Page #1
--------------------------------------------------------------------------
________________
आत्मदृष्टा माताजी
ಆತ್ಮದೃಷ್ಠಾ ಮಾತಾಜಿ
ATMADRISHTA
MATAJI
Kum. Parul P. Toliya Prof. Pratapkumar J. Toliya
ಕುಮಾರಿ ಪಾರುಲ್ ಪಿ. ಟೋಲಿಯಾ ಪ್ರೋ. ಪ್ರತಾಪ್‌ಕುಮಾರ್ ಜೆ. ಟೋಲಿಯಾ
JINA BHARATI Vardhaman Bharati International Foundation Prabhat Complex, K. G. Road, Bangalore - 560 009. (INDIA)
Page #2
--------------------------------------------------------------------------
________________
ATMADRISHTA MATAJI (Pen-Sketches)
By : Kum. PARUL P. TOLIYA Prof. PRATAP KUMAR J. TOLIYA
Publishers : Akshaya Charitable Trust, Gubbi & JINA BHARATI Vardhaman Bharati International Foundation Prabhat Complex, K. G. Road, Bangalore - 560 009. Email : pratapkumartoliya@gmail.com Phone : 080-26667882 Copyrights : JINA BHARATI, But All Serviceful organisations & individuals will be free to reprint for propagation, by acquiring prior written permission from the publishers.
Edition : 2018
Copies : 250
Cost Sale Price : Rs.20/
Printed by : KIRAN ENTERPRISES No. 17/1, 17th Cross Cubbonpet, Bangalore-560002. Mob : 94483 02610
Page #3
--------------------------------------------------------------------------
________________
ರಾತ್ರಿಯ ಹೊಂಬೆಳಕು ಎಲ್ಲೆಡೆ ಪಸರಿಸಿ ಹರಡಿರುವುದು ಮತ್ತು ಎಲ್ಲೆಡೆ ಶಾಂತಿ ವಿಸ್ತರಿಸಿದೆ. ನಿಶ್ಯಬ್ದ ಆಹ್ಲಾದಮಯ ಶಾಂತಿಯುತವಾದ ಆಕಾಶದಲ್ಲಿ, ತಾರೆಗಳು ಪ್ರಕಾಶ ಬೀರುತ್ತಿದ್ದಾವೆ ಹಾಗೂ ಚಂದ್ರನು ಕೂಡ ಆಕಾಶದಲ್ಲಿ ಮಂದಹಾಸ ಬೀರುತ್ತಿದ್ದಾನೆ. ಸುತ್ತಲೂ ಕಣ್ಣು ಮೋಹಿಸುವಂತಹ ದೂರದಲ್ಲಿ ನಿಂತ ಸುಂದರವಾದ ಪರ್ವತಗಳು ಮತ್ತು ಸಣ್ಣ ದೊಡ್ಡ ಬಂಡೆಗಳು ಸಹ.
ಇಲ್ಲಿ ತನ್ನಲ್ಲೇ ತಾನು ಲೀನವಾದ ಒಂದು ಭಿನ್ನವಾದ ಜಗತ್ತು ಸೃಷ್ಟಿಸಲ್ಪಟ್ಟಿದೆ. ಇಂಥ ಒಂದು ಜಗತ್ತಿನಲ್ಲಿ ಹೆಜ್ಜೆಯಿದ್ದೊಡನೆ ಮನಸ್ಸಿನ್ನಲ್ಲಿ ಅಪೂರ್ವ ಶಾಂತಿ ಹಾದುಹೋಗುತ್ತದೆ. ಈ ಜಗತ್ತನ್ನು ಹೊಕ್ಕೊಡನೆ ನಾವು ಈ ವಾಸ್ತವ ಜಗತ್ತನ್ನು ಮರೆಯುತ್ತೇವೆ. ಇಂತಹ ಜಗತ್ತಿನಲ್ಲಿ ಈ
Page #4
--------------------------------------------------------------------------
________________
ಭೂಮಿಯ ವಿಲಾಸ, ವಿಡಂಬನೆ, ಅಹಂಕಾರ, ಕ್ರೋಧ, ಮೋಹ, ಲೋಭ, ಮಾಯೆಗಳಿಗೆ ಪ್ರವೇಶವಿಲ್ಲ.
ನಿಮಗೆ ಈ ಜಗತ್ತಿನ ಪ್ರವೇಶ ಮಾಡಬೇಕಾದ್ದಲ್ಲಿ ನಿಮ್ಮಲ್ಲಿರುವ ಈ ವಿಕಾರ ಇಂದ್ರಿಯಗಳನ್ನು ತೊರೆದು (ಜಯಿಸಿ) ಬರಬೇಕು. ಏಕೆಂದರೆ ನೀವು ಇಲ್ಲಿ ಎಡವಿರುವ (ದಾರಿತಪ್ಪಿದ) ಹಾಗು ಚಡಪಡಿಸುವ, ಚಂಚಲತೆಯಿಂದ ಕೂಡಿರುವ ಆತ್ಮವನ್ನು, ಮಿಡಿಯುವ ಹೃದಯವನ್ನು ತೃಪ್ತಿ ಮತ್ತು ಶಾಂತಿ ನೀಡಲು, ಈ ಆತ್ಮಕ್ಕೆ ಅಪೂರ್ವ ಮಾನವ ಜೀವನದ ಮೌಲ್ಯವನ್ನು ತಿಳಸಲು, ತನ್ನನ್ನು ತಾನು ನಿಯಂತ್ರಿಸಲು ಹಾಗು ಆತ್ಮಶೋಧನೆ ಮಾಡಿಕೊಳ್ಳಲ್ಲಕ್ಕಾಗಿಯೇ ಹೊರತು ನಿಮ್ಮ ಸುಪ್ತ ಕಾಮನೆಗಳನ್ನು ವರ್ಧಿಸುವುದಕ್ಕಲ್ಲ.
* ರಾಮಾಯಣ ಕಾಲದ ಕಿಕ್ಕಿಂದೆ, ಸದ್ಯಕ್ಕೆ ಸ್ತೋತ್ರದಲ್ಲಿ ಹೇಳಿರುವಂತೆ ಆಗಿನ ಪುರಾತನ ಜೈನಕ್ಷೇತ್ರವಾದ ರತ್ನಕೂಟ, ಹೇಮಕೂಟ ಮತ್ತು ಭೂಟ ಈಗಿನ ವೈಭವಕ್ಕೆ ಹೆಸರಾದ ವಿಜಯನಗರದ ಸಮೃದ್ಧ ಸಾಮ್ರಾಜ್ಯವು ಸಾವಿರಾರು ಪುಣ್ಯಪುರುಷರ ಪಾದ ಧೂಳಿನಿಂದ ಸ್ಪರ್ಶಿಸಲ್ಪಟ್ಟ ಪುಣ್ಯ (ಯೋಗ) ಭೂಮಿಯೇ ಈ ಹಂಪೆ.
- ಇಲ್ಲ ಹರಡಿರುವ ಪಕೃತಿಯ ಗುಹೆಗಳೊಳಗೆ ನೂತನ ಜೈನ ತೀರ್ಥಸ್ಥಳವಾದ ಶ್ರೀ ರಾಜಚಂದ್ರ
Page #5
--------------------------------------------------------------------------
________________
5
ಆಶ್ರಮವು ಸ್ಥಾಪಿಸಲ್ಪಟ್ಟಿದೆ. ಈ ಸ್ಥಳವು ನಗರ ಜೀವನದ ಅಡಚಣೆಗಳು, ಪರಿಸರ ಮಾಅನ್ಯದಿಂದ ಎಷ್ಟೋ ದೂರ! ವಾಹನಗಳ, ಬಸ್ಸುಗಳ, ರೈಲು ಮೋಟಾರು ಗಾಡಿಗಳ ಹಾಗು ವಿಕೃತಿಗಳ ಶಬ್ಧ ಕಿಂಚಿತ್ತು ತಲುಪಲು ಸಾಧ್ಯವಿಲ್ಲ.
ಬೆಟ್ಟದ ಮೇಲಿರುವ ಈ ತೀರ್ಥಸ್ಥಳದ ಕೆಳಗೆ ಕಂಗೊಳಿಸಿತ್ತಿರುವುದು ಹಚ್ಚ ಹಸುರಿನ ಗದ್ದೆಗಳು. ಮತ್ತೊಂದೆಡೆ ಪರ್ವತ ಶ್ರೇಣಿಗಳು ಈ ಪರ್ವತದ ಬುಡದಲ್ಲಿ ಝಳ ಝಳನೆ ಹರಿಯುತ್ತಿಹಳು ತೀರ್ಥ ಸಅಲಾ ತುಂಗಭದ್ರೆ. ಆಶ್ರಮ ಪ್ರದೇಶದಲ್ಲಿ ಸುಂದರವಾದ ಗುಹಾಲಯಗಳು, ತಮೋ ಮಂದಿರಗಳು ಹಾಗು ಕೆಲವು ವಸತಿಗೃಹಗಳು ಸ್ಥಾಪಿತವಾಗಿವೆ. ಈ ಪ್ರಶಾಂತ ವಾತಾವರಣವನ್ನು ಕಂಡಕೂಡಲೆ ನಮ್ಮಲ್ಲಿರುವ ವಿಕಾರಗಳು ನಮಗರಿವಿಲ್ಲದೆ ಮಾಯವಾಗುತ್ತವೆ. ಅವುಗಳ ಅಸ್ಥಿತ್ವವೇ ಇಲ್ಲವೊ ಎಂಬಂತೆ ಕಾಣದಾಗುತ್ತವೆ.
ಇಲ್ಲಿ ಎಲ್ಲರಿಗೂ ಸ್ವಾಗತವಿದೆ. ಸಮಾಜವನ್ನು ವಿಂಗಡಿಸುವ ಮೇಲು ಕೀಳು ಎಂಬ ಭಾವನೆಗೆ ಇಲ್ಲಿ ಅವಕಾಶವಿಲ್ಲ. ಈ ಭೂಮಿಯೂ ಇಪ್ಪತ್ತನೆಯ ಜೈನ ತೀರ್ಥಂಕರನಾದ ಭಗವಾನ್ ಮುನಿಸುವ್ರತ ಸ್ವಾಮಿ ಶ್ರೀರಾಮರ ಪಾದ ಸ್ಪರ್ಶದಿಂದ (ಧೂಳಿನಿಂದ) ಪುನೀತವಾಗಿದೆ. ಈ ಭೂಮಿಯು ಈ ದಿನವು ಗಾಂಧಿಯ ಗುರು ಶ್ರೀಮಾನ್ ರಾಜಚಂದ್ರಜೀ
Page #6
--------------------------------------------------------------------------
________________
6
ಅವರ ಕೃಪಾಪಾತ್ರವಾಗಿದೆ. ಯೋಗಿಂದ್ರ ಯುಗ ಪ್ರಧಾನ ಶ್ರೀಸಹಜಾನಂದಜೀಯವರಂತಹ ಮಹಾನ್ ಪುರುಷರ ಯೋಗ, ಜ್ಞಾನ ಭಕ್ತಿಗಳ ಸಂಗಮದಿಂದ ಪಾವನವಾದಂತಹ ಈ ಭೂಮಿ, ಸಾಕ್ಷಾತ್ ಭಗವಂತನು ನೆಲೆಸಿರುವಂತ ಭೂಮಿ... ಎಲ್ಲಾ ಆತ್ಮಗಳು ಸಮಾನವಾದವುಗಳುಹಣವಂತನ ಆತ್ಮವು ಬಡವನ ಆತ್ಮವು ಮನುಷ್ಯನ ಅಥವಾ ಪಶು, ಪಕ್ಷಿ, ಕೀಟ, ಪತಂಗಗಳ ಆತ್ಮವೂ ಒಂದೇ! ಈ ಆಶ್ರಮದಲ್ಲಿ ಸತ್ಯ ಭಾವನೆಗಳಿಗೆ ಸ್ವಾಗತವಿದೆ.
ಈ ಆಶ್ರಮದ ಜೀವಾಳ ಹೊರ ನೋಟಕ್ಕೆ ಸಾಮಾನ್ಯವಾಗಿ ಸಾಧಾರಣವಾಗಿ ಕಾಣುವ ಇವರು ಅಂತರಾಳದಲ್ಲಿ ಜ್ಞಾನದ ಭಂಡಾರವನ್ನೇ ಅಡಗಿಸಿಕೊಂಡವರು. ಇವರಲ್ಲಿ ಅಡಗಿರುವ ಜ್ಞಾನ, ಭಕ್ತಿ ಅಪಾರವಾದದ್ದು. ಯೋಗ, ಜ್ಞಾನ ಮತ್ತು ಭಕ್ತಿಯ ಮಾರ್ಗದರ್ಶನಿ ಈ 'ಮಾತಾಜಿ' ಎಲ್ಲರೂ, ಇವರನ್ನು ಮಾತಾಜಿ ಎಂದೇ ಕರೆಯುತ್ತಾರೆ. ಗುರುತಿಸುತ್ತಾರೆ. ಹೆಸರಿನಲ್ಲಿ ಮಾತ್ರವಲ್ಲ ಕೆಲಸದಲ್ಲಿಯೂ ಮಾತಾಜಿಯೇ, ಎಲ್ಲರ ಮಾತೆ, ವಾತ್ಸಲ್ಯ ಹಾಗೂ ಕರುಣೆಯ ಸಾಗರ ಮಾತಾಜಿ,
ಮೊದಲು ಧನ್‌ದೇವಿ ಎಂದು ಹೆಸರಾದ ಮಾತಾಜಿಯವರು ಮೂಲತಃ ಗುಜರಾತಿನ ಕಚ್ ದೇಶದಲ್ಲಿ ಸಾಭರಾಯಿ ಎಂಬ ಊರಿನವರು. ಇವರ ಆತ್ಮವು ತುಂಬಿರುವುದು ಮಹಾವಿದೇಹ ಕ್ಷೇತ್ರದಲ್ಲಿ.
Page #7
--------------------------------------------------------------------------
________________
ಈ ನೂತನಧಾಮದ ಸಂಸ್ಥಾಪಕ ಮಹಾಯೋಗಿ ಶ್ರೀ ಸಹಜಾನಂದನಜಿಯವರು, ಇಸವಿ 1970ರಲ್ಲಿ ಯೋಗದ ಮೂಲಕ ದೇಹ ತ್ಯಾಗ ಮಾಡುವ ಮುನ್ನ ಮಾತಾಜಿಯವರಿಗೆ ಆಶ್ರಮದ ಅಧಿಷ್ಠಾನವನ್ನು ನೀಡಿ 'ಜಗನ್ಮಾತಾ' ಎಂಬ ನಾಮವನ್ನು ನೀಡಿದ್ದಾರೆ. ಈ ದಿನ ಈ ಆಶ್ರಮವು ಜೀವಕಳೆಯಿಂದ ತುಂಬಿರುವುದೆ ಈ ಜಗನ್ಮಾತೆಯ ಮಂದಹಾಸದಿಂದ ಪ್ರಜ್ವಲಿಸುವ ಜ್ಞಾನಭರಿತ, ಮುಖಾರವಿಂದದಿಂದ ಹಾಗೂ ತೇಜಸ್ಸಿನಿಂದ ಕೂಡಿರುವ ಅವರ ಚಹರೆಯಿಂದ. ಈ ಜಗತ್ತಿನ ಮಾತೆ ರಾಗ-ಮೋಹ ಬಂಧನಗಳಿಂದ ಮುಕ್ತಿ ಹೊಂದಿ ಉನ್ನತ ಸ್ಥಾನಕ್ಕೆ ಸಾಗಿದ್ದಾರೆ. ಆದರೂ ಸಹ ನಿಷಾರಣ ಕರುಣೆ ಹಾಗೂ ವಾತ್ಸಲ್ಯದ ಸಾಕ್ಷಾತ್ ರೂಪ, ಅವರು ಬರಿ ನಮಗೆ ಮಾತ್ರವಲ್ಲ ಅನೇಕ ಅಬಲೆಯರಿಗೆ, ವೇದನಾರಸ್ಥರಿಗೆ, ಮೂಕ ಪಶುಪ್ರಾಣಿಗಳಿಗೂ ತಾಯಿಯೇ. ಸಕಲ . ಅತಿಥಿ, ಆಗಂತುಕ, ಸಾಧು-ಸಾದ್ದಿಯರ ಸೇವೆಯಷ್ಟೇಯಲ್ಲ, ಪ್ರತಿ ಯಾತ್ರಿಕನ, ಪ್ರತಿ ಶ್ರಾವಕನ, ಪ್ರತಿ ಬಾಲಕನ, ಪ್ರತಿ ಪಶುಪಕ್ಷಿಗಳ ಸೇವೆಯನ್ನು ವಾತ್ಸಲ್ಯ ಪೂರ್ಣವಾಗಿ ನಿರ್ವಹಿಸುತ್ತಾರೆ.
ಯೋಗ, ಜ್ಞಾನ, ಭಕ್ತಿಯಲ್ಲಿ ಉಚ್ಚಸ್ಥಾನವನ್ನು ಪಡೆದ ಮಾತಾಜಿಯವರು ದೈನ್ಯದಿಂದ ವಿನಯದಿಂದ ಎಲ್ಲರನ್ನೂ ಉಪಚರಿಸುವುದನ್ನು ಕಂಡು ಎಲ್ಲರಿಗೂ ಬಹಳ ಆಶ್ಚರ್ಯವನ್ನುಂಟು
Page #8
--------------------------------------------------------------------------
________________
ಮಾಡುತ್ತದೆ. ಮಹಿಳೆಯರಿಗೆ ಇವರು ವಾತ್ಸಲ್ಯಭರಿತ ದೊಡ್ಡ ವಿಶಾಲವಾದ ಆಲದ ಮರದಂತೆ ಆಶ್ರಯವನ್ನು ನೀಡುತ್ತಾರೆ. ಹಾಗೆಯೇ ಇವರು ಮಾನವನಿಗೆ (ಮನುಷ್ಯರಲ್ಲದೆ) ಹಸು ನಾಯಿಗಳಗೆ, ಕರುಗಳಿಗೆ ಆತ್ಯ ಸಮಾಧಿಪೂರ್ವಕ ದೇಹ ತ್ಯಜಿಸಲು ಪುಣ್ಯ ಪಡೆದು ಜೀವನವನ್ನು ಸಾರ್ಥಕಗೊಳಿಸಲು ಮಾತಾಜಿ ನೆರವಾಗುತ್ತಾರೆ. ಇಂತಹ ಜಗನ್ಮಾತೆ, ಮಹತ್ ಜ್ಞಾನಿಯಾದ ವಾತ್ಸಲ್ಯ ಮಯಿಯಾದ ಮಾತೆಯ ಬಗ್ಗೆ ಎಷ್ಟು ಬರೆಯುವುದು ಹಾಗು ಏನು ಬರೆಯುವುದು ? ವರ್ಣನೆ ಮಾಡಿದಷ್ಟು ಮುಗಿಯದು. ಅವರ ಅದ್ಭುತ, ವಿರಳ, ಅಲೌಕಿಕ ಜೀವನ ಚರಿತ್ರೆಯನ್ನು ಇನ್ನು ನನಗೆ ವರ್ಣಿಸಲು ಅಸಾಧ್ಯ.
ಇಂತಹ ಪಾವನ ತೀರ್ಥಕ್ಷೇತ್ರ ಭೂಮಿಯಲ್ಲಿ ನೀಲಿ ಆಗಸದಡಿಯಲ್ಲಿ ಪೂಜ್ಯ ಮಾತೆಯ ಚರಣಾರವಿಂದದ ಹತ್ತಿರ ಕುಳಿತ್ತಿದ್ದಾಗ ನನಗೆ ಹಲವು ಉಚ್ಚ ವಿಚಾರ ಭಾವನೆಗಳು ಮನಸ್ಸನ್ನು ಆಕ್ರಮಿಸಿ ಮಾಯವಾಗುತ್ತದೆ. ಇವರ ಸನ್ನಿಧಿಯಲ್ಲಿ ಇರುವುದು ಒಂದು ಅದ್ಭುತ ಅನುಭವ. ಅವರ ವಿರಹ ವೇದನೆಯಿಂದ ಮನ ಮುದುಡುತ್ತದೆ. ಈ ಸ್ವರ್ಗದಂತಹ ಸನ್ನಿಧಿಯಿಂದ ಬಹುಬೇಗ ವ್ಯವಹಾರಿಕ ಪ್ರಪಂಚಕ್ಕೆ ಮರಳಿ ಹೋಗಲು ಇಷ್ಟವಿಲ್ಲ. ಮನಸ್ಸು ಉದಾಸಗೊಳ್ಳುತ್ತದೆ. ಆದರೆ! ಈ ವ್ಯವಹಾರಿಕ ಪ್ರಪಂಚವೇ ಇರದಿದ್ದರೆ ಹಂಪೆಯಲ್ಲಿ
Page #9
--------------------------------------------------------------------------
________________
9
ವಾತ್ಸಲ್ಯಮಯಿ ಮಾತೆಯ ಚರಣ ಕಮಲದಲ್ಲಿ ಸಿಗುವ ನನ್ನವರೆನ್ನುವ ಭಾವನೆ ಹಾಗು ಪ್ರೀತಿ ನಮ್ಮ ಪ್ರಪಂಚದಲ್ಲಿ ಎಲ್ಲಿ ಸಿಗುತ್ತದೆ?
ಆದರೂ ಕರ್ತವ್ಯದಕರೆಗೆ ಓಗೊಡಲೇ ಬೇಕು. ಹೋಗಲೇಬೇಕು. ವಿವಶಳಾಗಿ ಹೋಗಲು ತಯಾರಾಗುತ್ತೇನೆ. ಆದರೆ ಮತ್ತೆ ಬಹುಬೇಗ ತಿರುಗಿ ಬರುವೆ. ಎಂದು ಸಂಕಲ್ಪ ಮಾಡಿಕೊಳ್ಳುತ್ತೇನೆ. ಹೊಂಬೆಳಕು ಮನದಲ್ಲಿ ಶಾಂತಿ ನೆಲೆಸುತ್ತದೆ. ಈ ಎಲ್ಲರ ಮಧ್ಯದಲ್ಲಿ. ಎಲ್ಲ ಬಾಹ್ಯ ಪ್ರಪಂಚದ ವಿಚಾರಗಳು ಹೋಗಿ, ಮನದಲ್ಲಿ ಶಾಂತಿ ನೆಲೆಸುತ್ತದೆ.
ರಹಸ್ಯವಾದಿನಿ ಆತ್ಮಜ್ಞಾ ಜಗತ್‌ಮಾತಾ
ಈಗಿನ 6 ಶೀಪುರುಷಗಳ
ಹಿಂದಿನ
ಮಾತಿದು. ಗುಜರಾತಿನ ಕಚ್ ಸ್ಥಾನ ಸಾಂಬರಾಯಿ' ಎನ್ನುವ ಗ್ರಾಮದಲ್ಲಿ ಅಲೌಕಿಕ ಜನ್ಮವಾಯಿತು. ಪೂರ್ವ ಸಂಸ್ಕಾರಣ ಸಂಪನ್ನತೆಯ ಕಾರಣ ಬಾಲ್ಯಾವಸ್ಥೆಯಿಂದಲೆ ಬಾಲೆ ನಿರ್ಮಲ ಜ್ಞಾನಪೂರ್ಣೆಯಾಗಿದ್ದಳು.
ಅವಳಿಗೆ ನಾಲ್ಕು ವಯಸ್ಸಿನವಳಿದ್ದಾಗ, ಒಂದು ದಿನ ತನ್ನ ತಂದೆಯ ಜೊತೆಯಲ್ಲಿ 'ಸಾಂಬಾರಾಯಿಯಿಂದ' ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ರಸ್ತೆಯ ಇಬ್ಬದಿಗಳಲ್ಲಿ ಮಣ್ಣಿನ
Page #10
--------------------------------------------------------------------------
________________
* 10
ದಿನ್ನೆಯಿಂದ ಕೂಡಿರುವ ಸಕೀರ್ಣವಾದ ರಸ್ತೆಯದು. ಒಂದು ವಾಹನ ಹೋಗುವಷ್ಟೇ ಅಗಲವಾಗಿತ್ತು. ಆ ರಸ್ತೆಯ ಹಿಂದುಗಡೆಯಿಂದ ಆ ಪ್ರದೇಶದ ಚಿಕ್ಕ ರಿಯಾಸಿನಿಯಾದ 'ರಾವರಾಜ' ತನ್ನ ವಾಹನದಲ್ಲಿ ಬರುತ್ತಿದ್ದನು. ಅವಳ ತಂದೆಯಾದ ಶಿವಾಜಸೇಠರವರು ಹಿಂದಿನಿಂದ ಬರುವ ವಾಹನಗಳಿಗೆ ದಾರಿಕೊಡಲು ಸಲ್ಪ ಹಿಂದೆ ಬಂದರು. ಆದರೆ ಆ ಬಾಲಕೆಯು, ಆ ವಾಹನ ಚಾಲಕನು ಎಷ್ಟು ಕೂಗಿದರೂ ಮಧ್ಯ ದಾರಿಯಿಂದ ಕದಲಲಿಲ್ಲ. ಆಗ ಚಾಲಕನು ಕಿರುಚಿದನು. 'ಓ ಮಗುವೆ ದಾರಿಯ ಮಧ್ಯದಿಂದ ದೂರ ಸರಿ ನಿನ್ನ ತಲೆಯಲ್ಲಿ ಆಗಿದ್ದಾದರು ಏನು? ಒಳಗೆ ರಾಜರಾವ್ ಕುಳಿತಿದ್ದಾರೆ. ನಿನ್ನನ್ನು ಹಿಡಿದುಕೊಂಡು ಹೋಗುತ್ತಾರೆ.'
ಆದರೆ ಆ ಬಾಲಕೆಯು ಆ ಬೆದರಿಕೆಗಳಿಗೆ ಹೆದರದೆ ಒಂದಿಷ್ಟು ಚಲಿಸದೆ ವಾಹನ ಚಾಲಕನಿಗೆ ಪ್ರತಿ ಪ್ರಶ್ನೆಯನ್ನು ಹಾಕಿದಳು. ತಲೆಯಲ್ಲಿ ಏನಾಗಿದೆ? ನನ್ನ ತಲೆಯಲ್ಲಿಯೂ ಅಥವಾ ರಾವನ ತಲೆಯಲ್ಲಿಯೋ? ಎಂದು ಅವರನ್ನೇ ಕೇಳ.
ಆ ಗಾಡಿಯಲ್ಲಿ ಕೂತಿದ್ದ ರಾವ್ ಈ ಸತ್ಯವನ್ನು ಅರಿತು ಚಕಿತನಾದನು ಮತ್ತು ಭಯಭೀತನಾದನು. ಅವನು ಹುಡುಗಿಯನ್ನು ತನ್ನ ಬಳಿ ಏಕಾಂತದಲ್ಲಿ ಆ ಗಾಡಿಯೊಳಗೆ
Page #11
--------------------------------------------------------------------------
________________
11
ಕರೆಸಿಕೊಂಡನು. ಅಲ್ಲಿ ನೆರೆದಿದ್ದ ಜನರನ್ನು ದೂರ ಕಳಹಿಸಿದನು. ಶಿವಾಜಸೆಲ್‌ರವರು ಭಯದಿಂದ ನಡುಗಿದರು. ತನ್ನ ಮಗುವನ್ನು ಹೊಡೆಯುವರೆ? ಬೈಯುವರೆ ಹಿಡುದಿಟ್ಟು ಕೊಳ್ಳುವರೆ? ಎಂದು?
ಮಗು ಧನ್‌ಭಾಯಿಯು ಪ್ರಸನ್ನ ಧೈರ್ಯದಿಂದ ರಾವ್‌ರವರ ಹತ್ತಿರ ಹೋಗಿ ಕುಳಿತು ಆ ಮಾತನ್ನು ನೇರವಾಗಿ ಅವರ ಹತ್ತಿರ ಕೇಳಿದಳು.?
'ರಾವಾಹೇಬ್! ನಿಮ್ಮ ತಲೆಯಲ್ಲಿ ತಾನೆ ಎನೋ ಅಗಿದೆ? ತಲೆಯ ಮೇಲೆ ಬೇಡ ಹೃದಯದ ಮೇಲೆ ಕೈಯಿಟ್ಟು ಹೇಳ.
ರಾಜ ತನ್ನನ್ನು ತಾನೆ ನೆನೆದುಕೊಂಡು ಅಂತರದಲ್ಲಿರುವ ದೋಷವನ್ನು ನಿಮ್ಮ ಮನಸ್ಸು ಎಲ್ಲ ತಿರುಗಿ ಮರೆ ಮಡಲಾಗಿದೆ. (ಅಂತರಂಗ ದಲ್ಲಿರುವುದನ್ನು ಮರೆಮಾಡಲಾಗಅಲ್ಲ) ಆ ಬಾಲಿಕೆಯ ಕಣ್ಣುಗಳಲ್ಲಿದ್ದ ತೇಜಸ್ಸು ಮತ್ತು ಅವಳ ಕಂಠದ ದೃಢತೆ ಕಂಡು ಬೆರಗಾದನು ಮತ್ತು ಅವನು ಎನೋ ಒಂದು ಉತ್ತರವನ್ನು ಕೊಡುವುದಕ್ಕೆ ಮುನ್ನವೇ ಆ ಜ್ಞಾನವುಳ್ಳ ಬಾಲಕಿಯು ತನ್ನ ಹೃದಯದಲ್ಲಿ ಆಗುವ ಕೋಲಾಹಲವನ್ನು ಅರಿತು ಅವಳ ಮುಖದಲ್ಲಿ ಕೋಪವು ಪ್ರಕಟವಾಯಿತು ಮತ್ತು ಆಕೆ ಅಂದಳು
'ಪ್ರಜೆಗಳ ತಂದೆಯ ಸಮಾನವಾದರೂ 'ರಾವಣ' ಅಂಥವನ ಕಾರ್ಯವನ್ನು ಮಾಡುತ್ತಿಯೇ
Page #12
--------------------------------------------------------------------------
________________
42
ಮತ್ತು ಪುತ್ರಿಯಂತಹ ಆರಾಧಿಸುವ ಪ್ರಜಾ ಹೆಣ್ಣುಮಕ್ಕಳನ್ನು ಅಪಹರಣ ಮಾಡಲು ಹೊರಟ್ಟಿದ್ದೀಯ. ನಿನಗೆ ಇಂಥ ನೀಚ ಕೆಲಸಗಳನ್ನು ಮಾಡುವಾಗ ಲಜ್ಜೆಯಾಗುವುದಿಲ್ಲವೆ? ಏನು ನೀವು ಇಂಥ ಪಾಪದ (ನೀಚ) ಕಾರ್ಯವನ್ನು ಮಾಡಲು ಹೋಗುತ್ತಿಲ್ಲವೆ? ನಾನು ನಿಮಗೆ ಈ ಅಧರ್ಮದ ಮಾರ್ಗದಿಂದ ಮುಕ್ತಿ ಪಡೆಯಲು, ಧರ್ಮದ ಹಾದಿ ಹಿಡಿಯಲು ನಿಮಗೆ ಮಾರ್ಗದರ್ಶನ ನೀಡಲೇ?.
. ಆಗ ವಿಷ್ಟಿತವಾದ ರಾವನು ಇಂಥ ಚಿಕ್ಕ ಬಾಲಕಿಯಲ್ಲಿ ಸಾಕ್ಷಾತ್ ದೇವಿಯನ್ನು ದರ್ಶಿಸಿ (ದೇವಿಯನ್ನು ಕಂಡು) ಅವಳ ಪಾದಕ್ಕೆ ಸರಿಸಿದನು. ತನ್ನ ತಪ್ಪನ್ನು (ದೋಷವನ್ನು ಒಪ್ಪಿಕೊಂಡು ಕ್ಷಮೆಯನ್ನು ಬೇಡುತ್ತಾ ಅಲ್ಲಿಂದ ಮತ್ತೆ ಹಿಂದಿರುಗಿ ಹೋಗಲು ಆಜ್ಞೆಯನ್ನು ಬೇಡಿದನು. ಹಾಗೂ ಹೋಗುವಾಗ ಆ ಬಾಲಕಿಯತ್ತಿರ ಒಂದು ಬೇಡಿಕೆಯನ್ನು ಮುಂದಿಟ್ಟನು. ' ಹೇ ಧನದೇವಿ ನಿನ್ನ ತಂದೆಯ ಜೋತೆ ಈ ಯಾತ್ರೆಯನ್ನು ಮುಗಿಸಿಕೊಂಡು ಬರುವಾಗ ನನ್ನ ಮಹಲ್‌ಗೆ ಬಂದು ನನಗೆ ಧರ್ಮ ಭೋದನೆಯನ್ನು ಮಾಡಬೇಕೆಂದು ಕೇಳಿಕೊಂಡು ಹಾಗು ಈ ವಾರ್ತೆಯನ್ನು (ಸಮಾಚಾರವನ್ನು ಯಾರಿಗೂ ತಿಳಿಸಕೂಡದೆಂದು, ತನ್ನಲ್ಲಿಯೇ ಇಟ್ಟು ಕೊಳ್ಳಬೇಕೆಂದು ಕೇಳಿಕೊಂಡನು. ಬಾಲಿಕೆಯೂ ಈ ಎರಡೂ ಮಾತಿಗೂ ಹರ್ಷದಿಂದ ಒಪ್ಪಿಗೆ ನೀಡಿ
Page #13
--------------------------------------------------------------------------
________________
13
ರಾವ್‌ನನ್ನು ಕ್ಷಮಿಸಿ ಅಲ್ಲಿಂದ ಹೊರಗೆ ಬಂದಳು.
ಅವಳು ಸಂತೋಷದಿಂದ ಈಚೆಗೆ ಬಂದದ್ದನ್ನು ನೋಡಿದ ಮೇಲೆಯೇ ಅವರ ತಂದೆಗೆ ಸಮಾಧಾನವಾದುದ್ದು. ರಾವೃ ಗಾಡಿಯು ಮತ್ತು ಅವನ ಜೊತೆಗಾರರು ಹಿಂದಿರುಗಿದಾಗ ಧನ್‌ದೇವಿಯು ತಂದೆಗೆ ಇನ್ನೂ ಬಹಳ ಆಶ್ಚರ್ಯವಾಯಿತು. ಧನ್‌ದೇವಿಯಿಂದ ಎಲ್ಲಾ ವಿಷಯ ತಿಳಿಯಲು ಪ್ರಯತ್ನಗಳೆಲ್ಲಾ ವ್ಯರ್ಥವಾಯಿತು. ಬಾಲಕೆಯು ಈ ವಿಷಯದಲ್ಲಿ ಸಂಪೂರ್ಣ (ನಿರ್ಲತವಾದಳು) ಮೌನವಹಿಸಿದಳು. ಅವರಿಬ್ಬರು ಮುಂದೆ ಗ್ರಾಮದ ದಾರಿಯನ್ನು ಹಿಡಿದರು. ಆ ಬಾಲಿಕೆಗೆ ಮತ್ತೊಮ್ಮೆ ರಾವ್‌ನಿಂದ ಆಹ್ವಾನ ಬಂದಿತ್ತು. ಆಗ ಅವಳು ರಾವ್ನು ಎಲ್ಲಾ ದುಷ್ಟ ಕಾರ್ಯಗಳನ್ನು ಬಿಟ್ಟಾಯಿತ್ತೆಂದು ಖಚಿತ ಪಡಿಸಿಕೊಂಡು ಅವನಿಗೆ ಧರ್ಮಭೋಧನೆಯನ್ನು ಮಾಡಿದಳು. ಇದನ್ನು ಕಂಡ ತಂದೆಯು ತನ್ನ ಮಗಳಲ್ಲಿ ಎನೋ ಒಂದು ಅದ್ಭುತ ಶಕ್ತಿ ಅಡಗಿದೆ ಎಂದು ಅರಿತರು. ಆದರೆ ಆಗಲೂ ಆತ ಮೌನ ವಹಿಸಿದರು.
ಅಲ್ಲಿಂದ ಅಂತಹ ಅನೇಕ ಅದ್ಭುತ ಪ್ರಸಂಗಗಳು ಮತ್ತು ಅನುಭವಗಳಾಗುತ್ತಿತ್ತು. ಇವಳ ಅದ್ಭುತ ಶಕ್ತಿಯನ್ನು ಕಂಡು ಕೆಲವರು ಮೆಚ್ಚಿದರು. ಇನ್ನಿತರರು ಅವಳನ್ನು ಸಂದೇಹದಿಂದ ನೋಡಿ
Page #14
--------------------------------------------------------------------------
________________
14
ಅವಳನ್ನು 'ಭೂತ' ಮತ್ತು ಮಂತ್ರಗಾತಿ ಎಂದು ಹೆಸರಿಸಿದರು. ಆದರೆ ಅವಳೊಳಗೆ ಅಡಗಿರುವಂತಹ ಜ್ಞಾನ ಸಂಪದವನ್ನು ಗುರುತಿಸಲು ಅಸಾಧ್ಯವಾಯಿತು. ಹೀಗೆ ಈ ಅದ್ಭುತ ಬಾಲಕೆಯು ತನ್ನ ಅದ್ಭುತ ಬಾಲ ಜೀವನದಿಂದ ಹಿಡಿದು ಗೃಹಸ್ಥ ಆಶ್ರಮದವರೆಗೆ ಇಂತಹ ಅನೇಕ. --ಅಲೌಕಿಕ ಅದ್ವಿತೀಯ ಅದ್ಭುತಗಳು ಜೀವನದಲ್ಲಿ ವ್ಯಕ್ತವಾದವು. ಇಂತಹ ಒಂದು ವಿಲಕ್ಷಣ ಬಾಲ ಜೀವನವು ಕೌರ್ಮಾಯ ಮತ್ತು ಗೃಹಸ್ಥಾಶ್ರಮಗಳಿಂದ ತುಂಬಿದ್ದು ಈ ಪ್ರಸಂಗವು ಅವರ ಅಲೌಕಿಕ ಅದ್ವಿತೀಯ ಧರ್ಮ ಜೀವನವನ್ನು ವ್ಯಕ್ತಪಡಿಸುತ್ತದೆ.
ಇದೆಲ್ಲಾ ಅವರ ಜೀವನದಲ್ಲಿ ವರ್ಣಿತವಾಗಿದೆ. ಅದ ನಂತರ ಪಾವಾಪುರದಲ್ಲಿ 2010ರಲ್ಲಿ ಸಮಾಧಿ ಮರಣ ಹೊಂದಿದ್ದ ತಿಳುವಳಿಕೆ ಹೊಂದಿದ್ದ ಸಾದ್ವಿ ಕುಂ ಸರಳಾರವರ ದೇವಲೋಕ ಹೊಂದಿದ್ದ ಆತೃಯದ ಮೂಲಕ ಪ್ರೇರಣೆಗೊಂಡು, ಧನ್‌ದೇವಿಯವರ ಸೋದರಳಿಯ ಶ್ರೀ ಭದ್ರಮುನಿ (ನಂತರ ಯೋಗಿಂದ್ರಯುಗ ಪ್ರಧಾನ ಸಹಜಾನಂದನ) ಅವರ ಪ್ರೇರಣೆ ಮತ್ತು ನಿಷ್ಠೆಯಲ್ಲಿ ಅವರ ಅದ್ವೀತಿಯ ಅಖಂಡ ಆತ್ಮಸಾಧನೆ ಹೊಂದಿದ್ದ ಅವರ ಜೀವನ, ಜೈನ 'ರತ್ನತ್ರಯ' ಕೊನೆಯ ಸೀಮೆಯಾಗಿತ್ತು.
ಪೂರ್ವ ಜನ್ಮದ ಸಂಸ್ಕಾರ ಸಂಪಂದ ಮತ್ತು
Page #15
--------------------------------------------------------------------------
________________
15
(ಈಗಿನ ಜೀವನದ ಅನೇಕ ಸಾಧನೆಯಿಂದ ಉಚ್ಚ | ಸಿದ್ದಿಲಬ್ದಗಳನ್ನು ಪಾತ್ರ ಹೊಂದಿದ್ದರೂ ಅವರು ಜೀವನದುದ್ದಕ್ಕೂ, ನಿರಹಂಕಾರಿ ಅತ್ಯಂತ ನವತೆ ಮತ್ತು ಅತ್ಯಂತ ವಿನಯ ಶೀಲರಾಗಿದ್ದರು.
ಈ ಸಂತ ವಚನವನ್ನು ಅವರು ಯಾವಾಗಲು ಅವರ ದೃಷ್ಟಿಯ ಮುಂದೆ (ನನಪಿನಲ್ಲ) ಇಟ್ಟುಕೊಂಡಿದ್ದರು. ಇದರ ಪ್ರಕಾರ ಅವರು ತಾವೆ ಯಾವಾಗಲೂ ಅವರ ಸಿದ್ದಿಗಳ ಪಭಾವವನ್ನು ಬೀರ ಬಿಡಲಿಲ್ಲ. ಅವರ ರಹಸ್ಯಮಯ ಜೀವನದಲ್ಲಿ ಯಾವುದೇ ಘಟನೆ ಬಂದರೂ ಅದು ಅದೃಷ್ಟಕ್ಕೆ ಸಹಜ ಮತ್ತು ಅನಾಯಸದೆ ಶ್ರೀಮದ್‌ರಾಜಚಂದ್ರಜಿಯವರು ಮಾತಾಜಿಯವರ ಆರಾಧ್ಯರಾಗಿದ್ದು ಅವರ ಸರ್ಣ ವಚನ "ಎಲ್ಲಿ ಸಕಲ ಉತ್ಸಾಷ್ಟ ಶುದ್ದಿಯಿದೆಯೋ ಅಲ್ಲಿ ಸಕಲ ಉತ್ಕೃಷ್ಟ ಸಿದ್ದಿ ಇದರ ಅನುಸಾರ ಪೂಜ್ಯ ಮಾತಾಜಿಯವರ ಬಾಹ್ಯಾಂತರ ಪರಿಶುದ್ಧ ಜೀವನದ ಸಕಲ ಉತೃಷ್ಟಿ ಸಿದ್ದಿಯಾದ ಆತ್ಮವನ್ನು ಯಾವಾಗಲೂ ದೇಹ ಬೇರೆಯಾಗಿ ಕಾಣುವ ಭೇಧಜ್ಞಾನ ಕೇವಲ ನಿಜಸ್ಥಭಾವದ ಅಖಂಡವರ್ತ- ಜ್ಞಾನವು ಅವರ ಅಂತರದಿಶೆಯಾಗಿತ್ತು.
ಈ ಭೇದ ಜ್ಞಾನ-ಆತ್ಮಜ್ಞಾನವನ್ನು ಅವರು ಅವರ ವ್ಯವಹಾರ ಜೀವನ ಹೆಜ್ಜೆ ಹೆಜ್ಜೆಯಲ್ಲಿಯೂ ಆತ್ಮಸಾಥಿಯಾಗಿ ಮಡಿಕೊಂಡು ಅಭಿವ್ಯಕ್ತ
Page #16
--------------------------------------------------------------------------
________________ 16 ಮಡಿದರು ಮತ್ತು ತಮ್ಮ ಸಂಪರ್ಕವಾಗುವ ಎಲ್ಲರನ್ನು ಆ ಮಾರ್ಗದ ಕಡೆ ಕರೆದೊಯ್ದರು. ' ನಾನು ದೇಹದಿಂದ ಬೇರೆಯಾದ ಆತ್ಮ" ಇದರ ಸತತ ಹಿಡಿತ ಮಾಡಿದರು. ತನ್ನಲ್ಲಿ ಶರಣಾಗತವಾದ ಸಾವಿರಾರು ಮನುಷ್ಯರೇ ಅಲ್ಲದೆ ಪಶು-ಪಕ್ಷಿ ಕೀಟಗಳು ಪತ೦ಗಗಳು ಜೀವ ಜಂತುಗಳನ್ನು ಅವರಕರುಣೆಯಿಂದ ಉದ್ದಾರ ಮಾಡಿ ಅವರ ಅಧೀನದಲ್ಲಿ ಶ್ರೀಮದ್‌ರಾಜಚಂದ್ರ ಆಶ್ರಮ -ಹಂಪಿ (ಕರ್ನಾಟಕ) ಅನವರತ ರೂಪದಲ್ಲಿ ವಿಕಸಿತ ಮಾಡುತ್ತಾ ವೇಧ ಹತ್ತಾ ಸುದುರುದೇವ ಸಹಜಾನಂದಜೀ ಪ್ರಕಟಿಸಲ್ಪಟ್ಟು -'ಜಗತ್‌ಮಾತೆ' ಯಲ್ಲಿರುವ ಜ್ಞಾನವಾಕ್ತಯ ಕರುಣೆಯಿಂದ ತುಂಬಿದ್ದ `ಬರುದ್ದುನ್ನು ಅಕ್ಷರಸಹ ಸಾಕಾರ ಮಾಡುತ್ತಾ ಅವರು ಈಗಾಗಲೇ -65 ವರುಷದಲ್ಲಿ ಅವರು ತಮ್ಮ ಬಾವಿ ಭೂಮಿ, ಮಹಾವಿದೇಹ ಕ್ಷೇತ್ರಕ್ಕೆ ಸಮಾಧಿ ಪೂರ್ವಕ ಪ್ರಸ್ಥಾನ ಮಾಡಿ 'ಆತ್ಮಭಾವನೆಯ ಎಬ್ಬಸುತ್ತಾ ಹಲವರನ್ನು ಅಪ್ರತ್ಯಾಶಿತ ಪರಮ ವಿರಹದಲ್ಲಿ ಮುಳುಗಿಸುತ್ತಾ, ಜೈನ ಶುಕ್ಲ ಪತಿಪಧಯ ಶನಿವಾರ ದಿನಾಂಕ 4-4-92 ರಾತ್ರಿಯ 9.15 ಗಂಟೆ ಮರಣ ಹೊಂದಿದರು. - ಓಂ ಶಾಂತಿ