Book Title: Universal Values of Prakrit Texts
Author(s): Prem Suman Jain
Publisher: Bahubali Prakrit Vidyapeeth and Rashtriya Sanskrit Sansthan
View full book text
________________
ಸಾರಂ ಸಾರತ್ರಿತಯಂ
ಮಾರಮದಪ್ರಹರಣೆಕದಕ್ಷನ ಮತದೊಳ್
ಧಾರಿಣಿಯೊಳೊಪ್ಪಿದಂತ
ತಾರತ್ರಯವೇದಿಯೆನಿಸಿ ಕೇಶವವರ್ಯ೦ || ೧-೨೫ ||
ಎಂದು ಕೇಶವನನ್ನು ಕೊಂಡಾಡಿದ್ದಾನೆ. ಇದರಲ್ಲಿ ಕಂಡುಬರುವ 'ಮಾರಮದಪ್ರಹರಣೆಕದಕ್ಷ' ಎಂಬುದರಿಂದ ಕಾಮನನ್ನು ಜಯಿಸಿದವನು ಎಂದು ಅರ್ಥ ಬರುವುದರಿಂದ ಕೇಶವಣ್ಣನು ಮುನಿಯಾಗಿದ್ದನೆ? ಎಂಬ ಅನುಮಾನವೂ ಉಂಟಾಗುತ್ತದೆ. ಇಲ್ಲಿ ಸಾರತ್ರಯ' ಎಂದರೆ ಗೊಮ್ಮಟಸಾರ, ತ್ರಿಲೋಕಸಾರ ಮತ್ತು ಶ್ರಾವಕಾಚಾರ ಇರಬಹುದು. ಆದರೆ ಈತನು ಮಾಡಿರುವ ತ್ರಿಲೋಕಸಾರ ಕನ್ನಡ ವ್ಯಾಖ್ಯಾನ ದೊರೆತಿರುವುದಿಲ್ಲ. ನೇಮಿಚಂದ್ರ ಸಿ.ಚ.ಗಳ ತ್ರಿಲೋಕಸಾರಕ್ಕೆ ಒಂದು ಕನ್ನಡ ವ್ಯಾಖ್ಯಾನ ದೊರೆತರೂ (ಕೆ ೩೫೩/೧ ಆಗಮದರ್ಶನ ಹಸ್ತಪ್ರತಿ ಭಂಡಾರ ಶ್ರವಣಬೆಳಗೊಳ) ಇದು ಅಸಮಗ್ರವಾಗಿರುವುದರಿಂದ ಈ ಟೀಕಿನ ಕರ್ತೃ ಯಾರೆಂಬುದು ಖಚಿತವಾಗುವುದಿಲ್ಲ.
ಈತನನ್ನು ಕೆಲವರು ಕೇಶವವರ್ಣಿ ಎಂದು ಕರೆದರೂ ಮಂಗರಾಜ ಮತ್ತು ದೇವಚಂದ್ರ ಇಬ್ಬರೂ 'ಕೇಶವವರ್ಯ' ಎಂದು ಕರೆದಿದ್ದಾರೆ. ಗೊಮ್ಮಟಸಾರದಲ್ಲಿಯೂ ಕೇಶವ, ಕೇಶವಣ್ಣ ಎಂಬ ಹೆಸರುಗಳು ಮಾತ್ರ ದೊರೆಯುತ್ತವೆ. ಅಲ್ಲದೆ ಶ್ರಾವಕಾಚಾರ ವೃತ್ತಿಯಲ್ಲಿ 'ಕೇಶನ್ನ' ಎಂದು ಹೇಳಲಾಗಿದೆ. ಆದುದರಿಂದ ನಾವು ಈ ಗ್ರಂಥದಲ್ಲಿ 'ಕೇಶವಣ್ಣ ಎಂಬ ಹೆಸರನ್ನೇ ಮಾನ್ಯ ಮಾಡಿದ್ದೇವೆ. ಹೆಸರೇನೇ ಇರಲಿ; ಈತನ ಪ್ರಾಕೃತ ಮತ್ತು ಸಂಸ್ಕೃತ ಪಾಂಡಿತ್ಯ, ಆಗಮಶಾಸ್ತ್ರದಲ್ಲಿರುವ ಈತನ ಪರಿಣತಿ, ವಸ್ತುವನ್ನು ವಿಮರ್ಶಿಸುವ ಸಾದರಪಡಿಸುವ ರೀತಿ, ಅದಕ್ಕೆ ಬಳಸಿರುವ ಲೋಕೋತ್ತರ ಗಣಿತ ಈತನ ಅರಿವಿನ ಎಲ್ಲೆಯನ್ನು ಅಗಾಧಗೊಳಿಸುತ್ತದೆ; ಪಾಂಡಿತ್ಯದ ಪಾರಮ್ಯತೆಯನ್ನು ಸಿದ್ಧಪಡಿಸುತ್ತದೆ. ವ್ಯಾಖ್ಯಾನದ ಸ್ವರೂಪವನ್ನು ಗಮನಿಸಿದಾಗ ಹಳಗನ್ನಡ ಶೈಲಿಯಲ್ಲಿ ಕೇಶವಣ್ಣನ ಹಿರಿಯ ಸಾಧನೆ ಸಿದ್ಧಿಗಳ ಅರಿವಾಗುತ್ತದೆ. ಹಳಗನ್ನಡ ಎಂದರೂ ಇದರೊಡನೆ ಸಂಸ್ಕೃತ ಪದಪುಂಜಗಳ ಹೇರಳ ಬಳಕೆಯಾಗಿರುವುದು ಕಂಡುಬರುತ್ತದೆ. ಜೀವತತ್ವ ಪ್ರದೀಪಿಕೆ
ಹೆಸರೇ ಸೂಚಿಸುವಂತೆ ಜೀವನಿಗೆ ಸಂಬಂಧಿಸಿದ ಎಲ್ಲ ಮಗ್ಗುಲುಗಳನ್ನೂ ತೆರೆದಿಡುವ ಸಾಹಸದ ಪ್ರದೀಪಿಕೆ ಇದಾಗಿದೆ. ಜೈನಾಗಮದ ಕರ್ಮಸಿದ್ಧಾಂತಕ್ಕೆ ಸಂಬಂಧಿಸಿದ ವಿಚಾರ ಸಂಕ್ಷಿಪ್ತವಾಗಿ ಗಾಹೆಗಳ ಮೂಲಕ ನಿರೂಪಿತವಾಗಿರುವುದನ್ನು ವಿಕೃತವಾಗಿ ವಿಶದಪಡಿಸುವುದೇ ವ್ಯಾಖ್ಯಾನದ ಗುರಿಯಾಗಿದೆ. ಈ ಗುರಿಯ ಈಡೇರಿಕೆಗಾಗಿ ಆದಿಯಲ್ಲಿ
Jain Education International
ಅತಿವಿಶದ ಬೋಧನಿಧಿ ನಿ
ರ್ಜಿತ ಘಾತಿಚತುಷ್ಟಯಂ ಪ್ರಜಾಜೀವಿತನು ನ್ನತ ವೃಷಭನಾಥವದನೋ
ದಿತವಾದುದು ಧರ್ಮತೀರ್ಥಮಾದ್ಯಂ ಧರೆಯೊಳ್ ||
- 301 -
For Private & Personal Use Only
www.jainelibrary.org