________________
ಪ್ರಥಮಾಶ್ವಾಸಂ | ೮೫ ಭರತನನೇಕಾಧ್ವರ ಭರ ನಿರತಂ ಜಸಮುಚಿಯ ಕಟಿಯ ಭೂಪರ್ ಪಲರಾ | ದರಿಸಿದ ಧರಣೀಭರಮಂ ಧರಿಯಿಸಿದಂ ಪ್ರತಿಮನೆಂಬನಪ್ರತಿಮಬಲಂ || ಅಂತಾ ಪ್ರತಿಮಂಗೆ ಸುತರ್ ಶಂತನು ಬಾಹಿಕ ವಿನೂತ ದೇವಾಪಿಗಳೋ | ರಂತ ಧರೆ ಪೊಗಳ ನಗರ ನಂತ ಬಳ ಪರಬಳ ಪ್ರಭೇದನ ಶೌರ್ಯರ್ ||
೬೫ ವ|| ಅವರೊಳಗೆ ದೇವಾಪಿ ನವಯವನ ಪ್ರಾರಂಭದೊಳೆ ತಪಶ್ಚರಣ ಪರಾಯಣನಾದ , ಪ್ರತಿಮನುಂ ಪ್ರತಾಪಪ್ರಸರಪ್ರಕಟಪಟುವಾಗಿ ಪಲವುಕಾಲಮರಸುಗಯು ಸಂಸಾರಾಸಾರತಗೆ ದೇಸಿ ತಪೋವನಕ್ಕಭಿಮುಖನಾಗಲ್ಬಗೆದು
ಕಂತು ಶರ ಭವನನಾ ಪ್ರಿಯ ಕಾಂತಾ ಭೂವಿಭ್ರಮ ಗ್ರಹಾಗ್ರಹವಶದಿಂ | ಭ್ರಾಂತಿಸದುಪಶಾಂತಮನಂ ಶಂತನುಗಿತ್ತಂ ಸಮಸ್ತ ರಾಜ್ಯಶ್ರೀಯಂ | - ೬೬ ಶಂತನುಗಮಮಳ ಗಂಗಾ ಕಾಂತೆಗಮೆಂಟನೆಯ ವಸು ವಸಿಷ್ಠನ ಶಾಪ | ಭ್ರಾಂತಿಯೋಳಿ ಬಂದು ನಿರ್ಜಿತ
ಕಂತುವನಂತು ಹುಟ್ಟಿದ ಗಾಂಗೇಯಂ | ಪ್ರಖ್ಯಾತನಾದನು. ರಾಜರು ಹೀಗೆ ಪ್ರಸಿದ್ದರಾಗಬೇಕು. ೬೪. ಅನೇಕಯಜ್ಞಕಾರ್ಯ ಗಳಲ್ಲಿ ಆಸಕ್ತನಾದ ಭರತನು ಕೀರ್ತಿಶೇಷನಾಗಿ ಸಾಯಲು ಅನೇಕರಾಜರು ಪ್ರೀತಿಸಿದ ಭೂಭೂರವನ್ನು (ರಾಜ್ಯಭಾರವನ್ನು) ಅಪ್ರತಿಮಬಲನಾದ ಪ್ರತಿಮನೆಂಬುವನು ಧರಿಸಿದನು. ೬೫. ಹಾಗೆ ಆ ಪ್ರತಿಮನಿಗೆ ಕೊನೆಯಿಲ್ಲದ ಬಲವುಳ್ಳವರೂ ಶತ್ರುಸೈನ್ಯವನ್ನು ವಿಶೇಷವಾಗಿ ಭೇದಿಸುವ ಶೌರ್ಯವುಳ್ಳವರೂ ಆದ ಬಾಸ್ತಿಕ, ವಿನೂತ, ದೇವಾಪಿ ಗಳೆಂಬ ಮಕ್ಕಳು ಲೋಕವು ಏಕಪ್ರಕಾರವಾಗಿ ಹೊಗಳುವಂತೆ ಪ್ರಸಿದ್ಧರಾದರು. ವ|| ಅವರಲ್ಲಿ ದೇವಾಪಿಯು ಹೊಸದಾದ ಯವ್ವನಪ್ರಾರಂಭದಲ್ಲಿಯೇ ತಪಸ್ಸು ಮಾಡುವುದ ರಲ್ಲಿ ಆಸಕ್ತನಾದನು. ಪ್ರತಿಮನೂ ಕೂಡ ಪ್ರತಾಪವನ್ನು ಪ್ರಕಟಿಸುವುದರಲ್ಲಿ ಸಮರ್ಥ ನಾಗಿ ಅನೇಕಕಾಲ ರಾಜ್ಯಭಾರಮಾಡಿ ಸಂಸಾರದ ಅಸಾರತೆಗೆ ಅಸಹ್ಯಪಟ್ಟು ತಪೋ ವನಕ್ಕಭಿಮುಖನಾದನು ೬೬. ಮನ್ಮಥನ ಬಾಣಗಳಿಗೆ ವಾಸಸ್ಥಾನವಾದ ಬತ್ತಳಿಕೆಯ ಹಾಗಿದ್ದ ಆ ಪ್ರತಿಮನು ತನ್ನ ಪ್ರೀತಿಪಾತ್ರರಾದ ಸ್ತ್ರೀಯರ ಹುಬ್ಬಿನ ವಿಲಾಸವೆಂಬ ಗ್ರಹಕ್ಕೆ ವಶನಾಗಿ ಭ್ರಮಗೊಳ್ಳದೆ ಸಮಾಧಾನಚಿತ್ತನಾಗಿ ಸಮಸ್ತರಾಜ್ಯ ಸಂಪತ್ತನ್ನೂ ಶಂತನುವಿಗೆ ಕೊಟ್ಟನು. ೬೭. ಶಂತನುವಿಗೂ ಪರಿಶುದ್ಧಳಾದ ಗಂಗಾದೇವಿಗೂ ಎಂಟನೆಯ ವಸುವು ವಸಿಷ್ಠನ ಶಾಪದಿಂದ ರೂಪಿನಲ್ಲಿ ಮನ್ಮಥನನ್ನು ಸೋಲಿಸುವ ಸೌಂದರ್ಯದಿಂದ ಕೂಡಿ ಭೀಷ್ಮನಾಗಿ ಹುಟ್ಟಿದನು.