Book Title: Aatmdrashta Mataji Bengali
Author(s): Pratap J Tolia
Publisher: Jina Bharati

View full book text
Previous | Next

Page 13
________________ 13 ರಾವ್‌ನನ್ನು ಕ್ಷಮಿಸಿ ಅಲ್ಲಿಂದ ಹೊರಗೆ ಬಂದಳು. ಅವಳು ಸಂತೋಷದಿಂದ ಈಚೆಗೆ ಬಂದದ್ದನ್ನು ನೋಡಿದ ಮೇಲೆಯೇ ಅವರ ತಂದೆಗೆ ಸಮಾಧಾನವಾದುದ್ದು. ರಾವೃ ಗಾಡಿಯು ಮತ್ತು ಅವನ ಜೊತೆಗಾರರು ಹಿಂದಿರುಗಿದಾಗ ಧನ್‌ದೇವಿಯು ತಂದೆಗೆ ಇನ್ನೂ ಬಹಳ ಆಶ್ಚರ್ಯವಾಯಿತು. ಧನ್‌ದೇವಿಯಿಂದ ಎಲ್ಲಾ ವಿಷಯ ತಿಳಿಯಲು ಪ್ರಯತ್ನಗಳೆಲ್ಲಾ ವ್ಯರ್ಥವಾಯಿತು. ಬಾಲಕೆಯು ಈ ವಿಷಯದಲ್ಲಿ ಸಂಪೂರ್ಣ (ನಿರ್ಲತವಾದಳು) ಮೌನವಹಿಸಿದಳು. ಅವರಿಬ್ಬರು ಮುಂದೆ ಗ್ರಾಮದ ದಾರಿಯನ್ನು ಹಿಡಿದರು. ಆ ಬಾಲಿಕೆಗೆ ಮತ್ತೊಮ್ಮೆ ರಾವ್‌ನಿಂದ ಆಹ್ವಾನ ಬಂದಿತ್ತು. ಆಗ ಅವಳು ರಾವ್ನು ಎಲ್ಲಾ ದುಷ್ಟ ಕಾರ್ಯಗಳನ್ನು ಬಿಟ್ಟಾಯಿತ್ತೆಂದು ಖಚಿತ ಪಡಿಸಿಕೊಂಡು ಅವನಿಗೆ ಧರ್ಮಭೋಧನೆಯನ್ನು ಮಾಡಿದಳು. ಇದನ್ನು ಕಂಡ ತಂದೆಯು ತನ್ನ ಮಗಳಲ್ಲಿ ಎನೋ ಒಂದು ಅದ್ಭುತ ಶಕ್ತಿ ಅಡಗಿದೆ ಎಂದು ಅರಿತರು. ಆದರೆ ಆಗಲೂ ಆತ ಮೌನ ವಹಿಸಿದರು. ಅಲ್ಲಿಂದ ಅಂತಹ ಅನೇಕ ಅದ್ಭುತ ಪ್ರಸಂಗಗಳು ಮತ್ತು ಅನುಭವಗಳಾಗುತ್ತಿತ್ತು. ಇವಳ ಅದ್ಭುತ ಶಕ್ತಿಯನ್ನು ಕಂಡು ಕೆಲವರು ಮೆಚ್ಚಿದರು. ಇನ್ನಿತರರು ಅವಳನ್ನು ಸಂದೇಹದಿಂದ ನೋಡಿ

Loading...

Page Navigation
1 ... 11 12 13 14 15 16