________________
೮೬ | ಪಂಪಭಾರತಂ
ವll ಅಂತು ಭುವನಕೆಲ್ಲಮಾಯಮುಮಳವುಮವುಮಣ್ಣುಂ ಪುಟ್ಟುವಂತೆ ಪುಟ್ಟ ನವವನಂ ನೆಹಿತೆಯ ನೆಲೆಯಶಾ || ಸಾಲಪ್ರಾಂಶು ವಿಶಾಲಲೋಲನಯನಂ ಪ್ರೋದ್ಯಷಸ್ಕಂಧನು
ನೀಲತಂಕಜವಕ್ತನಾಯತ ಸಮಗೋರಸ್ಥಳಂ ದೀರ್ಘ ಬಾ | ಹಾಲಂಬಂ ಭುಜವೀರ್ಯವಿಕ್ರಮಯುತಂ ಗಂಗಾತ್ಮಜಂ ಜಯ ಶ್ರೀಲೋಲಂ ಜಮದಗ್ನಿರಾಮಮುನಿಯೊಳ್ ಕಲ್ತಂ ಧನುರ್ವಿದ್ಯೆಯಂ || ೬೮ |
ವ|| ಅಂತು ಕಲ್ಕು ಮುನ್ನಮೆ ಚಾಪವಿದೈಯೊಳಾರಿಂದಮೂತನೆ ಭಾರ್ಗವನೆನಿಸಿದ ಭಾರ್ಗವಂಗೆ ತಾನೆ ಭಾರ್ಗವನಾಗಿ ಯುವರಾಜ ಕಂಠಿಕಾಪರಿಕಲಿತ ಕಂಠಲುಂಠನುಮಾಗಿ ಪ್ರಮಾಣನಿಜಭುಜದಂಡದಂಡಿತಾರಾತಿಮಂಡಲನುವಾಗಿ ಗಾಂಗೇಯಂ ಸುಖದೊಳರಸು ಗೆಯುತ್ತಿರ್ಪನ್ನೆಗಮಿತ್ತ ಗಂಗಾದೇಶದೊಳುಪರಿಚರವಸುವೆಂಬರಸಂ ಮುಕ್ಕಾವತಿಯೆಂಬ ತೋಣಿಯೊಳ್ ವಿಶ್ರಮಿಸಿರ್ದೊಡೆ ಕೋಳಾಹಳಮೆಂಬ ಪರ್ವತಕ್ಕೆ ಪುಟ್ಟದ ಗಿರಿಜೆಯೆಂಬ ಕನ್ನೆಯನಾತಂ ಕಂಡು ಕಟಂಗೊಂಡು ಮದುವೆಯಂ ನಿಂದೊಂದು ದಿವಸಮಿಂದ್ರನೋಲಗಕ್ಕೆ ಪೋಗಿ ಋತುಕಾಲಪ್ರಾಪ್ತಿಯಾಗಿರ್ದ ನಲ್ಲಳಲ್ಲಿಗೆ ಬರಲ್ ಪಡೆಯದಾಕೆಯಂ ನೆನೆದಿಂದ್ರಿಯ (ರಣೆಯಾದೊಡದನೊಂದು ಕದಳೀಪತ್ರದೊಳ್ ಪುದಿದು ತನ್ನ ನಡಪಿದ ಗಿಳಿಯ ಕೈಯೊಳೊಪಳಗಟ್ಟಿದೊಡದಂ ತರ್ಪರಗಿಳಿಯನೊಂದು ಗಿಡುಗಡೆಗೊಂಡು ಜಗುನೆಯಂ ಪಾಯಾಗಳುಗಿಬಗಿ ಮಾಡಿದಾಗಳದು ಕೈಯಿಂ ಬರ್ದು೦ಕಿ ತೊಳಿಯೊಳಗೆ ಬಿಡದನೊಂದು ಬಾಳೆಮಾನುಂಗಿ ಗರ್ಭಮಂ ತಾಳಿದೊಡೊಂದು ದಿವಸಮಾ ಮಾವನೊರ್ವ ಜಾಲಗಾಲಿಂ
೬೮. ಸಾಲವೃಕ್ಷದಂತೆ ಎತ್ತರವಾಗಿರುವವನೂ ವಿಸ್ತಾರವೂ ವಿಲಾಸದಿಂದ ಕೂಡಿ ದುದೂ ಆದ ಕಣ್ಣುಳ್ಳವನೂ ಗೂಳಿಯಂತೆ ಎತ್ತರವಾದ ಹೆಗಲುಳ್ಳವನೂ ಉದ್ದವಾದ ತೋಳುಗಳಿಗೆ ಅವಲಂಬನವಾದ ಬಾಹುವೀರ್ಯಪರಾಕ್ರಮವುಳ್ಳವನೂ ವಿಜಯ ಲಕ್ಷಿಯಲ್ಲಿ ಆಸಕ್ತನಾಗಿರುವವನೂ ಆದ ಭೀಷ್ಮನು ಪರಶುರಾಮನಲ್ಲಿ ಬಿಲ್ವಿದ್ಯೆಯನ್ನು ಕಲಿತನು. ವl ಹಾಗೆ ಕಲಿತು ಮೊದಲೇ ಬಿಲ್ವಿದ್ಯೆಯಲ್ಲಿ ಇವನೇ ಎಲ್ಲರಿಗಿಂತಲೂ ಉತ್ತಮನೆನಿಸಿಕೊಂಡ ಪರಶುರಾಮನಿಗೆ ತಾನೇ ಆಚಾರ್ಯನಾಗಿ ಯುವರಾಜಪದವಿಗೆ ಸೂಚಕವಾದ ಕತ್ತಿನ ಹಾರದಿಂದ ಕೂಡಿದ ಕೊರಳ ಚಲನೆಯುಳ್ಳವನೂ ತನ್ನ ನೀಳವೂ ದಪ್ಪವೂ ಆದ ಭುಜದಂಡದಿಂದ ಶಿಕ್ಷಿಸಲ್ಪಟ್ಟ ಶತ್ರುಸಮೂಹವುಳ್ಳವನೂ ಆಗಿ ಭೀಷ್ಮನು ರಾಜ್ಯಭಾರ ಮಾಡುತ್ತಿದ್ದನು. ಈ ಕಡೆ ಗಂಗಾದೇಶದಲ್ಲಿ ಉಪರಿಚರವಸುವೆಂಬುವನು ಮುಕ್ತಾವತಿಯೆಂಬ ನದಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಕೋಳಾಹಳಪರ್ವಕ್ಕೆ ಹುಟ್ಟಿದ ಗಿರಿಜೆಯೆಂಬ ಕನೈಯನ್ನು ಆತನು ನೋಡಿ, ನೋಡಿದ ಕೂಡಲೇ ದೇಹವಶನಾಗಿ ಪ್ರೀತಿಸಿ ಮದುವೆಯಾದನು. ಒಂದು ದಿವಸ ಆತನು ಇಂದ್ರನ ಸಭೆಗೆ ಹೋಗಿ ಋತುಕಾಲಪ್ರಾಪ್ತಿಯಾಗಿದ್ದ ತನ್ನ ಪ್ರಿಯಳಲ್ಲಿಗೆ ಬರಲು ಸಾಧ್ಯವಾಗದೆ ಅವಳನ್ನು ನೆನೆದು ರೇತಸ್ಕಲನವಾಗಲು ಅದನ್ನು ಒಂದು ಬಾಳೆಯ ಎಲೆಯಲ್ಲಿ ಸುತ್ತಿ ತಾನು ಸಾಕಿದ ಗಿಳಿಯ ಕಯ್ಯಲ್ಲಿ ಕಳುಹಿಸಿದನು. ಅದನ್ನು ತರುತ್ತಿದ್ದ ಅರಗಿಳಿಯನ್ನು ಒಂದು ಗಿಡುಗನು ಅಡ್ಡಗಟ್ಟಿ ಯಮುನಾನದಿಯನ್ನು ದಾಟುವಾಗ ಹಿಂಸೆ ಮಾಡಲು ಅದರ ಕಮ್ಮಿಂದ ಜಾರಿಕೊಂಡು ನೀರಿನಲ್ಲಿ ಬಿದ್ದಿತು. ಅದನ್ನು ಒಂದು ಬಾಳೆಮೀನು ನುಂಗಿ