________________
ಪ್ರಥಮಾಶ್ವಾಸಂ | ೯೧ ವ|| ಎಂದು ನುಡಿದ ಗಾಂಗೇಯನ ನುಡಿಯೊಳವಸರಮಂ ಪಸರಮುಂ ಪಡೆಯದೆ ತನಗೆ ಕಿಜಿಯಂದುಂಗುರವಿಟ್ಟ ಸಾಲ್ವಲನೆ೦ಬರ ಸನಿಗೆ ಪೋಗಿ ನೀನೆನ್ನಂ ಕೈಕೊಳವೇಬ್ರುಮೆಂದೊಡಾತನಿಂತೆಂದಂಕಂ || ಬಂಡಣದೊಳೆನ್ನನೋಡಿಸಿ
ಕೊಂಡುಯ್ದಂ ನಿನ್ನನಾ ಸರಿತ್ತುತನಾನುಂ | ಪೆಂಡತಿಯನಾದೆನದಂ ಪೆಂಡಿರ್ ಪೆಂಡಿರೊಳದೆಂತು ಬೆರಸುವರಬಲೇ ||
೭೬ ವ|| ಎಂದು ಸಾಲ್ವಲಂ ತನ್ನ ಪರಿಭವದೊಳಾದ ಸಿಗ್ಗು ಸಾಲ್ವಿನಮುಂಟುಮಾಡಿದೊಡಾತನ ಮನಮನೊಡಂಬಡಿಸಲಾಜಿದೆ ಪರಶುರಾಮನಲ್ಲಿಗೆ ಪೊಗಿ ಭೀಷ್ಮನನ್ನ ಸ್ವಯಂವರದೊಳ್ ನೆರೆದರಸುಮಕ್ಕಳೆಲ್ಲರುಮನೊಡಿಸಿ ಕೊಂಡು ಬಂದೆನ[0] ಮದುವೆಯಂ ನಿಲಿಲ್ಲ [ದ]ಟ್ಟಿ ಕಳೆದೊಡೆನ್ನ ದೆವಸಮುಂ ಜವ್ವನಮುಮಡವಿಯೊಳಗೆ ಪೂತ ಪೂವಿನಂತೆ ಕಿಡಲೀಯದಾತನನನ್ನಂ ಪಾಣಿಗ್ರಹಣಂ ಗೆಯ್ದಂತು ಮಾಡು ಮಾಡಲಾಜಿದೊಡೆ ಕಿಚ್ಚಂ ದಯೆಗೆಯ್ದುದೆಂದಂಬೆ ಕಣ್ಣ ನೀರು ತುಂಬೆಮ! ನಯಮಂ ನಂಬುವೊಡೆನ್ನ ಪೇಟ್ಟಿ ಸತಿಯಂ ಕೈಕೊಂಡನಂತಲ್ಲದು
ರ್ಣಯಮಂ ನಚ್ಚುವೊಡೆನ್ನನುಗ್ರ, ರಣದೊಳ್ ಮೇಣ್ ಮಿಟಿ ಮಾರ್ಕೊಂಡನಾ | ರಯೆ ಕಜ್ಜಂ ಪೆಜತಿಲ್ಲ ಶಂತನು ಸುತಂಗೆನ್ನಂ ಕರಂ ನಂಬಿದಂ ಬೆಯೊಳೆನ್ನಂಬವಲಂ ವಿವಾಹವಿಧಿಯಂ ಮಾಂ ಪೆಜರ್ ಮಾರೇ || ೭೭
ತಿಳಿದಿರುವ ಹಾಗೆ ಪ್ರತಿಜ್ಞೆ ಮಾಡಿದ ನನಗೆ ಕಾಮಸುಖಕ್ಕೆ ಸೋಲುವುದಾಗದು. ನನ್ನ ಬ್ರಹ್ಮಚರ್ಯವ್ರತವು ನಾಶವಾಗುತ್ತದೆ. ಎಲೆ ಕಮಲಮುಖಿ ಮೊದಲು ತಾಯಿ ಯೆಂದು ಕರೆದು ಆಮೇಲೆ ಪ್ರೀತಿಪಾತ್ರಳಾದವಳೆಂದು ಹೇಳುವುದು ಸಾಧ್ಯವಾಗು ತದೆಯೇ ? ವll ಎಂದು ಹೇಳಿದ ಭೀಷ್ಮನ ಮಾತಿನಲ್ಲಿ ಅಂಬೆಯು ಯಾವ ಇಷ್ಟಾರ್ಥ ವನ್ನು ಪಡೆಯಲಾರದೆ ತನ್ನ ಬಾಲ್ಯದಲ್ಲಿ ಮದುವೆಯಾಗುತ್ತೇನೆಂದು ಉಂಗುರವನ್ನು ತೊಡಿಸಿದ್ದ ಸಾಲ್ವಲನೆಂಬ ರಾಜನಲ್ಲಿಗೆ ಹೋಗಿ ನೀನು ನನ್ನನ್ನು ಅಂಗೀಕಾರ ಮಾಡಬೇಕು ಎನ್ನಲು ಆತನು ಹೀಗೆಂದು ಹೇಳಿದನು. ೭೬. ಯುದ್ದದಲ್ಲಿ ಆ ಭೀಷ್ಮನು ನನ್ನನ್ನು ಓಡಿಸಿ ನಿನ್ನನ್ನು ಅಪಹರಿಸಿಕೊಂಡು ಹೋದನು. ಅದರಿಂದ ನಾನೂ ಹೆಂಗಸಾಗಿದ್ದೇನೆ. ಎಲೆ ಹೆಣ್ಣೆ ಹೆಂಗಸರು ಹೆಂಗಸರಲ್ಲಿ ಸೇರುವುದು ಹೇಗೆ ಸಾಧ್ಯ? ವ|| ಎಂದು ಸಾಲ್ವಲನು ತನಗೆ ಸೋಲಿನಲ್ಲಿ ಉಂಟಾದ ನಾಚಿಕೆಯನ್ನು ಸಾಕಾಗುವಷ್ಟು ಪ್ರದರ್ಶಿಸಲಾಗಿ ಅವನನ್ನು ಒಪ್ಪಿಸಲಾರದೆ ಪರಶುರಾಮನ ಹತ್ತಿರಕ್ಕೆ ಹೋಗಿ ಭೀಷ್ಮನು ಸ್ವಯಂವರದಲ್ಲಿ ಸೇರಿದ್ದ ರಾಜಕುಮಾರರೆಲ್ಲರನ್ನೂ ಓಡಿಸಿ ಅಪಹರಿಸಿಕೊಂಡು ಬಂದು ನನ್ನನ್ನು ಮದುವೆ ಮಾಡಿಕೊಳ್ಳದೆ ಓಡಿಸಿದನು. ನನ್ನ ಯೌವನವು ಕಾಡಿನಲ್ಲಿ ಬಿಟ್ಟ ಹೂವಿನಂತೆ ವ್ಯರ್ಥವಾಗದ ಹಾಗೆ ಆತನು ನನ್ನ ಕಯ್ಯನ್ನು ಹಿಡಿಯುವ ಹಾಗೆ ಮಾಡು; ಹಾಗೆ ಮಾಡಲು ಸಾಧ್ಯವಿಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ), ಕಿಚ್ಚನ್ನು ದಯಪಾಲಿಸು ಎಂಬುದಾಗಿ ಅಂಬೆಯು ಕಣ್ಣ ನೀರನ್ನು ತುಂಬಿದಳು. ೭೭. ಅದಕ್ಕೆ ಪರಶುರಾಮನು ಭೀಷ್ಮನು ವಿನಯವನ್ನು ಆಶ್ರಯಿಸುವುದಾದರೆ ನಾನು ಹೇಳಿದ