________________
ಪ್ರಥಮಾಶ್ವಾಸಂ | ೮೭ ಜಾಲದೊಳ್ ಪಿಡಿದಲ್ಲಿಗರಸಪ್ಪ ದಾಶನಲ್ಲಿಗುಯ್ದು ತೋಟದೊಡದಂ ವಿದಾರಿಸಿ ನೋಟಿನ್ನೆಗಂ ಬಾಳೆಯ ಗರ್ಭದೊಳಿರ್ದ ಬಾಳೆಯಂ ಬಾಳನುಮಂ ಕಂಡೆತ್ತಿಕೊಂಡು ಮತ್ಸಗಂಧಿಯುಂ ಮತ್ಸ ಗಂಧನುಮಂದು ಹೆಸರನಿಟ್ಟು ನಡಪಿ ಯಮುನಾನದೀತೀರದೊಳಿರ್ಪನ್ನೆಗಮಲ್ಲಿಗೊರ್ಮ ಬ್ರಹರ ಮೊಮ್ಮನಪ್ಪ ವೃದ್ಧ ಪರಾಶರ ಮುನೀಂದ್ರನುತ್ತರಾಪಥಕ್ಕೆ ಪೋಗುತ್ತುಂ ಬಂದು ತೊಜಿಯ ತಡಿಯೊಳೊಡಮಂ ನಡೆಯಿಸುವ ಮತ್ಸ ಗಂಧಿಯಂ ಕಂಡೆಮ್ಮನೀ ತೋಯಂ ಪಾಯಿಸೆಂಬುದುಂ ಸಾಸಿರ್ವರೇಣಿದೂಡಲ್ಲದೀಯೊಡಂ ನಡೆಯದೆಂಬುದುಮಾಮನಿಬರ ಬಣ್ಣುಮಪ್ಪ ಮೇಸೆಂದೂಡಂತೆ ಗೆಯ್ಯನೆಂದೋಡಮೇಳೆಸಿ ನಡೆಯಿಸುವಲ್ಲಿ ದಿವ್ಯಕನೈಯನರ್ತು ನೋಡಿಮ|| ಮನದೊಳ್ ಸೋಲ್ಕು ಮುನೀಂದ್ರನಾಕೆಯೊಡಲೀ ದುರ್ಗಂಧವೋಪಂತ ಯೋ
ಜನ ಗಂಧಿತ್ವಮನಿತ್ತು ಕಾಂಡಪಟದಂತಿರ್ಪನ್ನೆಗಂ ಮಾಡಿ ಮಂ | ಜನಲಂಪಣನೀಯ ಕೂಡುವೆಡೆಯೊಳ್ ಜ್ಞಾನಸ್ವರೂಪಂ ಮಹಾ ಮುನಿಪಂ ಪುಟ್ಟಿದನಂತು ದಿವ್ಯಮುನಿಗಳ್ಗೆಯೊಡಂ ತೀರದೇ || ೬೯
ವ|| ಅಂತು ನೀಲಾಂಬುದ ಶ್ಯಾಮನುಂ ಕನಕ ಪಿಂಗಳ ಜಟಾಬಂಧಕಳಾಪನುಂ ದಂಡ[ಕಪಾಳಹಸ್ತನುಂ ಕೃಷ್ಣಮೃಗತ್ವಕ್ಷ]ರಿಧಾನನುಮಾಗೆ ವ್ಯಾಸಭಟ್ಟಾರಕಂ ಪುಟ್ಟುವುದು ಮಾತನನೊಡಗೊಂಡು ಸತ್ಯವತಿಗೆ ಪುನಃ ಕನ್ಯಾಭಾವಮಂ ದಯೆಗೆಯ್ದು ಪರಾಶರಂ ಪೋದನಿತ್ತಲ್
ಗರ್ಭವನ್ನು ಧರಿಸಿತು. ಅದನ್ನು ಒಬ್ಬ ಬೆಸ್ತರವನು ಬಲೆಯಲ್ಲಿ ಹಿಡಿದು ಅಲ್ಲಿಯ ರಾಜನಲ್ಲಿಗೆ ತೆಗೆದುಕೊಂಡುಹೋಗಿ ತೋರಿದನು. ಅವನು ಅದನ್ನು ಸೀಳಿ ನೋಡಿ ಮೀನಿನ ಗರ್ಭದಲ್ಲಿದ್ದ ಬಾಲೆಯನ್ನೂ ಬಾಲಕನನ್ನೂ ಕಂಡು ಎತ್ತಿಕೊಂಡು ಮತ್ಯಗಂಧಿ ಮತ್ಯಗಂಧನೆಂಬ ಹೆಸರನ್ನಿಟ್ಟು ಸಲಹಿ ಯಮುನಾತೀರದಲ್ಲಿರುತ್ತಿದ್ದನು. ಅಲ್ಲಿಗೆ ಒಂದು ಸಲ ಬ್ರಹ್ಮನ ಮೊಮ್ಮಗನಾದ ವೃದ್ಧಪರಾಶರನೆಂಬ ಋಷಿಯು ಉತ್ತರದೇಶಕ್ಕೆ ಹೋಗುತ್ತ ಒಂದು ನದಿಯ ದಡದಲ್ಲಿ ದೋಣಿಯನ್ನು ನಡೆಸುತ್ತಿದ್ದ ಮತ್ಯಗಂಧಿಯನ್ನು ನೋಡಿ ನೀನು ನಮ್ಮನ್ನು ಈ ನದಿಯನ್ನು ದಾಟಿಸು ಎಂದು ಕೇಳಿದನು. ಅದಕ್ಕೆ ಆ ಕನೈಯು ಸಾವಿರ ಜನರು ಹತ್ತದ ಹೊರತು ಈ ದೋಣಿಯು ನಡೆಯುವುದಿಲ್ಲ ಎಂದಳು. ಋಷಿಯು ನಾವು ಅಷ್ಟು ಜನರ ಭಾರವಾಗುತ್ತೇವೆ ಏರಿಸು ಎಂದನು. ಹಾಗೆಯೇ ಮಾಡುತ್ತೇನೆ ಎಂದು ಹತ್ತಿಸಿಕೊಂಡು ನಡೆಸುತ್ತಿರುವಾಗ ಆ ದಿವ್ಯಕಸ್ಯೆಯನ್ನು ಪ್ರೀತಿಸಿ ನೋಡಿ -೬೯. ಆ ಋಷಿಶ್ರೇಷ್ಠನು ಮನಸ್ಸಿನಲ್ಲಿ ಆಕೆಗೆ ಸೋತು ಆಕೆಯ ಶರೀರದ ಆ ದುರ್ವಾಸನೆಯು ಹೋಗುವ ಹಾಗೆ ಯೋಜನದೂರದವರೆಗೆ ವ್ಯಾಪಿಸುವ ಸುವಾಸನೆಯನ್ನು ಕೊಟ್ಟು ಮಂಜನ್ನೇ ತೆರೆಯನ್ನಾಗಿ ಮಾಡಿ ಪ್ರೀತಿಯಿಂದ ಅವಳೊಡನೆ ಕೂಡಲು ಜ್ಞಾನಸ್ವರೂಪನಾದ ಋಷಿಶ್ರೇಷ್ಠನು ಹುಟ್ಟಿದನು. ಮುನೀಂದ್ರರಾದವರು ಏನು ಮಾಡಿದರೂ ತಡೆಯುತ್ತದೆಯಲ್ಲವೆ? ವ ಹಾಗೆ ಕರಿಯ ಮೋಡದಂತೆ ಕರಗಿರುವವನೂ ಹಳದಿ ಮತ್ತು ಕೆಂಪುಮಿಶ್ರವಾದ ಬಣ್ಣದ ಜಟೆಯ ಸಮೂಹವುಳ್ಳವನೂ ಕಯ್ಯಲ್ಲಿ ಯೋಗದಂಡ ಭಿಕ್ಷಾಪಾತ್ರೆಗಳನ್ನು ಧರಿಸಿರುವವನೂ ಕೃಷ್ಣಾಜಿನದ ಹೊದಿಕೆಯುಳ್ಳವನೂ ಆಗಿ ಪೂಜ್ಯನಾದ