Book Title: Universal Values of Prakrit Texts
Author(s): Prem Suman Jain
Publisher: Bahubali Prakrit Vidyapeeth and Rashtriya Sanskrit Sansthan

Previous | Next

Page 332
________________ ಪೂರ್ವೋಕ್ತ ಕಥಾಕೃತಿಗಳಲ್ಲದೆ ಉಪದೇಶಪ್ರದ ಕಥೆಗಳನ್ನು ಸಹ ಧರ್ಮದಾಸಗಣಿ, ಹರಿಭದ್ರಸೂರಿ ಮೊದಲಾದವರು ಗಮನಾರ್ಹವಾಗಿ ರಚಿಸಿದ್ದಾರೆ. ಈ ರಚನೆಗಳಲ್ಲಿ ಕಥೆಯ ಸರ್ವಾಂಗೀಣ ವಿಕಾಸ ಪ್ರಮುಖವಾದುದಲ್ಲ. ಆದರೆ ಸಂಯಮ. ಶೀಲ, ದಾನ ಮೊದಲಾದ ಭಾವನೆಗಳ ವಿಕಾಸ ಪ್ರಧಾನವಾಗಿ ಕಂಡುಬರುತ್ತದೆ. ಬುದ್ಧಿವಂತಿಕೆಯ ಕಥೆಗಳನ್ನು ಸಹ ಈ ವರ್ಗದ ಸಾಹಿತ್ಯದಲ್ಲಿಯೇ ಸೇರಿಸಲಾಗಿದೆ. ಪ್ರಾಕೃತ ಸಾಹಿತ್ಯದ ಹಲವು ವಿಶೇಷತೆಗಳು : ಹಿಂದಿ ಮತ್ತು ಆಪಭ್ರಂಶದ ಪ್ರೇಮಾಖ್ಯಾನ ಕಥೆಗಳ ವಿಕಾಸ ಪ್ರಾಕೃತ ಕಥೆಗಳಿಂದ ಆಗಿದೆ. ಆದ್ದರಿಂದ ಪ್ರಾಕೃತ ಕಥೆಗಾರರು ಧರ್ಮಕಥೆಗಳಲ್ಲಿ ಶೃಂಗಾರ ರಸದಿಂದ ಕೂಡಿದ ಪ್ರೇಮಾಖ್ಯಾನಗಳನ್ನು ಸಮಾವೇಶಗೊಳಿಸಿ ಕಥೆಗಳನ್ನು ಲೋಕೋಪಯೋಗಿಯನ್ನಾಗಿ ಮಾಡಿದರು. ಮದನ-ಮಹೋತ್ಸವ, ವಸಂತ ಕ್ರೀಡಾ, ಪ್ರೇಮಪತ್ರ, ಸಾಹಸಿತ ಕ್ರೀಡೆಗಳು, ಪ್ರೇಮಿಗಳ ವಿಭಿನ್ನ ಮಾನಸಿಕ ನೆಲೆಗಳು, ಪ್ರೇಮಾನುರಾಗ, ಪ್ರೇಮಾಲಾಪ, ಹಾಸಯ-ವಿನೋದ ಮೊದಲಾದವನ್ನು ಪೂರ್ಣವಾಗಿ ಸಮಾವೇಶಗೊಳಿಸಿದ್ದಾರೆ. ರೂಪವಿಧಾನದ ದೃಷ್ಟಿಯಿಂದ ಪ್ರಾಕೃತ ಕಥೆಗಳು 'ಬೀಜಧರ್ಮ'ವಾಗಿವೆ. ಕಥಾಬೀಜದಿಂದ ಒಂದು ವಿಶಾಲ ವಟವೃಕ್ಷ ಉತ್ಪನ್ನವಾಗುತ್ತದೆ ಮತ್ತು ಅನೇಕ ಅವಾಂತರ, ಪ್ರಾಸಂಗಿಕ ಕಥಾಶಾಖೆಗಳು ಹೊರಡುತ್ತವೆ, ಅವು ಎಲ್ಲ ಧಾರ್ಮಿಕ ಅಂತಶ್ವೇತನದಿಂದ ಪ್ರಾಣ ತತ್ತ್ವವನ್ನು ಸ್ವೀಕರಿಸುತ್ತವೆ. ಪ್ರಾಕೃತ ಕಥೆಗಳಲ್ಲಿ 'ಕಥೋತ್ಥ ಪ್ರರೋಹ' ಶಿಲ್ಪವನ್ನು ಪಡೆಯುತ್ತೇವೆ. ಈರುಳ್ಳಿಯ ಸಿಪ್ಪೆಯೊಳಗಿನ ಸಿಪ್ಪೆಗೆ ಸಮಾನವಾಗಿ ಅಥವಾ ಬಾಳೆ ದಿಂಡಿನ ಪದರದೊಳಗಿನ ಪದರಕ್ಕೆ ಸಮಾನವಾಗಿ ಒಂದು ಕಥೆಯಿಂದ ಎರಡನೆಯ ಕಥೆ ಮತ್ತು ಎರಡನೆಯವರಿಂದ ಮೂರನೆಯ ಕಥೆ ಹೊರಬರುವುದು ಹಾಗೂ ಆಲದ ಮರದ ಬಿಳಲಿಗೆ ಸಮಾನವಾಗಿ ಕೊಂಬೆಯ ಮೇಲೆ ಕೊಂಬೆ ಒಳಡಮೂಡುತ್ತಾ ಹೋಗುವುದು, ಇದನ್ನೇ 'ಕಥೋತ್ಥಪ್ರೋಹ' ಶಿಲ್ಪವೆಂದು ಸ್ವೀಕರಿಸುವುದು. ಈ ಸ್ಥಾಪತ್ಯದ ಪ್ರಯೋಗ ಸಮಸ್ತ ಪ್ರಾಕೃತ ಕಥೆಗಳಲ್ಲಿ ಕಂಡುಬರುವುದು. ಮನೋರಂಜನೆಯ ಜೊತೆಗೆ ವರ್ಣನಾ ಶೈಲಿಯನ್ನು ಸಹಜವಾಗಿಸಿದ್ದಾರೆ. ಯಾವ ಪ್ರಕಾರ ವೃತ್ತವನ್ನು ಹಲವು ಅಂಶಗಳಲ್ಲಿ ವಿಭಜಿಸಲಾಗುವುದೋ ಮತ್ತು ಅಂಶಗಳು ಪೂರ್ಣ ಪರಿಧಿಯಲ್ಲಿ ವೃತ್ತದ ಸಮಗ್ರತೆ ಪ್ರಕಟವಾಗುವುದೋ, ಅದೇ ಪ್ರಕಾರ ಕಥೋತಪ್ರರೋಹದ ಆಧಾರದಲ್ಲಿ ಇತಿವೃತ್ತದ ಸಮಸ್ತ ಗತಿವಿಧಿ ಪ್ರಕಟವಾಗುವುದು. ವಾಸ್ತವದಲ್ಲಿ ವಟವೃಕ್ಷ ಚಿಗುರೊಡೆಯುವುದಕ್ಕೆ (ಬಿಳಲುಬಿಡುವುದಕ್ಕೆ) ಸಮಾನವಾಗಿ ಉಪಸ್ಥಿತ ಕಥೆಯಲ್ಲಿ ಸಂಕೇತಾತ್ಮಕತೆ ಮತ್ತು ಪ್ರತೀಕಾತ್ಮಕತೆಯ ಯೋಜನೆ ಸುಂದರವಾಗಿರುವುದು. ಪರಿವೇಶಗಳು ಅಥವಾ ಪರವೇಶಮಂಡಲಗಳ ನಿಯೋಜನೆಯು ಸಹ ಜೀವನ ಮತ್ತು ಜಗತ್ತಿನ ವಿಸ್ತಾರವನ್ನು ನಾಯಕ ಮತ್ತು ಪ್ರತಿನಾಯಕನ ಚರಿತ್ರ ನಿರ್ಮಾಣದ ರೂಪದಲ್ಲಿ ಒಟ್ಟುಗೂಡಿರುತ್ತವೆ. ರಚನೆಯಲ್ಲಿ ಸಂಪೂರ್ಣ ಇತಿವೃತ್ತವನ್ನು ಈ ಪ್ರಕಾರ ಸುವಿಚಾರಿತ ರೀತಿಯಲ್ಲಿ ವಿಭಕ್ತಗೊಳಿಸಲಾಗಿದೆ, ಅಲ್ಲದೆ ಪ್ರತ್ಯೇಕ ಖಂಡ ಅಥವಾ ಪರಿಚ್ಛೇದ ತನ್ನ ಪರಿಧಿಯಲ್ಲಿ ಪ್ರಾಯಃ ಪೂರ್ಣದಂತೆ ಪ್ರತೀತವಾಗುತ್ತದೆ ಮತ್ತು ಕಥೆಯ ಸದೃಷ್ಟಿ-ಯೋಜನಾ ಪ್ರಾಭವನ್ನು ಉತ್ಕರ್ಷಿನ್ಮುಖಗೊಳಿಸುತ್ತದೆ. - 290 Jain Education International For Private & Personal Use Only www.jainelibrary.org

Loading...

Page Navigation
1 ... 330 331 332 333 334 335 336 337 338 339 340 341 342 343 344 345 346 347 348 349 350 351 352 353 354 355 356 357 358 359 360 361 362 363 364 365 366 367 368