________________
*೯೨) ಪಂಪಭಾರತಂ
ವll ಎಂದು ನಾಗಪುರಕ್ಕೆ ವರ್ಷ ಪರಶುರಾಮನ ಬರವಂ ಗಾಂಗೇಯಂ ಕೇಳಿದಿರ್ವಂದು ಕನಕ ರಜತ ಪಾತ್ರಂಗಳೊಳರ್ಥ್ಯಮಂ ಕೊಟ್ಟು ಪೊಡಮಟ್ಟುಮll ಬೆಸನೇನೆಂದೊಡೆ ಪೇಳ್ವೆನೆನ್ನ ಬೆಸನಂ ಕೈಕೊಳ್ಳುದೀ ಕನ್ನೆಯಂ
ಪಸುರ್ವಂದರ್ ಪಸೆಯೆಂಬಿವಂ ಸಮೆದು ನೀಂ ಕೈಕೊಲ್ ಕೊಳಲಾಗದಂ | ಬೆಸಕಂ ಚಿತ್ತದೊಳುಡಿಗಳಿವರೆಮಾಚಾರ್ಯರೆಂದೋವದೇ
ರ್ವೆಸನಂ ಮಾಣದೆ ಕೈದುಗೊಳ್ಳೆರಡಕೊಳ ಮೆಚ್ಚಿತ್ತೆನೇನೆಂದಪಮ್ ||೭೮
ವ|| ಎಂದು ನುಡಿದ ಪರಶುರಾಮನ ನುಡಿಯಂ ಗಾಂಗೇಯಂ ಕೇಳೆನಗೆ ವೀರಯುಂ ಕೀರ್ತಿಶ್ರೀಯುಮಲ್ಲದುಟಿದ ಪೆಂಡಿರ್ ಮೋಜಣಿಯಲ್ಲ ನೀವಿದನೇಕಾಗ್ರಹಂಗಯ್ಯರೆಂದೊಡೆಂತು ಮೆಟ್ರೊಳ್ ಕಾದಲ್ಲೇಲ್ವುದೆಂದು ಮll ಕೆಳರ್ದಂದು ರಣಾಗ್ರಹ ಪ್ರಣಯದಿಂದಾಗಳ್ ಕುರುಕ್ಷೇತ್ರಮಂ
ಕಳವೇಟಿರ್ವರುಮ್ಮೆಂದ್ರ ವಾರುಣದ ವಾಯವ್ಯಾದಿ ದಿವ್ಯಾಸ್ತ್ರ ಸಂ | ಕುಳದಿಂದೊರ್ವರನೊರ್ವರೆಚ್ಚು ನಿಜಪೀಠಾಂಭೋಜದಿಂ ಬ್ರಹ್ಮನು
ಚಳಿಪನ್ನಂ ಪಿರಿದೊಂದು ಸಂಕಟಮನೀ ತೈಲೋಕದೊಳ್ ಮಾಡಿದರ್ || ೭೯ ಸ್ತ್ರೀಯನ್ನು ಮದುವೆಯಾಗುತ್ತಾನೆ. ಹಾಗಲ್ಲದೆ ಅವಿನಯವನ್ನೇ (ದುರ್ನಿತಿಯನ್ನೇ ನಂಬುವುದಾದರೆ ನನ್ನನ್ನು ಮೀರಿ ಭಯಂಕರವಾದ ಯುದ್ಧದಲ್ಲಿ ಪ್ರತಿಭಟಿಸುವವನಾಗುತ್ತಾನೆ. ವಿಚಾರಮಾಡುವುದಾದರೆ ಭೀಷ್ಮನಿಗೆ ಬೇರೆ ಕಾರ್ಯವೇ ಇಲ್ಲ, ನನ್ನನ್ನು ವಿಶೇಷವಾಗಿ ನಂಬಿದ ಅಂಬೆಗೆ ನನ್ನ ಬಾಣದಿಂದಲೇ ಮದುವೆ ಮಾಡಿಸುತ್ತೇನೆ. (ಭೀಷ್ಮನಿಗೆ ಅಂಬೆಯನ್ನು ಮದುವೆಯಾಗುವುದು ಇಲ್ಲವೇ ನನ್ನೊಡನೆ ಯುದ್ಧಮಾಡುವುದು - ಇವೆರಡಲ್ಲದೇ ಬೇರೆ ಮಾರ್ಗವೇ ಇಲ್ಲ ಎಂಬುದು ಇದರ ಭಾವ) ವll ಎಂದು ಹಸ್ತಿನಾಪುರಕ್ಕೆ ಬರುತ್ತಿರುವ ಪರಶುರಾಮನ ಆಗಮನವನ್ನು ಭೀಷ್ಮನು ಕೇಳಿ ಎದುರಾಗಿ ಬಂದು ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲಿ ಅರ್ಭ್ಯವನ್ನು ಕೊಟ್ಟು ನಮಸ್ಕಾರಮಾಡಿ ೭೮. ಅಪ್ಪಣೆಯೇನೆಂದು ಕೇಳಿದನು. ಅದಕ್ಕೆ ಪರಶುರಾಮನು ನನ್ನ ಆಜ್ಞೆಯನ್ನು ನೀನು ಅಂಗೀಕಾರಮಾಡಬೇಕು. ಹಸುರುವಾಣಿ ಚಪ್ಪರ ಮತ್ತು ಹಸೆಮಣೆಗಳನ್ನು ಸಿದ್ಧಪಡಿಸಿ ಈ ಕನ್ನೆಯನ್ನು ಸ್ವೀಕರಿಸು, ಸ್ವೀಕರಿಸಕೂಡದೆಂಬ ಕಾರ್ಯ (ಅಭಿಪ್ರಾಯ) ಮನಸ್ಸಿನಲ್ಲಿರುವುದಾದರೆ ಈಗಲೇ ಇವರು ನಮ್ಮ ಗುರುಗಳು ಎಂಬ ಭಕ್ತಿಪ್ರದರ್ಶನ ಮಾಡದೆ ಯುದ್ಧೋದ್ಯೋಗವನ್ನು ಕೈಕೊಂಡು ಶಸ್ತಧಾರಣೆ ಮಾಡು. ಎರಡರಲ್ಲಿ ನಿನಗಿಷ್ಟವಾದುದನ್ನು ಕೊಟ್ಟಿದ್ದೇನೆ; ಏನು ಹೇಳುತ್ತೀಯೆ? ವ|| ಎಂದು ಹೇಳಿದ ಪರಶುರಾಮನ ಮಾತನ್ನು ಭೀಷ್ಮನು ಕೇಳಿ ನನಗೆ ವೀರಲಕ್ಷ್ಮಿ ಮತ್ತು ಯಶೋಲಕ್ಸಿಯರಲ್ಲದೆ ಉಳಿದ ಹೆಂಗಸರಲ್ಲಿ ಸಂಬಂಧವಿಲ್ಲ. ಏಕೆ ಕೋಪಿಸಿ ಕೊಳ್ಳುತ್ತೀರಿ, ಹೇಗೂ ನಮ್ಮೊಡನೆ ಯುದ್ಧಮಾಡುವುದು ಎಂದನು. ೭೯. ಇಬ್ಬರೂ ರೇಗಿ ಭಯಂಕರವಾದ ಯುದ್ದಮಾಡಬೇಕೆಂಬ ಅಪೇಕ್ಷೆಯಿಂದ ಕುರುಕ್ಷೇತ್ರವನ್ನೇ ಯುದ್ಧಭೂಮಿಯನ್ನಾಗಿ ಮಾಡಿಕೊಂಡು ಐಂದ್ರಾಸ್ತ್ರ ವಾರುಣಾಸ್ತ್ರ ವಾಯವ್ಯಾಸ್ತ್ರಗಳ ಸಮೂಹದಿಂದ ಒಬ್ಬರೊಬ್ಬರೂ ಬ್ರಹ್ಮನು ತನ್ನ ಕಮಲಾಸನದಿಂದ ಮೇಲಕ್ಕೆ