Book Title: Universal Values of Prakrit Texts
Author(s): Prem Suman Jain
Publisher: Bahubali Prakrit Vidyapeeth and Rashtriya Sanskrit Sansthan

Previous | Next

Page 347
________________ ಸಾಮಾನ್ಯ ಪದಗಳಲ್ಲದೆ ಗಚ್ಛ ಧನ ಚೂರ್ಣಿ ಪ್ರಕ್ಷೇಪ ಜಯ ಆವಲಿ ತಿರ್ಯಕ್ಷದೆ ತಿರ್ಯಗರ್ಭ ಮುಖ ಭೂಮಿ ಜೋಗ ದಳ ಪದಗುಣಿದೆ ಪದಧನ ಮೊದಲಾದ ವಿಶೇಷ ಪದಗಳನ್ನು ಟಂಕಿಸಲಾಗಿದೆ. ಇಲ್ಲಿ ಉಪಯೋಗಿಸಿರುವ ಗಣಿತ ಚಿಹ್ನೆಗಳ ಬಗೆಗೂ ನಾವು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಈ ಎಲ್ಲದರ ವಿವರವಾದ ಅಭ್ಯಾಸ ಸಾಧ್ಯವಾಗಬೇಕಾದರೆ ಅತ್ಯಂತ ಕಠಿಣ ಪರಿಶ್ರಮ ಆವಶ್ಯಕವಾಗುತ್ತದೆ. ಸಾಮಾನ್ಯರಿಗೆ ಕಠಿಣವಾಗಿ ತೋರುವ ಈ ಎಲ್ಲಾ ವಿವರಗಳು ವಿಶೇಷ ತಜ್ಞರಿಗೆ ಸುಲಲಿತವಾಗಿರಬಹುದು. ಈ ಬಗೆಗೆ ವಿವರಣೆಯನ್ನು ಭಾರತೀಯ ಜ್ಞಾನಪೀಠದಿಂದ ಪ್ರಕಾಶಿತವಾಗಿರುವ ಕರ್ಮಕಾಂಡದ ಎರಡನೆಯ ಸಂಪುಟದ ಅಂತ್ಯದಲ್ಲಿ 'ಗೊಮ್ಮಟಸಾರ್ ಗ್ರಂಥಕೀ ಗಣಿತಾತ್ಮಕ ಪ್ರಣಾಲಿ' ಎಂಬ ವಿಭಾಗದಲ್ಲಿ ನೀಡಲಾಗಿದೆ. ಇದನ್ನು ವಿಶೇಷತಜ್ಞರು ಪರಿಶೀಲಿಸಬಹುದು. ಡೆಮೈ ೧/೮ರ ಅಳತೆಯಲ್ಲಿ ಎರಡೂವರೆ ಸಾವಿರ ಪುಟಗಳಷ್ಟಾಗುವ ಗೊಮ್ಮಟಸಾರದ ಕನ್ನಡ ವ್ಯಾಖ್ಯಾನವು ಜೈನಸಿದ್ಧಾಂತಗಳ ಆಗರವಾಗಿದೆ, ಅಭ್ಯಸಿಸಿದಷ್ಟೂ ಅಗಾಧ ಪ್ರಮಾಣದ ವಸ್ತುಗಳು ಗೋಚರಿಸುತ್ತವೆ. ಇಲ್ಲಿ ಟೀಕಾಕಾರರ ವಿಶೇಷ ಪಾಂಡಿತ್ಯ ಪ್ರತಿಭೆಗಳ ಸಮ್ಮಿಳನತೆಯಿದೆ. ಇದು ಒಂದು ಅಮೂಲ್ಯ ಜೈನ ಸಿದ್ದಾಂತ ಗ್ರಂಥವಾಗಿದ್ದು ಜೈನಸಮುದಾಯಕ್ಕೆ, ಅಂತೆಯೇ ವಿಶ್ವತತ್ತ್ವ ಗ್ರಂಥಗಳ ತುಲನಾತ್ಮಕ ಅಭ್ಯಾಸದಲ್ಲಿ ನಿರತರಾದವರಿಗೆ ಬತ್ತದ ಸೆಲೆಯಾಗಿ ನಿಂತಿದೆ. ಇದು ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ ಕೊಡುಗೆಯಾಗಿದೆ ಎನ್ನುವುದನ್ನು ತತ್ತ್ವ ಗ್ರಂಥಗಳ ಆಂತರ್ಯವನ್ನು ಅರಿತಂತಹವರಾರೂ ಅಲ್ಲಗಳೆಯಲಾರರು ಎಂದು ಭಾವಿಸಿದ್ದೇನೆ. ಇಂತಹ ಒಂದು ಮಹತ್ವದ ಕೃತಿಯನ್ನು ಪ್ರಕಾಶಪಡಿಸಿದ ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಅಧ್ಯಕ್ಷರಾದ ಪೂಜ್ಯ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರಿಗೆ ಅನಂತ ಪ್ರಣಾಮಗಳನ್ನರ್ಪಿಸುತ್ತೇನೆ. 10 ೧. ರಾಜಾವಳೀ ಕಥಾಸಾರ : ಸಂ. ಬಿ.ಎಸ್‌. ಸಣ್ಣಯ್ಯ, ೨೦೦೨. ಪು. ೨೭೨ ೨. ಸಂ. ಬಿ.ಎಸ್‌. ಸಣ್ಣಯ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೧೮. ೨೦೦೪ Jain Education International -0-0-0 - 305 For Private & Personal Use Only www.jainelibrary.org

Loading...

Page Navigation
1 ... 345 346 347 348 349 350 351 352 353 354 355 356 357 358 359 360 361 362 363 364 365 366 367 368