Book Title: Universal Values of Prakrit Texts
Author(s): Prem Suman Jain
Publisher: Bahubali Prakrit Vidyapeeth and Rashtriya Sanskrit Sansthan

Previous | Next

Page 340
________________ 36. ಗೊಮ್ಮಟಸಾರ - ಮಹತ್ವದ ಜೈನ ಸಿದ್ದಾಂತ ಗ್ರಂಥ Gommatasara - A Philosophical Text ''ಮಹಾವೀರ ತೀರ್ಥಂಕರರ ದಿವ್ಯಧ್ವನಿಯಿಂದ ಹೊರಟ ದ್ವಾದಶಾಂಗರೂಪವಾಗಿರುವ ಶಾಸ್ತ್ರವನ್ನು ಗಣಧರರು ರಚಿಸಿದರು. ಅನಂತರ ಇದು ಮೌಖಿಕ ಪರಂಪರೆಯಿಂದ, ಆಚಾರ್ಯ ಪರಂಪರೆಯವರೆಗೆ ಮುಂದುವರಿಯಿತು. ಒಬ್ಬ ಆಚಾರ್ಯರು ಮತ್ತೊಬ್ಬ ಆಚಾರ್ಯರಿಗೆ ಅವರ ಧೀಶಕ್ತಿಯನ್ನು ಗಮನಿಸಿ ಶ್ರುತವನ್ನು ಧಾರೆಯೆರೆಯುತ್ತಾ ಬಂದರು. ಹೀಗೆ ಮೌಖಿಕವಾಗಿ ನಡೆದುಬಂದ ಪರಂಪರೆ ಈ ಪಂಚಮಕಾಲದಲ್ಲಿ ಸ್ಮರಣಶಕ್ತಿ ಧಾರಣಶಕ್ತಿ ಕಡಿಮೆಯಾಗುತ್ತಾ ಬಂದಾಗ ಶ್ರುತಜ್ಞಾನವನ್ನು ಲಿಪಿಬದ್ಧಮಾಡಬೇಕೆನ್ನುವ ಯೋಚನೆ ಪ್ರಾರಂಭವಾಯಿತು. ಹೀಗೆ ಆಚಾರ್ಯ ಪರಂಪರೆಯಿಂದ ಲಿಪಿಬದ್ದವಾದ ಆಗಮದರ್ಶನ ಗ್ರಂಥಗಳು ಪ್ರಚಾರಕ್ಕೆ ಬಂದವು'' ಎಂಬುದಾಗಿ ಜೈನಸಿದ್ದಾಂತ ಗ್ರಂಥಗಳ ಬಗೆಗೆ ಶ್ರುತಪಡಿಸಿರುವ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಮಾತುಗಳು ಮನನೀಯವಾಗಿವೆ; ಜೈನಾಗಮ ದರ್ಶನಗ್ರಂಥಗಳು ಅಸ್ತಿತ್ವಕ್ಕೆ ಬಂದ ರೀತಿಯನ್ನು ಸಾದರಪಡಿಸುತ್ತವೆ. ಇಂತಹ ಮಹತ್ವದ ಗ್ರಂಥಗಳಲ್ಲಿ ಶ್ರವಣಬೆಳಗೊಳದಲ್ಲಿ ನೆಲೆನಿಂತಿದ್ದ ಆಚಾರ್ಯ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳಿಂದ ರಚಿತವಾದ 'ಗೊಮ್ಮಟಸಾರ' ಬಹುಮಹತ್ವವನ್ನು ಪಡೆದ ಅಪರೂಪದ ಜೈನ ಸಿದ್ದಾಂತ ಗ್ರಂಥವಾಗಿದೆ. ಇಂತಹ ಗ್ರಂಥಗಳಲ್ಲಿ ಈಗ ಉಪಲಬ್ಧವಿರುವಂತೆ ಷಟ್ಕಂಡಾಗಮ ಮತ್ತು ಕಷಾಯಪಾಹುಡಗಳು ಹಾಗೂ ಅವುಗಳ ಟೀಕೆಗಳಾದ ಧವಳ ಜಯಧವಳ ಮಹಾಧವಳ ಗ್ರಂಥಗಳು ಪ್ರಥಮಸ್ಥಾನದಲ್ಲಿವೆ. ಈ ಧವಳ ಗ್ರಂಥಗಳ ಮೂಲ ಓಲೆಕಟ್ಟುಗಳನ್ನು ಪವಿತ್ರವೆಂದು ಪರಿಭಾವಿಸಿದ ಜೈನಸಂಸ್ಕೃತಿ ಸಂರಕ್ಷಕರು ದಕ್ಷಿಣಕಾಶಿ ಎಂದು ಪ್ರಸಿದ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಬಸದಿಯಲ್ಲಿ ಸಿದ್ದಾಂತ ದರ್ಶನಕ್ಕೆ ಮೀಸಲಾಗಿರಿಸಿದ್ದಾರೆ. ಇಂತಹ ಪವಿತ್ರ ಗ್ರಂಥಗಳ ಶಾಶ್ವತ ರಕ್ಷಣೆಯಾಗಬೇಕೆಂದು ಬಯಸಿದ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿನ ಅಧಿಕಾರಿಗಳು ೧೯೫೬ರಷ್ಟರಲ್ಲಿಯೇ ಮೂಡಬಿದರೆಯಲ್ಲಿನ ಹಸ್ತಪ್ರತಿ ಸಂರಕ್ಷಕರನ್ನು ಒಡಂಬಡಿಸಿ ಅವುಗಳ ಮೈಕ್ರೋಫಿಲಂ ಮಾಡಿ ತಂದುದು ಒಂದು ಅವಿಸ್ಮರಣೀಯ ಘಟನೆಯಾಗಿದೆ. Jain Education International - ಪ್ರೊ. ಬಿ.ಎಸ್. ಸಣ್ಣಯ್ಯ, ಮೈಸೂರು ಪವಿತ್ರ ಗ್ರಂಥಗಳೆಂದು ಪರಿಗಣಿತವಾದ ಅಗಾಧ ವಿಸ್ತಾರತೆಯನ್ನು ಹೊಂದಿರುವ ಧವಲತ್ರಯ ಗ್ರಂಥಗಳ ಸಂಕ್ಷಿಪ್ತ ಪರಿಚಯವನ್ನು ಪಡೆಯಬೇಕೆಂಬ ಬಯಕೆಯನ್ನು ಗಂಗ ರಾಚಮಲ್ಲದೊರೆಯಲ್ಲಿ ದಂಡನಾಯಕನಾಗಿದ್ದ, ೫೭ ಅಡಿ ಎತ್ತರದ ಸುಂದರ ಬಾಹುಬಲಿ ಮೂರ್ತಿಯನ್ನು ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ಸಾಕಾರಗೊಳಿಸಿದ ಚಾವುಂಡರಾಯನು ತನ್ನ ಗುರುಗಳಾಗಿದ್ದಆಚಾರ್ಯ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳಲ್ಲಿ ಬಿನ್ನವಿಸಿಕೊಂಡನು. ಈ ಬಿನ್ನಹದ ಕುರುಹಾಗಿ ರಚನೆಗೊಂಡ ಧವಳತ್ರಯಗಳ ಸಾರಸರ್ವಸ್ವವನ್ನು ಒಳಗೊಂಡಿರುವ ಪುಣ್ಯಗ್ರಂಥವೇ -298 For Private & Personal Use Only www.jainelibrary.org

Loading...

Page Navigation
1 ... 338 339 340 341 342 343 344 345 346 347 348 349 350 351 352 353 354 355 356 357 358 359 360 361 362 363 364 365 366 367 368