________________
೮೪ | ಪಂಪಭಾರತಂ
ವl ಅಂತು ಹಿರಣ್ಯಗರ್ಭ ಬ್ರಹ್ಮ ಮನಸ್ಸಂಭವದೊಳ್ ಪುಟ್ಟದವರ್ಮಕಳೊಳಗೆ ಮರೀಚಿಯ ಮಗ ಕಶ್ಯಪನನೇಕ ಭುವನೋತ್ಪತ್ತಿ ನಾಟಕಕ್ಕೆ ಸೂತ್ರಧಾರನಾದನಾತನ ಮಗನವಾರ್ಯವೀರ್ಯ೦ ಸೂರ್ಯನಾತನಿಂದವ್ಯವಚ್ಛವಾಗಿ ಬಂದ ವಂಶಂ ಸೂರ್ಯವಂಶಮಂಬುದಾಯ್ತು
ಕಂ | ಅತ್ರಿಯ ಪಿರಿಯ ಮಗಂ ಭುವ
ನತ್ರಯ ಸಂಗೀತ ಕೀರ್ತಿ ಸೋಮಂ ಸಕಲ | ಕೃತಕುಲಪೂಜ್ಯನಮಳ ಚ ರಿತ್ರಂ ಪೋದ್ದಾಮ ಸೋಮವಂಶಲಲಾಮಂ |
ಆ ಸೋಮವಂಶಜರ್ ಪಲ ರಾಸುಕರಂಬೆರಸು ನಗು ಜಸದಿಂ ಜಗಮಂ | ಬಾಸಣಿಸಿ ಪೋದೂಡಧಿಕ ವಿ ಳಾಸಂ ಪೌಷ್ಠಂತಿ ಭರತನೆಂಬಂ ನೆಗಟ್ಟಂ ||
ಚಾರುಚರಿತ್ರಂ ಭರತನ ಪಾರಗುಣಂ ತನ್ನ ಹೆಸರೊಳಮರ್ದಸೆಯ ಯಶೋ | ಭಾರಂ ಕುಲಮುಂ ಕಥೆಯು ಭಾರತಮನ ನೆಗಟ್ಟಿನಂತು ನೆಗಟ್ಟುದು ಭೂಪರ್ ||
ಶುದ್ಧ ವಾಕ್ಕುಳ್ಳ ಪುಲಹ, ಮರೀಚಿ, ಅತ್ರಿ, ಅಂಗಿರಸ್, ಪುಲಸ್ಯ ಮತ್ತು ಕ್ರತು ಎಂಬುವರು ಹುಟ್ಟಿದರು. ವ|| ಹಾಗೆ ಹಿರಣ್ಯಗರ್ಭ ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಆರುಜನ ಮಕ್ಕಳಲ್ಲಿ ಮರೀಚಿಯ ಮಗನಾದ ಕಶ್ಯಪನು ಅನೇಕಲೋಕಗಳ ಉತ್ಪತ್ತಿಯೆಂಬ ನಾಟಕಕ್ಕೆ ಸೂತ್ರಧಾರನಾದನು. ತಡೆಯಿಲ್ಲದ ಪರಾಕ್ರಮದಿಂದ ಕೂಡಿದವನು ಅವನ ಮಗ ಸೂರ್ಯನೆಂಬುವನು. ಆತನಿಂದ ಏಕಪ್ರಕಾರವಾಗಿ ನಡೆದುಬಂದ ವಂಶ ಸೂರ್ಯವಂಶವೆಂಬುದಾಯಿತು. ೬೧. ಮೂರು ಲೋಕದಲ್ಲಿಯೂ ಹಾಡಲ್ಪಟ್ಟ ಕೀರ್ತಿಯುಳ್ಳವನೂ ಸಮಸ್ತಕ್ಷತ್ರಿಯಸಮೂಹದಲ್ಲಿ ಪೂಜ್ಯನಾದವನೂ ಪರಿಶುದ್ಧವಾದ ನಡತೆಯುಳ್ಳವನೂ ಅತ್ಯತಿಶಯವಾದ ಸೋಮವಂಶ ಶ್ರೇಷ್ಠನೂ ಆದ ಸೋಮನೆಂಬುವನು ಅತ್ರಿಯ ಹಿರಿಯ ಮಗ. ೬೨. ಆ ಸೋಮವಂಶದಲ್ಲಿ ಹುಟ್ಟಿದ ಅನೇಕರು ಅತ್ಯತಿಶಯವೂ ಪ್ರಸಿದ್ಧವೂ ಆದ ಕೀರ್ತಿಯಿಂದ ಲೋಕವನ್ನೆಲ್ಲ ಮುಚ್ಚಿ ಮರಣ ಹೊಂದಲಾಗಿ ಅತ್ಯಂತವಿಳಾಸದಿಂದ ಕೂಡಿದ ದುಷ್ಯಂತನ ಮಗನಾದ ಭರತನೆಂಬುವನು ಪ್ರಸಿದ್ಧನಾದನು. ೬೩. ಸಚ್ಚರಿತ್ರನೂ, ಅಪಾರಗುಣಯುತನೂ ಯಶಸ್ಸಿನ ಭಾರದಿಂದ ಕೂಡಿದವನೂ ಆದ ಭರತನು ತನ್ನ ಕುಲವೂ ಕಥೆಯೂ ತನ್ನ ಹೆಸರಿನಲ್ಲಿ ಸೇರಿ ಭಾರತವೆಂದು ಪ್ರಸಿದ್ದಿಯಾಗುವ ಹಾಗೆ