತೇಹನೇ, ಥಾಯ್ ನ ಆತಮ್ ಲಕ್ಸ್ | ತೇಹ್ ಮತಾರ್ಥಿ ಲಕ್ಷಣೋ, ಅಹೀಂ ಕಹ್ಯಾಂ ನಿರ್ಪಕ್ಸ್ 12311 ಮತಾರ್ಥಿ ಜೀವನಿಗೆ ಆತ್ಮಜ್ಞಾನವು ಲಕ್ಷವಾಗಿರುವುದಿಲ್ಲ. ಇಂತಹ ಮತಾರ್ಥಿ ಜೀವಗಳ ಲಕ್ಷಣವನ್ನು ನಿಷ್ಪಕ್ಷಪಾತ ದೃಷ್ಟಿಯಿಂದ ಇಲ್ಲಿ ಹೇಳಲಾಗಿದೆ. ಮತಾರ್ಥಿಯ ಲಕ್ಷಣ : ಬಾಹ್ಯ ತ್ಯಾಗ್ ಪಣ್ ಜ್ಞಾನ್ ನಹೀ, ತೇ ಮಾನೇ ಗುರು ಸತ್|| ಅಥವಾ ನಿಜ್ಕುಳ್ ಧರ್ಮನಾ, ತೇ ಗುರುಮಾಂ ಜ ಮಮ್ತ್ಯ 12411 ಯಾವನು ಬಾಹ್ಯ ರೂಪದಲ್ಲಿ ಕೇವಲ ತ್ಯಾಗಿಯಂತೆ ಕಾಣುತ್ತಾನೋ ಆದರೆ ಯಾವನಿಗೆ ಆತ್ತಜ್ಞಾನವಿಲ್ಲವೋ ಮತ್ತು ಉಪಲಕ್ಷಣದಿಂದ ಅಂತರಂಗದಲ್ಲಿ ತ್ಯಾಗವಿಲ್ಲವೋ ಇಂಥವನನ್ನು ಯಾರು ಸದ್ಗುರುವೆಂದು ತಿಳಿಯುತ್ತಾನೆಯೋ ಅಥವಾ ತನ್ನ ಕುಲಧರ್ಮವನ್ನನುಸರಿಸಿ ಎಂಥ ಗುರುವೇ ಇರಲಿ ಅವನಲ್ಲಿ ಮಮತ್ವವನ್ನು ಇಡುತ್ತಾನೆಯೋ ಜೇ ಜಿನ್ ದೇಹ ಪ್ರಮಾಣ್ ನೇ, ಸಮ್ವಸರಣಾದಿ ಸಿದ್ದಿ | ವರ್ಣನ್ ಸಮ್ಜೇ ಜಿನನುಂ, ರೋಕಿ ರಹೆ ನಿಜ್‌ಬುದ್ದಿ 12511 ಜಿನ ಭಗವಂತನ ದೇಹ ಮೊದಲಾದವುಗಳ ಯಾವ ವರ್ಣನೆಯನ್ನೇ ಯಾರು ಜಿನೇಶ್ಚರನ ವರ್ಣನೆಯೆಂದು ತಿಳಿಯುತ್ತಾನೆ ಮತ್ತು ತಮ್ಮ ಕುಲಧರ್ಮದ ದೇವರಾದುದರಿಂದ ಅವರಲ್ಲಿರುವ ಮಮತ್ವಭಾವದ ರಾಗದಿಂದ ಸಮವಸರಣವೇ ಮೊದಲಾದ ಮಹಾತೆಗಳನ್ನೇ ಯಾರು ಹಾಡುತ್ತಿರುತ್ತಾರೋ ಮತ್ತು ಅದರಲ್ಲಿಯೇ ತನ್ನ ಬುದ್ಧಿ ಶಕ್ತಿಯನ್ನೆಲ್ಲ ತಡೆದು ನಿಲ್ಲಿಸುತ್ತಾನೋ, ಅಂದರೆ ನಿಜವಾಗಿಯೂ ಪರಮಾರ್ಥದ ಹೇತುಸ್ವರೂಪವಾಗಿರುವಂಥ ಜಿನನ ಯಾವ ಅಂತರಂಗ ಸ್ವರೂಪವಿದೆಯೋ ಅದನ್ನು ಯಾರು ತಿಳಿಯುವುದಿಲ್ಲ ಮತ್ತು ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲವೋ ಮತ್ತು ಸಮವಸರಣ ಮೊದಲಾದವುಗಳಲ್ಲಿಯೇ ಅವನ ಸ್ವರೂಪ ಕಲ್ಪನೆಯನ್ನು ಮಾಡಿಕೊಂಡು ಮತಾರ್ಥದಲ್ಲಿಯೇ ಇರುತ್ತಾನೋ • POTHESIO JINA-BHARATI • Jain Education Intemational 2010_04 For Private & Personal Use Only www.jainelibrary.org

Loading...

Page Navigation
1 ... 186 187 188 189 190 191 192 193 194 195 196 197 198 199 200 201 202 203 204 205 206 207 208 209 210 211 212 213 214 215 216 217 218 219 220 221 222 223 224 225 226