Book Title: Aatmdrashta Mataji Bengali
Author(s): Pratap J Tolia
Publisher: Jina Bharati

View full book text
Previous | Next

Page 9
________________ 9 ವಾತ್ಸಲ್ಯಮಯಿ ಮಾತೆಯ ಚರಣ ಕಮಲದಲ್ಲಿ ಸಿಗುವ ನನ್ನವರೆನ್ನುವ ಭಾವನೆ ಹಾಗು ಪ್ರೀತಿ ನಮ್ಮ ಪ್ರಪಂಚದಲ್ಲಿ ಎಲ್ಲಿ ಸಿಗುತ್ತದೆ? ಆದರೂ ಕರ್ತವ್ಯದಕರೆಗೆ ಓಗೊಡಲೇ ಬೇಕು. ಹೋಗಲೇಬೇಕು. ವಿವಶಳಾಗಿ ಹೋಗಲು ತಯಾರಾಗುತ್ತೇನೆ. ಆದರೆ ಮತ್ತೆ ಬಹುಬೇಗ ತಿರುಗಿ ಬರುವೆ. ಎಂದು ಸಂಕಲ್ಪ ಮಾಡಿಕೊಳ್ಳುತ್ತೇನೆ. ಹೊಂಬೆಳಕು ಮನದಲ್ಲಿ ಶಾಂತಿ ನೆಲೆಸುತ್ತದೆ. ಈ ಎಲ್ಲರ ಮಧ್ಯದಲ್ಲಿ. ಎಲ್ಲ ಬಾಹ್ಯ ಪ್ರಪಂಚದ ವಿಚಾರಗಳು ಹೋಗಿ, ಮನದಲ್ಲಿ ಶಾಂತಿ ನೆಲೆಸುತ್ತದೆ. ರಹಸ್ಯವಾದಿನಿ ಆತ್ಮಜ್ಞಾ ಜಗತ್‌ಮಾತಾ ಈಗಿನ 6 ಶೀಪುರುಷಗಳ ಹಿಂದಿನ ಮಾತಿದು. ಗುಜರಾತಿನ ಕಚ್ ಸ್ಥಾನ ಸಾಂಬರಾಯಿ' ಎನ್ನುವ ಗ್ರಾಮದಲ್ಲಿ ಅಲೌಕಿಕ ಜನ್ಮವಾಯಿತು. ಪೂರ್ವ ಸಂಸ್ಕಾರಣ ಸಂಪನ್ನತೆಯ ಕಾರಣ ಬಾಲ್ಯಾವಸ್ಥೆಯಿಂದಲೆ ಬಾಲೆ ನಿರ್ಮಲ ಜ್ಞಾನಪೂರ್ಣೆಯಾಗಿದ್ದಳು. ಅವಳಿಗೆ ನಾಲ್ಕು ವಯಸ್ಸಿನವಳಿದ್ದಾಗ, ಒಂದು ದಿನ ತನ್ನ ತಂದೆಯ ಜೊತೆಯಲ್ಲಿ 'ಸಾಂಬಾರಾಯಿಯಿಂದ' ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಗ್ರಾಮಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ರಸ್ತೆಯ ಇಬ್ಬದಿಗಳಲ್ಲಿ ಮಣ್ಣಿನ

Loading...

Page Navigation
1 ... 7 8 9 10 11 12 13 14 15 16