Book Title: Aatmdrashta Mataji Bengali Author(s): Pratap J Tolia Publisher: Jina Bharati View full book textPage 6
________________ 6 ಅವರ ಕೃಪಾಪಾತ್ರವಾಗಿದೆ. ಯೋಗಿಂದ್ರ ಯುಗ ಪ್ರಧಾನ ಶ್ರೀಸಹಜಾನಂದಜೀಯವರಂತಹ ಮಹಾನ್ ಪುರುಷರ ಯೋಗ, ಜ್ಞಾನ ಭಕ್ತಿಗಳ ಸಂಗಮದಿಂದ ಪಾವನವಾದಂತಹ ಈ ಭೂಮಿ, ಸಾಕ್ಷಾತ್ ಭಗವಂತನು ನೆಲೆಸಿರುವಂತ ಭೂಮಿ... ಎಲ್ಲಾ ಆತ್ಮಗಳು ಸಮಾನವಾದವುಗಳುಹಣವಂತನ ಆತ್ಮವು ಬಡವನ ಆತ್ಮವು ಮನುಷ್ಯನ ಅಥವಾ ಪಶು, ಪಕ್ಷಿ, ಕೀಟ, ಪತಂಗಗಳ ಆತ್ಮವೂ ಒಂದೇ! ಈ ಆಶ್ರಮದಲ್ಲಿ ಸತ್ಯ ಭಾವನೆಗಳಿಗೆ ಸ್ವಾಗತವಿದೆ. ಈ ಆಶ್ರಮದ ಜೀವಾಳ ಹೊರ ನೋಟಕ್ಕೆ ಸಾಮಾನ್ಯವಾಗಿ ಸಾಧಾರಣವಾಗಿ ಕಾಣುವ ಇವರು ಅಂತರಾಳದಲ್ಲಿ ಜ್ಞಾನದ ಭಂಡಾರವನ್ನೇ ಅಡಗಿಸಿಕೊಂಡವರು. ಇವರಲ್ಲಿ ಅಡಗಿರುವ ಜ್ಞಾನ, ಭಕ್ತಿ ಅಪಾರವಾದದ್ದು. ಯೋಗ, ಜ್ಞಾನ ಮತ್ತು ಭಕ್ತಿಯ ಮಾರ್ಗದರ್ಶನಿ ಈ 'ಮಾತಾಜಿ' ಎಲ್ಲರೂ, ಇವರನ್ನು ಮಾತಾಜಿ ಎಂದೇ ಕರೆಯುತ್ತಾರೆ. ಗುರುತಿಸುತ್ತಾರೆ. ಹೆಸರಿನಲ್ಲಿ ಮಾತ್ರವಲ್ಲ ಕೆಲಸದಲ್ಲಿಯೂ ಮಾತಾಜಿಯೇ, ಎಲ್ಲರ ಮಾತೆ, ವಾತ್ಸಲ್ಯ ಹಾಗೂ ಕರುಣೆಯ ಸಾಗರ ಮಾತಾಜಿ, ಮೊದಲು ಧನ್‌ದೇವಿ ಎಂದು ಹೆಸರಾದ ಮಾತಾಜಿಯವರು ಮೂಲತಃ ಗುಜರಾತಿನ ಕಚ್ ದೇಶದಲ್ಲಿ ಸಾಭರಾಯಿ ಎಂಬ ಊರಿನವರು. ಇವರ ಆತ್ಮವು ತುಂಬಿರುವುದು ಮಹಾವಿದೇಹ ಕ್ಷೇತ್ರದಲ್ಲಿ.Page Navigation
1 ... 4 5 6 7 8 9 10 11 12 13 14 15 16