________________
ಬಾವಿಯ ಕಪ್ಪೆ, ಎರಡು ಆಮೆಗಳು ಮೊದಲಾದ ಅನೇಕ ಸುಂದರ ಪ್ರಾಣಿಕಥೆಗಳು ಅಂಕಿತವಾಗಿವೆ. ಆಚಾರ ಮತ್ತು ಧರ್ಮದ ಉಪದೇಶವನ್ನು ಪಶು ಹಾಗೂ ಅನ್ಯ ಪ್ರಾಣಿಗಳ ದೃಷ್ಟಾಂತವನ್ನು ನೀಡುವ ನಾನಾ ಪ್ರಕಾರದ ಕಥಾನಕಳು ಮತ್ತು ಘಟನೆಗಳ ಮೂಲತ ನೀಡಲಾಗಿದೆ. 'ನ್ಯಾಯಧಮ್ಮಕಹಾಓ'ದ ಪ್ರಾಣಿಕಥೆಗಳು ಸ್ವಯಂ ಭಗವಾನ್ ಮಹಾವೀರ ಮುಖದಿಂದ ಹೇಳಲಾಗಿದೆ. ನಿರ್ಯುಕ್ತಿಗಳಲ್ಲಿ ಆನೆ, ಮೂಷಕ (ಇಲಿ), ಹರಿಣ ಮತ್ತು ವಾನರ ಮೊದಲಾದ ಪ್ರಾಣಿಗಳ ಅನೇಕ ಕಥೆಗಳು ದೊರೆಯುತ್ತವೆ. ವಾಸ್ತವವಾಗಿ ಪಂಚತಂತ್ರ, ಹಿತೋಪದೇಶ ಮೊದಲಾದ ಗ್ರಂಥಗಳ ಪ್ರಾಣಿಕಥೆಗಳು ಪ್ರಾಕೃತ ಕಥೆಗಳಿಂದಲೇ ಹೊರಗೆ ಬಂದಿವೆ.
ಪ್ರಾಕೃತ ಕಥೆಗಳಲ್ಲಿ ಐಹಿಕ ಸಮಸ್ಯೆಗಳ ಚಿಂತನೆ, ಪಾರಲೌಕಿಕ ಸಮಸ್ಯೆಗಳಿಗೆ ಸಮಾಧಾನ, ಧಾರ್ಮಿಕ, ಸಾಮಾಜಿಕ ಪರಿಸ್ಥಿತಿಗಳ ವಿವರಣ, ಸಂಗೀತ ಚಿತ್ರ ವಾಸ್ತು ಕಥೆಗಳ ಸುಂದರ ಉದಾಹರಣೆ ಹಾಗೂ ವಿಭಿನ್ನ ಪ್ರಕಾರದ ಪರಿಸ್ಥಿತಿಗಳ ದಾಖಲೆಯನ್ನು ಮಾಡಲಾಗಿದೆ. ಈ ಕಥೆಗಳ ಉದ್ದೇಶ ಕೇವಲ ಮನೋರಂಜನೆ ನೀಡುವುದಷ್ಟೇ ಅಲ್ಲ, ಪ್ರತಿಯಾಗಿ ವ್ಯಕ್ತಿತ್ವದ ನಿರ್ಮಾಣ ಮತ್ತು ಚರಿತ್ರದ ಉತ್ಕರ್ಷವನ್ನು ತೋರಿಸುವುದಾಗಿದೆ. ಇವುಗಳಲ್ಲಿ ವರ್ಣಾಶ್ರಮ ಧರ್ಮದ ಬಗ್ಗೆ ಬಂಡಾಯ ತೋರಲಾಗಿದೆ. ಮಾನವ ಸಮತ್ವದ ಸಿದ್ಧಾಂತ ಹಾಗೂ ಜನ್ಮ-ಜನ್ಮಾಂತರದ ಸಂಸ್ಕಾರಗಳ ಅಳಿಯದ ಪ್ರಭಾವ ಹಾಗೂ ಕರ್ಮಫಲವನ್ನು ತ್ರಿಕಾಲಾಬಾಧಿತವಾಗಿ ಸಿದ್ಧ ಮಾಡಲಾಗಿದೆ.
ಕಥಾನಕಗಳ ವಿಕಾಸದಲ್ಲಿ ಚಾಮತ್ಕಾರಿಕ ಘಟನೆಗಳು ಮತ್ತು ಅಪ್ರತ್ಯಾಶಿತ (ಅನೀರಿಕ್ಷಿತ) ಕಾರ್ಯಗಳ ಯೋಗದ ಮೂಲಕ ಮನೋವೈಜ್ಞಾನಿಕ ದ್ವಂದ್ವದ ಸ್ಥಿತಿಗಳನ್ನು ಸಹ ಚಿತ್ರಣ ಮಾಡಲಾಗಿದೆ, ಇದರಿಂದ ಕಥೆಗಳ ಸಿದ್ಧಾಂತಗಳ ಸ್ಫೋಟನ ಮತ್ತು ಪಾತ್ರಗಳ ಚರಿತ್ರ ಚಿತ್ರಣ ಆಗುತ್ತಲಿದೆ.
ಪ್ರಾಕೃತ ಕಥಾ ಸಾಹಿತ್ಯದ ಕಥೆ ಸರಿಸುಮಾರು ಎರಡು ಸಾವಿರ ವರ್ಷಗಳದ್ದಾಗಿದೆ. ಈ ದೀರ್ಘ ಸಮಯದಲ್ಲಿ ಅದರ ಶಿಲ್ಪದಲ್ಲಿ ಆಶ್ಚರ್ಯ ಹುಟ್ಟಿಸುವ ವಿಕಾಸವಾಗಿದೆ. ವಿಭಿನ್ನ ಸಮಯ, ಪರಿಸ್ಥಿತಿಗಳು ಮತ್ತು ವಾತಾವರಣದಲ್ಲಿ ನಿರ್ಮಿತವಾದ ಈ ಕಥೆಗಳ ಶಿಲ್ಪದಲ್ಲಿ ಅನೇಕ ರೂಪಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸ್ಥಾಪತ್ಯ-ವಿಕಾಸದ ದೃಷ್ಟಿಯಿಂದ ಪ್ರಾಕೃತಕಥೆಗಳಲ್ಲಿ ಅನೇಕ ಪ್ರಕಾರದ ವಿಶೇಷತೆಗಳು ಪರಿಲಕ್ಷಿತವಾಗುತ್ತವೆ. ಭಾರತೀಯ ವಾಹ್ಮಯದಲ್ಲಿ ಸಾಹಿತ್ಯ ಪ್ರಕಾರಗಳ ವಿಕಾಸದ ದೃಷ್ಟಿಯಿಂದ ಪ್ರಾಕೃತ ಕಥೆಗಳ ಅಧ್ಯಯನ ಪರಮ ಆವಶ್ಯಕವಾಗಿದೆ.
ಪ್ರಾಕೃತ ಕಥಾಸಾಹಿತ್ಯದ ಮತ್ತೊಂದು ವಿಶೇಷತೆ ಏನೆಂದರೆ, ಕಥೆಯಲ್ಲಿ ಬಂದಿರುವ ಪ್ರತೀಕಗಳಿಗೆ ಉತ್ತರಾರ್ಧದಲ್ಲಿ ಸೈದ್ಧಾಂತಿಕ ವ್ಯಾಖ್ಯಾಯನ್ನು ನೀಡಿವುದು. ಉದಾಹರಣೆಗಾಗಿ ವಸುದೇವಹಿಂಡಿಯ 'ಇಬ್ಬಪುತ್ತಕಹಾಣಯಂ' ದ ಉಪಸಂಹಾರ ಅಂಶವನ್ನು ಇಲ್ಲಿ ಉದ್ಧತ ಮಾಡಲಾಗಿದೆ.
'ಜಹಾ ಸಾ ಗಣಿಯಾ, ತಹಾ ಧಮ್ಮಸೂಈ ಜಹಾ ತೇ ರಾಯಸಣಈ, ತಹಾ ಸುರ-ಮಣುಯ ಸುಹಭೋಗಿ ಪಾಣಿ, ಜಹಾ ಆಭರಣಾಣಿ, ತಜಾ ದೇಸವಿರತಿಸಹಿಯಾಣಿ ತವೋವಹಾಣಾಣಿ. ಜಹಾ ಸೋ ಇಬ್ಬಪುತ್ತೋ, ತಹಾ ಮೊಕ್ಕಕಂಖೀ ಪುರಿಸೋ. ಜಹಾ ಪರಿಚ್ಛಾಕೋಸಲ್ಲಂ, ತಹ ಸಮ್ಮನ್ನಾಣಂ.
- 293 -
Jain Education International
For Private & Personal Use Only
www.jainelibrary.org