________________
ಎಲ್ಲ ಪ್ರಾಕೃತಗಾಹೆಗಳಿಗೆ ಅನುವಾದಗೊಂಡ ಸಂಸ್ಕೃತ ಶ್ಲೋಕಗಳಿವೆ. ಆನಂತರ ಕನ್ನಡ ವ್ಯಾಖ್ಯಾನ ಮುಂದುವರಿಯುತ್ತದೆ. ಸಂಜ್ಞಾಪರೂಪಣೆಯಲ್ಲಿ ಮೈಥುನಸಂಜ್ಞಾಸಾಮಗ್ರಿಯ ಬಗೆಗೆ ವಿವರಿಸುತ್ತಾ, "ವೃಷ್ಯರಸಂಗಳ ಭೋಜನ ಕಾಮಕಥಾ ಶ್ರವಣಾನುಭೂತ ಕಾಮವಿಷಯಸ್ಕರಣಾದ್ಯುಪಯೋಗ ಕುಶೀಲರಪ್ಪ ವಿಟಕಂದರ್ಪಾದಿ ಜನಂಗಳ ಸೇವೆ ಗೋಷ್ಟಿಯಿಂದಮಂದೀ ಬಹಿರಂಗಕಾರಣಂಗಳಿಂದಮುಂ ಅಂತರಂಗಕಾರಣಮಪ್ಪ ಸ್ತ್ರೀ ಪುಂ ನಪುಂಕಸಕವೇದಾನ್ಯತ ಮನೋಕಷಾಯೋದೀರಣೆಯಿಂದಮಿಂತೀ ಚತುರ್ವಿಧ ಕಾರಣಂಗಳಿಂದಂ ಮೈಥುನಸಂಜ್ಞೆ ಪುಟ್ಟುಗುಂ" ಎಂದು ವಿವರಿಸಲಾಗಿದೆ. (೧೩೧) |
ಒಂಬತ್ತನೆಯ ವಿಭಾಗದ ಯೋಗಮಾರ್ಗಣಪ್ರರೂಪಣೆಯಲ್ಲಿ ನಿರೂಪಣೆಯಾಗಿರುವ ಸತ್ಯದ ಬಗೆಗೆ ಹೇಳುತ್ತಾ "ಜನಪದದೊಳುಸಂವೃತಿಯೊಳಂ-ಸಮ್ಮತಿಯೊಳಂ ಮೇಣುಸ್ಥಾಪನೆಯೊಳಂ ನಾಮದೊಳಂ ರೂಪದೊಳು ಪ್ರತೀತ್ಯದೊಳಂ ವ್ಯವಹಾರದೊಳಂ ಸಂಭಾವನೆಯೊಳಂ ಭಾವದೊಳಂ ಉಪಮೆಯೊಳಂ ಇಂತು ಪತ್ತೆಡೆಯೊಳು ಸತ್ಯ ದಶವಿಧಮಕ್ಕುಂ' (೧೭೮) ಎಂದು ಹೇಳಿ ಒಂದೊಂದಕ್ಕೂ ಉದಾಹರಣೆ ನೀಡಲಾಗಿದೆ.
ಕೇಶವಣ್ಣನು ಜನಪದಸತ್ಯದ ವಿವರಣೆಯನ್ನು "ಜನಪದಂಗಳೊಳಲ್ಲಿಯ ವ್ಯವರ್ಹಜನಂಗಳ ರೂಢಮತ್ತಾವುದೊಂದು ವಚನಮದು ಜನಪದಸತ್ಯಂ" ಎಂದು ಹೇಳಿ ಮುಂದುವರಿದು "ಎಂತೀಗಳು ಮಹಾರಾಷ್ಟದೊಳು ಭಾತು ಭೇಟು, ಆಂಧ್ರದೇಶದೊಳು ವಟಿಕಸು ಕೂಡು (ವಂಟಮು ಕೂಡು), ಕರ್ಣಾಟಕ ದೇಶದೊಳು ಕೂಳು, ದ್ರವಿಡದೇಶದೊಳು ಚೋಟು ಇಂತೀ ಹಿಂಗೆ ರೂಢಮದು ಸಂವೃತಿಸತ್ಯಂಸಮ್ಮತಿಸತ್ಯಂ' (೧೭೮) ಎಂದು ನಿರೂಪಿಸಿರುವುದರಲ್ಲಿ ವ್ಯಾಖ್ಯಾನಕಾರರ ವಿಷಯಜ್ಞಾನವನ್ನೂ ಉನ್ನತ ನಿರೂಪಣೆಯನ್ನೂ ಮನಗಾಣಬಹುದು. ಹೀಗೆಯೇ ಉಳಿದ ಸ್ಥಾಪನಾದಿ ಸತ್ಯಗಳಿಗೂ ವಿಸ್ತ್ರತ ವಿವರಣೆಯನ್ನೂ ವಿಷಯಸ್ಪಷ್ಟತೆಯನ್ನೂ ನೀಡಲಾಗಿದೆ.
ಭಾಷೆಯ ಬಗೆಗೆ ವಿವರಣೆ ನೀಡುವ ಮತ್ತೊಂದು ಸಂದರ್ಭವನ್ನು ಗಮನಿಸಬಹುದು. 'ಉಭಯ ವಚನಭೇದಂಗಳನ್ನು ಹೇಳುತ್ತೇನೆ ಎಂದು "ಆಗಚ್ಛ ಭೋ ದೇವದತ್ತ ಇತ್ಯಾದಾಹ್ವಾನ ಭಾಷೆ ಆಮಂತ್ರಣೀ ಎಂಬುದು. ಇದಂ ಮಾಡು ಎಂಬುದು ಮೊದಲಾದ ಕಾರ್ಯನಿಯೋಜನ ಭಾಷೆ ಆಜ್ಞಾಪನೆ ಎಂಬುದು. ಇದನೆನಗೆ ಕೊಡು ಎಂಬುದು ಮೊದಲಾದ ಪ್ರಾರ್ಥನಾಭಾಷೆ ಯಾಚನೀ ಎಂಬುದು. ಏನಿದೆಂಬುದು ಮೊದಲಾದುದು ಪ್ರಶ್ನೆಭಾಷೆ ಅಪ್ಪಚನೀ ಎಂಬುದು. ಏಗೆಯ್ಯನೆಂಬುದು ಮೊದಲಾದ ವಿಜ್ಞಾಪನಭಾಷೆ ಪ್ರಜ್ಞಾಪನೆ ಎಂಬುದು. ಇದು ವರ್ಜಿಸುವೆನೆಂಬುದು ಮೊದಲಾದ ಪರಿಹರಣಭಾಷೆ ಪ್ರತ್ಯಾಖ್ಯಾನಿ ಎಂಬುದು. ಇದು ಬಲಾಕೆಯೊ ಪತಾಕೆಯೊ ಎಂಬುದು ಮೊದಲಾದಸಂದೇಹಭಾಷೆ ಸಂಶಯವಚನಿ ಎಂಬುದು. ಅಂತಕ್ಕುಮೆಂಬುದು ಮೊದಲಾದ ಇಚ್ಛಾನುವೃತ್ತಿ ಭಾಷೆ ಇಚ್ಛಾನುಲೋಮವಚನಿ ಎಂಬುದು. ಒಂದು ಚ ಶಬ್ದಂ ಸಮುಚ್ಚಯಾರ್ಥವೊಂದು ಚರಮ ಚ ಶಬ್ದಮುಕ್ತ ಸಮುಚ್ಚಯಾರ್ಥಂ' (೧೭೯-೮೦) ಎಂದು ಆಮಂತ್ರಣಿ ಆಜ್ಞಾಪನೆ ಯಾಚನಿ ಆಪ್ಪಚ್ಚನಿ ಪ್ರಜ್ಞಾಪನೆ ಪ್ರತ್ಯಾಖ್ಯಾನಿ ಸಂಶಯವಚನಿ ವಚನಿ ಚ ಇವುಗಳ ಅರ್ಥವಿವರಣೆಯನ್ನು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿರುವುದು
- 303 -
Jain Education International
For Private & Personal Use Only
www.jainelibrary.org