________________
ಪ್ರಥಮಾಶ್ವಾಸಂ | ೮೯ ವ|| ಎಂದು ತನ್ನ ನಾಣಾಪನೆ ಬಗದತನು ಪರಿತಾಪಿತಶರೀರನುಮಾಗಿ ಶಂತನು ಕರಂಗೆರ್ದಗಿಡೆ ತದ್ವತ್ತಾಂತಮಲ್ಲಮಂ ಗಾಂಗೇಯನದುಉ ಎನ್ನಯ ದೂಸಂ ನೃಪತಿ ಬೇಡಿದುದಂ ಕುಡಲೊಲ್ಲಂದಂಗಳೋ
ತನ್ನ ವಿಮೋಹದಿಂದ ದಪಂ ಪತಿ ಸತ್ತಡ ಸತ್ತ ಪಾಪಮ್ | ನನ್ನರಕಂಗಳೊಳ್ ತಡೆಯದುಗುಮವುದು ರಾಜ್ಯಲಕ್ಷ್ಮಿ ಪೋ
ತನ್ನಯ ತಂದೆಯಂದುದನೆ ಕೊಟ್ಟು ವಿವಾಹಮನಿಂದ ಮಾಡುವಂ || ೭೨
ವ|| ಎಂದು ನಿಶ್ಚಯಿಸಿ ಗಾಂಗೇಯಂ ದಾಶರಾಜನಲ್ಲಿಗೆವಂದಾತನ ಮನದ ತೊಡರ್ಪಂ ಪಿಂಗ ನುಡಿದುಉ || ನೀಡಿರದೀವುದೀ ನಿಜ ತನೂಜೆಯನೀ ವಧುಗಾದ ಪುತ್ರರೊಳ್
ಕೂಡುಗೆ ರಾಜ್ಯಲಕ್ಷ್ಮಿ ಮೋಯಿನಗಂತದು ಪೆಂಡಿರೆಂಬರೊಲ್ | ಕೂಡುವನಲೈನಿಂದು ಮೊದಲಾಗಿರೆ ನಿಕ್ಕುವಮಂದು ರಾಗದಿಂ ಕೂಡಿದನುಯ್ದು ಸತ್ಯವತಿಯಂ ಸತಿಯಂ ಪತಿಯೊಳ್ ನದೀಸುತಂ || ೭೩
ವ|| ಅಂತು ಶಂತನುವುಂ ಸತ್ಯವತಿಯುಮನೋನ್ಯಾಸಕ್ತಚಿತ್ತರಾಗಿ ಕೆಲವು ಕಾಲಮಿರ್ಪನ್ನೆಗಮವರ ಬೇಟದ ಕಂದಳಂತ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳ ಪುಟ್ಟ ಮಹಾಪ್ರಚಂಡರುಂ ಪ್ರತಾಪಿಗಳುಮಾಗಿ ಬಳೆಯುತ್ತಿರ್ಪನ್ನೆಗಂ ಶಂತನು ಪರಲೋಕ
ಅತಿಶಯವಾದ ಯೋಗ್ಯತೆಯೂ ಮಾಸಿಹೋಗುವುದಿಲ್ಲವೇ? ವlಎಂದು ತನ್ನ ಮಾನಸಂರಕ್ಷಣೆಯನ್ನೆ ಯೋಚಿಸಿ ಕಾಮಸಂತಾಪದಿಂದ ಕೂಡಿದ ಶರೀರವುಳ್ಳವನಾಗಿ ಶಂತನು ಕರಗಿ ಎದೆಗೆಟ್ಟಿರಲು ಆ ವೃತ್ತಾಂತವೆಲ್ಲವನ್ನೂ ಭೀಷ್ಕನು ತಿಳಿದು ೭೨. ನನ್ನ ಕಾರಣದಿಂದ ರಾಜನೂ ನನ್ನ ಒಡೆಯನೂ ಆದ ಶಂತನುವು ಬೇಡಿದುದನ್ನು ಕೊಡಲಾರದ ಕಾಮದಿಂದುಂಟಾದ ದುಃಖದಿಂದ ಸಾಯುತ್ತಾನೆ. ಪತಿ ಸತ್ತರೆ ಸತ್ತ ಪಾಪವು ನನ್ನನ್ನು ತಡೆಯದೆ ನರಕದಲ್ಲಿ ಮುಳುಗಿಸುತ್ತದೆ. ಈ ರಾಜ್ಯಲಕ್ಷ್ಮಿ ಏನು ಮಹಾದೊಡ್ಡದು, ಹೋಗಲಿ; ಈ ದಿನವೇ ನನ್ನ ತಂದೆಯು ಹೇಳಿದುದನ್ನೇ ಕೊಟ್ಟು ಮದುವೆಯನ್ನು ಮಾಡಿಸುವೆನು. ವ|| ಎಂದು ನಿಶ್ಚಯಿಸಿ ಭೀಷ್ಮನು ದಾಶರಾಜನಲ್ಲಿಗೆ ಬಂದು ಆತನ ಮನಸ್ಸಿನ ಸಂದೇಹ ನಿವಾರಣೆಯಾಗುವ ಹಾಗೆ ಹೇಳಿ ೭೩. ಸಾವಕಾಶಮಾಡದೆ ನಿಮ್ಮ ಮಗಳನ್ನು (ಎನ್ನ ತಂದೆಯಾದ ಶಂತನುವಿಗೆ) ಕೊಡಿರಿ. ಈ ವಧುವಿಗೆ ಹುಟ್ಟಿದ ಮಕ್ಕಳಲ್ಲಿಯೇ ರಾಜ್ಯಲಕ್ಷಿಸೇರಲಿ. ಅದರ ಸಂಬಂಧ ನನಗಿಲ್ಲ: ಈ ದಿನ ಮೊದಲಾಗಿ ಹೆಂಗಸು ಎನ್ನುವವರಲ್ಲಿ ಕೂಡುವವನಲ್ಲ: ಇದು ನಿಶ್ಚಯ ಎಂದು ಆತ್ಮಸಂತೋಷದಿಂದ ಸತಿಯಾದ ಸತ್ಯವತಿಯನ್ನು ಕರೆದು ತಂದು ಪತಿಯಾದ ಶಂತನುವಿನಲ್ಲಿ ಭೀಷ್ಮನು ಕೂಡಿಸಿದನು ವ ಹಾಗೆ ಶಂತನುವೂ ಸತ್ಯವತಿಯೂ ಪರಸ್ಪರಾಸಕ್ತಮನಸ್ಸುಳ್ಳವರಾಗಿ ಕೆಲವು ಕಾಲವಿರುವಷ್ಟರಲ್ಲಿ ಅವರ ಪ್ರೇಮದ ಮೊಳಕೆ ಗಳ ಹಾಗೆ ಚಿತ್ರಾಂಗದ ವಿಚಿತ್ರವೀರ್ಯರೆಂಬ ಮಕ್ಕಳು ಹುಟ್ಟಿ ಮಹಾಪ್ರಚಂಡರೂ ಪ್ರತಾಪಶಾಲಿಗಳೂ ಆಗಿ ಬೆಳೆಯುತ್ತಿರಲು ಶಂತನುವು ಪರಲೋಕಪ್ರಾಪ್ತನಾದನು.