________________
ಪ್ರಥಮಾಶ್ವಾಸಂ | ೯೩ ಶಿಖರಿಣಿ | ಅತರ್ಕ್ಕಂ ವಿಕ್ರಾಂತಂ ಭುಜಬಲಮಸಾಮಾನ್ಯಮಧಿಕಂ
ಪ್ರತಾಪಂ ಪೋಗೀತಂಗಣೆಯ ದಿವಿಜರ್ ವಾಯುಪಥದೊಳ್|| ಶಿತಾಸಂಗ ಪೊಂಕಂಗಡಿಸಿ ಸುಗಿದಂ ಭಾರ್ಗವನಿದೇಂ ಪ್ರತಿಜ್ಞಾ ಗಾಂಗೇಯಂಗದಿರದಿದಿರಿಲ್ವನ್ನರೊಳರೇ ||
೮೦ ವll ಅಂತು ಗಾಂಗೇಯನೋಳ್ ಪರಶುರಾಮಂ ಕಾದಿ ಬಸವಳಿದುಸಿರಲಪೊಡಮಾಜದ ಮೂರ್ಛವೂಗಿರ್ದನ ಕಂಡಬೆಯಂಬ ದಂಡುರುಂಬೆ ನಿನಗೆ ವಧಾರ್ಥವಾಗಿ ಪುಟ್ಟುವನಕ್ಕೆಂದು ಕೋಪಾಗ್ನಿಯಿಂದಮಗ್ನಿಶರೀರೆಯಾಗಿ ದ್ರುಪದನ ಮಹಾದೇವಿಗೆ ಮಗನಾಗಿ ಹುಟ್ಟಿ ಕಾರಣಾಂತರದೊಳ್ ಶಿಖಂಡಿಯಾಗಿರ್ದಳಿತ್ತ ಭೀಷ್ಕರ ಬೆಂಬಲದೊಳ್ ವಿಚಿತ್ರವೀರ್ಯನು ಮವಾರ್ಯವೀರ್ಯನುಮಾಗಿ ಕೆಲವು ಕಾಲಂ ರಾಜ್ಯಲಕ್ಷಿ ಯಂ ತಾಳಿ ರಾಜಯಕ್ಷ ತಪ್ತಶರೀರನಾತ್ಮಜ ವಿಗತಜೀವಿಯಾಗಿ ಪರಲೋಕಪ್ರಾಪ್ತನಾದೊಡೆ ಗಾಂಗೇಯನುಂ ಸತ್ಯವತಿಯುಮತ್ಯಂತ ಶೋಕಾನಲ ದಹನಾನ ಮಾನಸರ್ಕಳಾಗಿ ಆತಂಗೆ ಪರಲೋಕಕ್ರಿಯಗಳಂ ಮಾಡಿ ರಾಜ್ಯಂ ನಷ್ಟರಾ(ಜುಮಾದುದರ್ಕೆ ಮಮ್ಮಲಮಜುಗಿ ಯೋಜನಗಂಧಿ ಸಿಂಧುಪುತ್ರನನಿಂತೆಂದಳ
ಮll ಮಗನೆಂಬಂತು ಧರಿತ್ರಿ ನಿನ್ನನುಜರಂ ಕೈಕೊಂಡು ಮುಂ ಪೂಣ್ಣ ನ
ನ್ನಿಗೆ ಬನ್ನಂ ಬರಯದಾರ್ತಸಗಿದೀ ವಿಖ್ಯಾತಿಯುಂ ಕೀರ್ತಿಯುಂ | ಮುಗಿಲು ಮುಟ್ಟಿದುದಕ್ಕೆ ನಮ್ಮ ಕುಲದೊಳ್ ಮಕ್ಕಳ್ಕರ್ ನೀನೇ ಜ ಮೃಗನೈ ಮುನ್ನಿನೊರಂಟುವೇಡ ಮಗನೇ ಕೈಕೊಳ್ ಧರಾಭಾರಮಂ || ೮೧
ಹಾರಿಹೋಗುವಂತೆ ಬಾಣಪ್ರಯೋಗಮಾಡಿ ಮೂರುಲೋಕಗಳಲ್ಲಿಯೂ ಹಿರಿದಾದ ಸಂಕಟವನ್ನುಂಟುಮಾಡಿದರು. ೮೦. ಇವನ ಪರಾಕ್ರಮವು ಚರ್ಚೆಗೆ ಮೀರಿದುದು; ಬಾಹುಬಲವು ಅಸಾಧಾರಣವಾದುದು; ಶೌರ್ಯವು ಅತಿಶಯವಾದುದು; ಹೋಗೋ! ಈತನಿಗೆ ದೇವತೆಗಳು ಸಮಾನವೇ! ಆಕಾಶಮಾರ್ಗದಲ್ಲಿ ಹರಿತವಾದ ಬಾಣಗಳನ್ನು ನಿರ್ವಿಯ್ರಮಾಡಲು ಪರಶುರಾಮನೂ ಹೆದರಿದನು. ಪ್ರತಿಜ್ಞೆಮಾಡಿರುವ ಭೀಷ್ಮನಿಗೆ ಹೆದರದೆ ಎದುರಾಗಿ ನಿಲ್ಲುವವರೂ ಇದ್ದಾರೆಯೇ? ವ! ಹಾಗೆ ಗಾಂಗೇಯನಲ್ಲಿ ಪರಶುರಾಮನು ಕಾದಿ ಶಕ್ತಿಗುಂದಿ ಮಾತನಾಡುವುದಕ್ಕೂ ಆಗದೆ ಮೂರ್ಛಹೋಗಿದ್ದವನನ್ನು ಕಂಡು ಅಂಬೆಯೆಂಬ ಗಯ್ಯಾಳಿ ನಿನ್ನ ಸಾವಿಗೆ ಕಾರಣವಾಗಿ ಹುಟ್ಟುತ್ತೇನೆ, ಆಗಲಿ ಎಂದು ಕೋಪದ ಬೆಂಕಿಯಿಂದ ಅಗ್ನಿಪ್ರವೇಶಮಾಡಿ ದ್ರುಪದನ ಮಹಾರಾಣಿಗೆ ಮಗನಾಗಿ ಹುಟ್ಟಿ ಕಾರಣಾಂತರದಿಂದ ಶಿಖಂಡಿಯಾಗಿದ್ದಳು. ಈ ಕಡೆ ವಿಚಿತ್ರವೀರ್ಯನು ಭೀಷ್ಕರ ಸಹಾಯದಿಂದ ತಡೆಯಿಲ್ಲದ ಪರಾಕ್ರಮವುಳ್ಳವನಾಗಿ ಕೆಲವು ಕಾಲ ರಾಜ್ಯಲಕ್ಷಿಯನ್ನು ಧರಿಸಿ ಕ್ಷಯರೋಗದಿಂದ ಸುಡಲ್ಪಟ್ಟವನು, ಮಕ್ಕಳಿಲ್ಲದೆಯೇ ಸತ್ತನು. ಭೀಷ್ಮನೂ ಸತ್ಯವತಿಯೂ ಅತ್ಯತಿಶಯವಾದ ದುಃಖಾಗ್ನಿಯಿಂದ ಸುಡಲ್ಪಟ್ಟ ಮನಸ್ಸುಳ್ಳವರಾಗಿ ಆತನಿಗೆ ಪರಲೋಕಕ್ರಿಯೆಗಳನ್ನು ಮಾಡಿ ರಾಜ್ಯಕ್ಕೆ ರಾಜನೇ ಇಲ್ಲದಂತಾದುದಕ್ಕೆ ವಿಶೇಷವಾಗಿ ದುಃಖಪಟ್ಟು ಯೋಜನಗಂಧಿಯಾದ ಸತ್ಯವತಿಯು ಭೀಷ್ಮನಿಗೆ ಹೀಗೆಂದಳು : ೮೧. ಮಗನೆಂದರೆ ನೀನೆ ಮಗ ಎಂದು ಲೋಕವೆಲ್ಲ ಶ್ಲಾಘಿಸುವ ಹಾಗೆ ನಿನ್ನ ತಮ್ಮಂದಿರನ್ನು ಸ್ವೀಕರಿಸಿ