Book Title: Universal Values of Prakrit Texts
Author(s): Prem Suman Jain
Publisher: Bahubali Prakrit Vidyapeeth and Rashtriya Sanskrit Sansthan

Previous | Next

Page 341
________________ 'ಗೊಮ್ಮಟಸಾರ'. ಈ ಗ್ರಂಥವು ಜೀವ ಅಜೀವಗಳ ವಿಸೃತ ನಿರೂಪಣೆಯನ್ನೊಳಗೊಂಡ ಅನುಪಮ ಕೃತಿ. ಜೈನ ಸಿದ್ದಾಂತಗಳ ಸಾರಸರ್ವಸ್ವವನ್ನೊಳಗೊಂಡಂತಹ ಮಹತ್ವವನ್ನು ಪಡೆದಿರುವ ಈ ಕೃತಿ ಜೈನತತ್ತ್ವವೇತ್ತರಿಗೆ ಜ್ಞಾನದ ಬತ್ತದ ಸೆಲೆಯಾಗಿದೆ. ಭೌತಿಕ ಅಭೌತಿಕ ವಿಷಯಗಳೆಲ್ಲವನ್ನೂ ಕೂಲಂಕಷವಾಗಿ ವಿಮರ್ಶಿಸಿ ವಿಸ್ತರಿಸುವ ರೀತಿ ಅನನ್ಯವಾದುದು. ಇದರಲ್ಲಿ ಲೌಕಿಕ ವಿಚಾರಗಳು ಹಾಗೂ ಅಲೌಕಿಕ ಅನುಭವಗಳು ಬಿತ್ತರಗೊಂಡಿವೆ. ಇಂತಹ ಅಪರೂಪದ ಹಿರಿಯ ಸಿದ್ದಾಂತ ಗ್ರಂಥರಚನೆಯಾದುದು ಕ್ರಿ. ಶ. ೯೭೮ರಲ್ಲಿ ಇದರಲ್ಲಿ ಜೀವಕಾಂಡ ಮತ್ತು ಕರ್ಮಕಾಂಡ ಎಂಬ ಎರಡು ವಿಭಾಗಗಳಿವೆ. ಅಂದಿನ ಜನಸಾಮಾನ್ಯ ಭಾಷೆಯಾಗಿದ್ದ ಪ್ರಾಕೃತದಲ್ಲಿ ರಚನೆಯಾದ ಈ ಕೃತಿಯ ಜೀವಕಾಂಡದಲ್ಲಿ ೭೩೨ ಗಾಹೆಗಳೂ ಕರ್ಮಕಾಂಡದಲ್ಲಿ೯೭೨ ಗಾಹೆಗಳೂ ಇವೆ. ಇವುಗಳಲ್ಲಿ ತ್ರಿಲೋಕದ ಸಾಕ್ಷಾತ್ಕಾರವಿದೆ; ಈ ಲೋಕದ ಜೀವ ಅಜೀವಗಳ ವಿವಿಧ ಘಟ್ಟಗಳ ಸಾಲೋಕ್ಯ ಸಾಮೀಪ್ಯವಿದೆ. ಸುಲಭವಾಗಿ ಬಾಯಿಪಾಠದ ಮೂಲಕ ವಿಷಯ ಪ್ರಸಾರವಾಗಬೇಕೆಂಬ ಬಯಕೆಯಿಂದ ಮುಷಿಗ್ರಾಹ್ಯ ದೃಷ್ಟಿಯಿಂದ ರಚಿತವಾದ ಈ ಗಾಹೆಗಳ ವಿಸ್ಕತ ವಿವರಣೆಯ ಆವಶ್ಯಕತೆಯನ್ನು ಮನಗಂಡ ಹಿರಿಯ ವಿದ್ವಾಂಸರು ಸಂಸ್ಕೃತದಲ್ಲಲ್ಲದೆ ತಮ್ಮ ತಮ್ಮ ದೇಸೀಯ ಭಾಷೆಗಳಲ್ಲಿಯೂ ವ್ಯಾಖ್ಯಾನಗಳನ್ನು ರಚಿಸಿದರು. ಅದರಂತೆ 'ಗೊಮ್ಮಟಸಾರ'ಗ್ರಂಥಕ್ಕೆ ಸಂಸ್ಕೃತ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವ್ಯಾಖ್ಯಾನಗಳು ರಚಿತವಾಗಿವೆ. ಹಿರಿಯ ವಿದ್ವಾಂಸರಾಗಿದ್ದ ಡಾ. ಆ. ನೇ. ಉಪಾಧ್ಯೆ ಅವರು ನಿರ್ಣಯಿಸಿರುವಂತೆ 'ಮಂದಪ್ರಬೋಧಿಕಾ' ಎಂಬ ಸಂಸ್ಕೃತ ವ್ಯಾಖ್ಯಾನವನ್ನು ಅಭಯಚಂದ್ರರು ರಚಿಸಿರುವರೆಂದೂ ಇದು ಜೀವಕಾಂಡದ ೩೮೩ನೆಯ ಗಾಹೆಯವರೆಗೆ ಮಾತ್ರ ದೊರೆತಿರುವುದೆಂದೂ ತಿಳಿಸಿದ್ದಾರೆ. ಹೀಗಾಗಿ ಸಂಸ್ಕೃತದಲ್ಲಿ ರಚಿತವಾಗಿರುವ ಮಂದಪ್ರಬೋಧಿಕಾ ಟೀಕೆಯು ಅಸಮಗ್ರವಾಗಿ ನಿಂತಿದೆ. ಮತ್ತೊಂದು ಸಂಸ್ಕೃತ ಟೀಕೆಯಾದ 'ಜೀವತತ್ತ್ವಪ್ರದೀಪಿಕೆ'ಯು ಗೊಮ್ಮಟಸಾರದ ಕರ್ತೃಗಳಿಂದ ಬೇರೆಯಾದ, ಸು. ೧೬೫೦ರಲ್ಲಿದ್ದ ನೇಮಿಚಂದ್ರ ಎಂಬುವರಿಂದ ರಚಿತವಾಗಿರುವುದನ್ನು ದೃಢಪಡಿಸುತ್ತಾರೆ. ಕೇಶವಣ್ಣನು ಕನ್ನಡದಲ್ಲಿ ರಚಿಸಿರುವ 'ಜೀವತತ್ತ್ವಪ್ರದೀಪಿಕೆ'ಯೇ ನೇಮಿಚಂದ್ರರ ಸಂಸ್ಕೃತ ಜೀವಪ್ರದೀಪಿಕೆಗೆ ಆಧಾರವಾಗಿದೆ ಎಂದು ಹೇಳಿದ ಅವರು ಅದಕ್ಕೆ ಆಧಾರವಾಗಿ ನೇಮಿಚಂದ್ರರು ಹೇಳಿದ ಕೇಶವವರ್ಣಿ ಭವ್ಯ ವಿಚಾರ್ ಕರ್ಣಾಟಕ ಟೀಕಾ ಅನುಸಾರ್ ಸಂಸ್ಕೃತ ಟೀಕಾ ಕೀನೀ ಏಹು ಜೋ ಅಶುದ್ ಸೋ ಶುದ್ ಕರೇಹು || ಎಂದು ಹೇಳಿರುವುದನ್ನು ಉದಾಹರಿಸಿದ್ದಾರೆ. ಪಂ. ಖಬಚಂದ್ರ, ಪ್ರೊ, ಮನೋಹರಲಾಲ್ ಮೊದಲಾದವರು ಸಂಸ್ಕೃತ ಜೀವ, ಪ್ರದೀಪಿಕೆಯನ್ನು ಕೇಶವವರ್ಣಿಯೂ ಕನ್ನಡ ಟೀಕೆಯನ್ನು ಚಾವುಂಡರಾಯನೂ ರಚಿಸಿರುವರೆಂದು ನಿರ್ಣಯಿಸಿದ್ದರು. ಆದರೆ ಈ ಬಗೆಗೆ ಅವರು ಕೊಡುವ ಕಾರಣಗಳನ್ನೆಲ್ಲಾ ವಿಮರ್ಶಿಸಿದ ಆ. ನೇ. ಉಪಾಧ್ಯೆ ಅವರು ಕನ್ನಡ ಟೀಕೆಯು ಕೇಶವವರ್ಣಿಯದೆಂದೂ ಅದನ್ನನುಸರಿಸಿ ರಚಿಸಿದ ಸಂಸ್ಕೃತ ಜೀ. ಪ್ರ. ಯು ನೇಮಿಚಂದ್ರನದೆಂದೂ 4. 299 -- Jain Education International For Private & Personal Use Only www.jainelibrary.org

Loading...

Page Navigation
1 ... 339 340 341 342 343 344 345 346 347 348 349 350 351 352 353 354 355 356 357 358 359 360 361 362 363 364 365 366 367 368