Book Title: Universal Values of Prakrit Texts
Author(s): Prem Suman Jain
Publisher: Bahubali Prakrit Vidyapeeth and Rashtriya Sanskrit Sansthan

Previous | Next

Page 346
________________ ಭಾಷೆಯ ಬಗೆಗೆ ಟೀಕಾಕಾರರು ಹೊಂದಿರುವ ಸ್ಪಷ್ಟ ತಿಳುವಳಿಕೆಯಾಗಿದೆ. ಇಲ್ಲಿ ವಿಷಯ ನಿರೂಪಣೆಗೆ ಬಳಸಲಾಗಿರುವ ವಿಶೇಷಗಣಿತ ಓದುಗರನ್ನು ಅಚ್ಚರಿಗೊಳಿಸುತ್ತದೆ. "ಇಲ್ಲಿಗುಪಯೋಗಿಯಪ್ಪ ಲೋಕೋತ್ತರ ಗಣಿತಂ ಪರಿಭಾಷೆಯಂ ಪೇಳ್ವೆಂ" (೯೭) ಎಂದಿರುವಂತೆ ಇದು ಅಲೌಕಿಕ ಗಣಿತವಾಗಿದೆ. ಇದರಲ್ಲಿ ಅಲೌಕಿಕ ಜ್ಞಾನದ ನೆಲೆಯಿದೆ; ಸಾಮಾನ್ಯರಿಗೆ ತಿಳಿಯುವ ಸಾಧ್ಯತೆ ಇಲ್ಲವೆಂದೇ ಹೇಳಬೇಕಾಗಿದೆ. ಈ ಲೆಕ್ಕಾಚಾರಗಳಲ್ಲಿ ಬಳಸಿರುವ ಕುಂಡ, ಸೂಚೀವ್ಯಾಸ, ಲಕ್ಷ, ಕಿಷ್ಟು, ದಂಡ, ಘನಫಲ, ಸೈವಳಿ, ಗರ್ತ, ಘಟ, ವ್ಯಾಸೋಧ, ಸೂತ್ರೋಪದಿಷ್ಟ ಮೊದಲಾದ ಹಲವಾರು ವಿಶಿಷ್ಟ ಪದಗಳ ಪ್ರಯೋಗವನ್ನು ಕಾಣುತ್ತೇವೆ. "ಮುಖಂ ೧ ಭೂಮಿ ೧೯ ಜೋಗ ೪೦ ದಳೆ ೩೦ ಪದಗುಣಿದೆ ೧೦/೧೯ ಪದಧನಂ ಭವತಿ ೧೯೦" ಎಂಬಂತಹ ಲೆಕ್ಕಗಳು ಯಾವುದೇ ತತ್ತ್ವವನ್ನು ವಿವರಿಸುವಲ್ಲಿ ವಿಷಯವನ್ನು ನಿರೂಪಿಸುವಲ್ಲಿ ಬಳಕೆಯಾಗಿರುತ್ತವೆ. ಬಾದರನಿಗೋದಶರೀರಗಳ ಪ್ರತಿಪಾದನೆಯನ್ನು ಮಾಡುವಲ್ಲಿ ಪ್ರತ್ಯೇಕ ರಾಶಿಕಕ್ರಮದಿಂದಂ ಲಬ್ದಂಗಳಸಂಖ್ಯಾತ ಲೋಕ ಗುಣಾಕಾರಂಗಳುಮತ್ತುವವಜ ವಿನ್ಯಾಸವಿದು ಸ್ಕಂಧಂಗ ಜಂಬೂದ್ವೀಪಾದಿಗಳು ದೃಷ್ಟಾಂತಮಂಡರಂಗಳೆ ಭರತಾದಿ ಕ್ಷೇತ್ರಂಗಳು ದೃಷ್ಟಾಂತಮಾವಾಸಂಗಕ್ಕೆ ಕೋಸಲಾದಿ ದೇಶಂಗಳು ದೃಷ್ಟಾಂತಂ, ಪುಳವಿಗಳೆ ಸಾಕೇತಾದಿ ನಗರಂಗಳು ದೃಷ್ಟಾಂತಂ, ಬಾದರ ನಿಗೋದ ಶರೀರಂಗ ತತ್ ಸಾಕೇತಾದಿ ನಗರಂಗಳು ಗೃಹಂಗಳು ದೃಷ್ಟಾಂತಂ ವಾ ಶಬ್ದಮಿವಾರ್ಥಮೀ ಪೇಳ ದೃಷ್ಟಾಂತಮೆಂತಂತೆಯನ್ಯಂಗಳು ದೃಷ್ಟಾಂತಂಗಳು ನಡೆಸಲ್ಪಡುವುದು' (೧೬೨) ಎಂದು ವಿವರಿಸುವಲ್ಲಿ ತೋರಿರುವ ಆಳವಾದ ಅಭ್ಯಾಸದ ಅರಿವಾಗುತ್ತದೆ. ಇಂತಹ ಹಲವಾರು ಲೆಕ್ಕಗಳನ್ನು ಗ್ರಂಥದುದ್ದಕ್ಕೂ ಕಾಣಬಹುದಾಗಿದೆ. ಇಲ್ಲಿ ವಿಷಯನಿರೂಪಣೆಗೆ ಸಹಾಯಕವಾಗಿ ಅಲೌಕಿಕ ಗಣಿತದ ಜತೆಗೆ 'ಕಾವಟಿಕಸ್ತಂ ಕಾವಟಿಯೊಳಿಟ್ಟು ಭಾರಮಂ ಕೊಂಡು [ಪೋಪಂತೆ)...ಭವ್ಯಜೀವನುಂ ಲಬ್ಬಿಯಿಂದಂ ದೊರೆಕೊಂಡ ಸಮ್ಯಗ್ದರ್ಶನಾದಿ ಸಾಮಗ್ರಿಸಂಪನ್ನನಪ್ಪ ತತ್ತ್ವಜ್ಞಾನಿ ಶರೀರಕಾವಟಿಯೊಳು ತೀವಿರ್ದು' (೧೬೬) 'ರತ್ನಪರ್ವತದ ಶಿಖರದತ್ತಣಿಂದಂ ಮಿಥ್ಯಾತ್ವಪರಿಣಾಮವೆಂಬ ಭೂಮ್ಯಾಭಿಮುಖನೆನ್ನೆವರಮಂತರಾಳ ಕಾಲದೊಳು ಏಕಸಮಯಮಾದಿಯಾಗಿ ಷಡಾವಲಿಕಾಲಪರ್ಯಂತಂ' (೩೧) 'ನಿಂಬಕಾಂಜೀರಸದೃಶದೆ' (೫೧) 'ಜ್ವರಿತನಪ್ಪವಂಗೆ ಮಧುರಕ್ಷೀರಾದಿ ರಸಂ ನ ರೋಚತೇ ಸೊಗಸದಂತೆ (೩೦) ಎಂಬಂತಹ ಉಪಮಾನಗಳ ಬಳಕೆಯಾಗಿದೆ. ಅಲ್ಲದೆ 'ಅಣುಕಡ್ಡಿಪದೇಣ ಹಿದೇ ಪಚಯೇ ಪಚಯಂತು ಹೋದಿ ತೆರಿಚ್ಛೆ (೪೬) 'ಚಯದಣಹೀಣಂ ದಂ ಪದಭಜಿದೇ ಹೋದಿ ಆದಿಪರಿಮಾಣಂ' (೪೬) ಎಂಬಿವೇ ಮೊದಲಾದ ಸೂತ್ರಗಳನ್ನೂ 'ಧನಸ್ಯ ಋಣಂ ರಾಶೀಯಣಂ ಭವತಿ' (೪೭) 'ಆದ್ಯಂತ ಸದೃಶಂ ರಾಶಿಕಂ ಮಧ್ಯನಾಮ ಭವೇತ್' (೩೮) ಮೊದಲಾದ ನ್ಯಾಯಗಳನ್ನೂ 'ಆಹಾರವಿಶಿಷ್ಟಾನ್ನಾದೊ ಸಂಜ್ಞಾ ವಾಂಛಾ ಆಹಾರಸಂಜ್ಞಾ' (೧೩೦) ಎಂಬಂತಹ ನಿರುಕ್ತಿಗಳನ್ನೂ ವಿಷಯನಿರೂಪಣೆಗೆ ಸಹಕಾರಿಯಾಗಿ ಹೇಳಲಾಗಿದೆ. ಹೀಗೆ ವಿವರಣೆಯನ್ನು ನೀಡುವಲ್ಲಿ ಅನೇಕ ಅಪೂರ್ವ ಪದಪ್ರಯೋಗಗಳು ಕಂಡುಬರುತ್ತವೆ. ಸಾಮಾನ್ಯ ಗಣಿತಶಾಸ್ತ್ರದಲ್ಲಿ ರೂಢಿಯಲ್ಲಿರುವ ಗುಣಾಕಾರ ಭಾಗಹಾರ ಕ್ರಮಯೋಜನೆ ಕ್ಷೇತ್ರಫಲ ವರ್ಗ ಸಂವರ್ಗ ಎಂಬ - 304 - Jain Education International For Private & Personal Use Only www.jainelibrary.org

Loading...

Page Navigation
1 ... 344 345 346 347 348 349 350 351 352 353 354 355 356 357 358 359 360 361 362 363 364 365 366 367 368