Book Title: Aatmdrashta Mataji Bengali Author(s): Pratap J Tolia Publisher: Jina Bharati View full book textPage 7
________________ ಈ ನೂತನಧಾಮದ ಸಂಸ್ಥಾಪಕ ಮಹಾಯೋಗಿ ಶ್ರೀ ಸಹಜಾನಂದನಜಿಯವರು, ಇಸವಿ 1970ರಲ್ಲಿ ಯೋಗದ ಮೂಲಕ ದೇಹ ತ್ಯಾಗ ಮಾಡುವ ಮುನ್ನ ಮಾತಾಜಿಯವರಿಗೆ ಆಶ್ರಮದ ಅಧಿಷ್ಠಾನವನ್ನು ನೀಡಿ 'ಜಗನ್ಮಾತಾ' ಎಂಬ ನಾಮವನ್ನು ನೀಡಿದ್ದಾರೆ. ಈ ದಿನ ಈ ಆಶ್ರಮವು ಜೀವಕಳೆಯಿಂದ ತುಂಬಿರುವುದೆ ಈ ಜಗನ್ಮಾತೆಯ ಮಂದಹಾಸದಿಂದ ಪ್ರಜ್ವಲಿಸುವ ಜ್ಞಾನಭರಿತ, ಮುಖಾರವಿಂದದಿಂದ ಹಾಗೂ ತೇಜಸ್ಸಿನಿಂದ ಕೂಡಿರುವ ಅವರ ಚಹರೆಯಿಂದ. ಈ ಜಗತ್ತಿನ ಮಾತೆ ರಾಗ-ಮೋಹ ಬಂಧನಗಳಿಂದ ಮುಕ್ತಿ ಹೊಂದಿ ಉನ್ನತ ಸ್ಥಾನಕ್ಕೆ ಸಾಗಿದ್ದಾರೆ. ಆದರೂ ಸಹ ನಿಷಾರಣ ಕರುಣೆ ಹಾಗೂ ವಾತ್ಸಲ್ಯದ ಸಾಕ್ಷಾತ್ ರೂಪ, ಅವರು ಬರಿ ನಮಗೆ ಮಾತ್ರವಲ್ಲ ಅನೇಕ ಅಬಲೆಯರಿಗೆ, ವೇದನಾರಸ್ಥರಿಗೆ, ಮೂಕ ಪಶುಪ್ರಾಣಿಗಳಿಗೂ ತಾಯಿಯೇ. ಸಕಲ . ಅತಿಥಿ, ಆಗಂತುಕ, ಸಾಧು-ಸಾದ್ದಿಯರ ಸೇವೆಯಷ್ಟೇಯಲ್ಲ, ಪ್ರತಿ ಯಾತ್ರಿಕನ, ಪ್ರತಿ ಶ್ರಾವಕನ, ಪ್ರತಿ ಬಾಲಕನ, ಪ್ರತಿ ಪಶುಪಕ್ಷಿಗಳ ಸೇವೆಯನ್ನು ವಾತ್ಸಲ್ಯ ಪೂರ್ಣವಾಗಿ ನಿರ್ವಹಿಸುತ್ತಾರೆ. ಯೋಗ, ಜ್ಞಾನ, ಭಕ್ತಿಯಲ್ಲಿ ಉಚ್ಚಸ್ಥಾನವನ್ನು ಪಡೆದ ಮಾತಾಜಿಯವರು ದೈನ್ಯದಿಂದ ವಿನಯದಿಂದ ಎಲ್ಲರನ್ನೂ ಉಪಚರಿಸುವುದನ್ನು ಕಂಡು ಎಲ್ಲರಿಗೂ ಬಹಳ ಆಶ್ಚರ್ಯವನ್ನುಂಟುPage Navigation
1 ... 5 6 7 8 9 10 11 12 13 14 15 16