Book Title: Aatmdrashta Mataji Bengali Author(s): Pratap J Tolia Publisher: Jina Bharati View full book textPage 8
________________ ಮಾಡುತ್ತದೆ. ಮಹಿಳೆಯರಿಗೆ ಇವರು ವಾತ್ಸಲ್ಯಭರಿತ ದೊಡ್ಡ ವಿಶಾಲವಾದ ಆಲದ ಮರದಂತೆ ಆಶ್ರಯವನ್ನು ನೀಡುತ್ತಾರೆ. ಹಾಗೆಯೇ ಇವರು ಮಾನವನಿಗೆ (ಮನುಷ್ಯರಲ್ಲದೆ) ಹಸು ನಾಯಿಗಳಗೆ, ಕರುಗಳಿಗೆ ಆತ್ಯ ಸಮಾಧಿಪೂರ್ವಕ ದೇಹ ತ್ಯಜಿಸಲು ಪುಣ್ಯ ಪಡೆದು ಜೀವನವನ್ನು ಸಾರ್ಥಕಗೊಳಿಸಲು ಮಾತಾಜಿ ನೆರವಾಗುತ್ತಾರೆ. ಇಂತಹ ಜಗನ್ಮಾತೆ, ಮಹತ್ ಜ್ಞಾನಿಯಾದ ವಾತ್ಸಲ್ಯ ಮಯಿಯಾದ ಮಾತೆಯ ಬಗ್ಗೆ ಎಷ್ಟು ಬರೆಯುವುದು ಹಾಗು ಏನು ಬರೆಯುವುದು ? ವರ್ಣನೆ ಮಾಡಿದಷ್ಟು ಮುಗಿಯದು. ಅವರ ಅದ್ಭುತ, ವಿರಳ, ಅಲೌಕಿಕ ಜೀವನ ಚರಿತ್ರೆಯನ್ನು ಇನ್ನು ನನಗೆ ವರ್ಣಿಸಲು ಅಸಾಧ್ಯ. ಇಂತಹ ಪಾವನ ತೀರ್ಥಕ್ಷೇತ್ರ ಭೂಮಿಯಲ್ಲಿ ನೀಲಿ ಆಗಸದಡಿಯಲ್ಲಿ ಪೂಜ್ಯ ಮಾತೆಯ ಚರಣಾರವಿಂದದ ಹತ್ತಿರ ಕುಳಿತ್ತಿದ್ದಾಗ ನನಗೆ ಹಲವು ಉಚ್ಚ ವಿಚಾರ ಭಾವನೆಗಳು ಮನಸ್ಸನ್ನು ಆಕ್ರಮಿಸಿ ಮಾಯವಾಗುತ್ತದೆ. ಇವರ ಸನ್ನಿಧಿಯಲ್ಲಿ ಇರುವುದು ಒಂದು ಅದ್ಭುತ ಅನುಭವ. ಅವರ ವಿರಹ ವೇದನೆಯಿಂದ ಮನ ಮುದುಡುತ್ತದೆ. ಈ ಸ್ವರ್ಗದಂತಹ ಸನ್ನಿಧಿಯಿಂದ ಬಹುಬೇಗ ವ್ಯವಹಾರಿಕ ಪ್ರಪಂಚಕ್ಕೆ ಮರಳಿ ಹೋಗಲು ಇಷ್ಟವಿಲ್ಲ. ಮನಸ್ಸು ಉದಾಸಗೊಳ್ಳುತ್ತದೆ. ಆದರೆ! ಈ ವ್ಯವಹಾರಿಕ ಪ್ರಪಂಚವೇ ಇರದಿದ್ದರೆ ಹಂಪೆಯಲ್ಲಿPage Navigation
1 ... 6 7 8 9 10 11 12 13 14 15 16