________________
೯೦ | ಪಂಪಭಾರತಂ
ಪ್ರಾಪ್ತನಾದೊಡೆ ಗಾಂಗೇಯಂ ತದುಚಿತ ಪರಲೋಕ ಕ್ರಿಯೆಗಳಂ ಮಾಡಿ ಮುನ್ನೆ ತನ್ನ ನುಡಿದ ನುಡಿವಳಿಯೆಂಬ ಪ್ರಾಸಾದಕ್ಕಧಿಷ್ಠಾನಂಗಟ್ಟುವಂತೆ ಚಿತ್ರಾಂಗದಂಗೆ ಪಟ್ಟಮಂ ಕಟ್ಟಿ ರಾಜ್ಯಂಗೆಯಿಸುತ್ತುಮಿರ್ಪನ್ನೆಗಮೊರ್ವ ಗಂಧರ್ವನೊಳೆ ಚಿತ್ರಾಂಗದಂ ದ್ವಂದ್ವಯುದ್ಧಮಂ ಪೊಣರ್ಚೆ ಕುರುಕ್ಷೇತ್ರಮಂ ಕಳಂಬೆಟ್ಟು ಕಾದಿ ಸತ್ತೊಡೆ ವಿಚಿತ್ರವೀರ್ಯನಂ ಗಾಂಗೇಯಂ ಧರಾಭಾರ ಧುರಂಧರನಂ ಮಾಡಿ
ಮ|| ಸಕಳ ಕ್ಷತ್ರಿಯ ಮೋಹದಿಂ ನಿಜಭುಜ ಪ್ರಾರಂಭದಿಂ ಪೋಗಿ ತಾ ಗಿ ಕೆಲರ್ ನೊಂದೊಡೆ ಕಾದಿ ರಾಜಸುತರೊಳ್ ತನ್ನಂಕದೊಂದುಗ್ರಸಾ | ಯಕದಿಂ ನಾಯಕರಂ ಪಡಲ್ವಡಿಸುತುಂ ತಾಂ ತಂದನಂದಂಬೆಯಂ ಬಿಕೆಯಂಬಾಲೆಯರೆಂಬ ಬಾಲೆಯ[ರನೇಂ] ಭೀಷ್ಮ ಯಶೋಭಾಗಿಯೋ ||
29
ವ|| ಅಂತು ತಂದು ತನ್ನ ತಮ್ಮಂ ವಿಚಿತ್ರವೀರ್ಯಂಗಾ ಮೂವರ್ಕನ್ನೆಯರಂ ಪಾಣಿ ಗ್ರಹಣಂಗೆಯ್ದಾಗಳೆಲ್ಲರಿಂ ಪಿರಿಯಾಕೆ ನಿನ್ನನಲ್ಲದೆ ಪೆರನೊಲ್ಲೆನೆಂದಿರ್ದೊಡೆ ಮತ್ತಿನಿರ್ವರುಮಂ ಮದುವೆಯಂ ಮಾಡಿ ಗಾಂಗೇಯನಂಬೆಯನಿಂತೆಂದಂ
1100
|
ಅತ್ತ ಸುರೇಶ್ವರಾವಸಥಮಿತ್ತ ಮಹೀತಳಮುತ್ತ ಪನ್ನಗೋ ದಾತ್ತ ಸಮಸ್ತ ಲೋಕಮಳದಂತಿರೆ ಪೂನಗಾಗದಂಗಜೋ ತ್ಪತ್ತಿ ಸುಖಕ್ಕೆ ಸೋಲಲಟೆಗುಂ ಪುರುಷವ್ರತಮಾಗಳಬ್ಬೆಯಂ | ದತ್ತಿಗೆಯೆಂಬ ಮಾತನನಗೇನೆನಲಕ್ಕು ಪಂಕಜಾನನೇ |
2.99
ಭೀಷ್ಮನು ಅವನಿಗುಚಿತವಾದ ಪರಲೋಕ (ಉತ್ತರ) ಕ್ರಿಯೆಗಳನ್ನು ಮಾಡಿ ತಾನು ಮೊದಲೇ ನುಡಿದ ಮಾತುಕಟ್ಟೆಂಬ ಅರಮನೆಗೆ ಅಸ್ತಿಭಾರವನ್ನು ಹಾಕುವ ಹಾಗೆ ಚಿತ್ರಾಂಗದನಿಗೆ ಪಟ್ಟವನ್ನು ಕಟ್ಟಿ ರಾಜ್ಯಭಾರ ಮಾಡಿಸುತ್ತಿದ್ದನು. ಅಷ್ಟರಲ್ಲಿ ಒಬ್ಬ ಗಂಧರ್ವನೊಡನೆ ಚಿತ್ರಾಂಗದನು ದ್ವಂದ್ವಯುದ್ಧವನ್ನುಂಟುಮಾಡಿಕೊಂಡು ಕುರುಕ್ಷೇತ್ರವನ್ನೇ ರಣಭೂಮಿಯನ್ನಾಗಿ ಮಾಡಿ ಕಾದಿ ಸತ್ತನು. ಭೀಷ್ಮನು ವಿಚಿತ್ರವೀರ್ಯನನ್ನು ರಾಜ್ಯಭಾರವನ್ನು ವಹಿಸಲು ಸಮರ್ಥನನ್ನಾಗಿ ಮಾಡಿ ೭೪. ಎಲ್ಲ ಕ್ಷತ್ರಿಯರಿಗೂ ಸಹಜವಾಗಿ ಆಶೆಯಿಂದ ತನ್ನ ಬಾಹುಬಲ ಪ್ರದರ್ಶನಕ್ಕಾಗಿ (ಜೈತ್ರಯಾತ್ರೆಗೆ)ಹೋಗಿ ಮೇಲೆ ಬಿದ್ದ ಕಾಶಿರಾಜನ ಮಕ್ಕಳಲ್ಲಿ ಕೆಲವರು ನೋಯುವ ಹಾಗೆ ತನ್ನ ಪ್ರಸಿದ್ಧವೂ ಭಯಂಕರವೂ ಆದ ಬಾಣದಿಂದ ಸೇನಾನಾಯಕರನ್ನೆಲ್ಲಾ ಬೀಳುವ ಹಾಗೆ ಮಾಡಿ ಅಂಬೆ ಅಂಬಿಕೆ ಅಂಬಾಲಿಕೆಯರೆಂಬ ಬಾಲಿಕೆಯರನ್ನು ಅಪಹರಿಸಿಕೊಂಡು ಬಂದನು. ಭೀಷ್ಮನು ಎಂತಹ ಕೀರ್ತಿಗೆ ಭಾಗಿಯೋ! ವ| ಹಾಗೆ ತಂದು ಆ ಮೂವರು ಕನೈಯರನ್ನೂ ತನ್ನ ತಮ್ಮನಾದ ವಿಚಿತ್ರವೀರ್ಯನಿಗೆ ಮದುವೆಮಾಡುವಾಗ ಅವರೆಲ್ಲರಲ್ಲಿಯೂ ಹಿರಿಯಳಾದವಳು ನಿನ್ನನ್ನಲ್ಲದೆ ಇತರರನ್ನು ನಾನು ಅಂಗೀಕರಿಸುವುದಿಲ್ಲ ಎಂದಳು. ಉಳಿದಿಬ್ಬರನ್ನೂ ಮದುವೆ ಮಾಡಿ ಭೀಷ್ಮನು ಅಂಬೆಗೆ ಹೀಗೆ ಹೇಳಿದನು-೭೫. ಆ ಕಡೆ ದೇವೇಂದ್ರನು ವಾಸಮಾಡುವ ಸ್ವರ್ಗಲೋಕ; ಈ ಕಡೆ ಭೂಲೋಕ ಮತ್ತೊಂದು ಕಡೆ ಪಾತಾಳಲೋಕವೇ ಮೊದಲಾದುವುಗಳು