________________
ಪ್ರಥಮಾಶ್ವಾಸಂ | ೮೧ ಬೆಳೆದಂಗಿರ್ದ ಕೆಲನೆ ಕೆಲ್ಯೂಲನಂ ಬಳಸಿರ್ದ ಪೂತ ಪೂ ಗೋಳಗಳ ಪೂತ ಪೂಗೊಳಗಳಂ ಬಳಸಿರ್ದ ವಿಚಿತ್ರ ನಂದನಾ | ವಳಿಗಳೆ ನಂದನಾವಳಿಗಳಂ ಬಳಸಿರ್ದ ಮದಾಳಿ ಸಂಕುಲಂ
ಗಳೆ ವಿಷಯಾಂಗನಾಲುಳಿತ ಕುಂತಳದಂತವೊಲೊಪ್ಪಿ ತೋಜುಗುಂ ೫೩ ಚಂ || ಲಳಿತ ವಿಚಿತ್ರ ಪತ್ರ ಫಲ ಪುಷ್ಟಯುತಾಟವಿ ಸೊರ್ಕಿದಾನೆಯಂ
ಚಳವುದು ದೇವಮಾತೃಕಮೆನಿಪ್ಪ ಪೊಲಂ ನವಗಂಧಶಾಳಿಯಂ | ಬೆಳೆವುದು ರಮ್ಮ ನಂದನ ವನಾಳಿ ವಿಯೋಗಿಜನಕ್ಕೆ ಬೇಟಮಂ
ಬಳೆವುದು ನಾಡ ಕಾಡ ಬೆಳಸಿಂಬೆಳಸಾ ವಿಷಯಾಂತರಾಳದೊಳ್ || ೫೪ ಕ೦ll, ಆವಲರುಂ ಪಣುಂ ಬೀ
ತೋವವು ಗಡ ಬೀಯವಲ್ಲಿ ಮಲ್ಲಿಗೆಗಳುಮಿ | - ಮಾವುಗಳುಮಂದೂಡಿನ್ ಪಟ ತಾವುದು ಸಂಸಾರ ಸಾರಸರ್ವಸ್ವ ಫಲಂ || ಮಿಡಿದೂಡ ತನಿಗರ್ವು ರಸಂ ಬಿಡುವುವು ಬರಿದೂಂದು ಮುಗುಳ ಕಂಪಿಳಿ ಮೊಗಂ | ಗಿಡುವುವು ತುಂಬಿಗಳುಮೆ ವಡುವುವು ಕುಡಿದೊಂದು ಸಣ್ಣ ರಸದೊಳೆ ಗಿಳಿಗಳ್ || ೫೬
೫೫
ಸಂಪದ್ಭರಿತವಾಗಿದೆ ಎಂದು ಭಾವ. ೫೩. (ಆ ದೇಶದಲ್ಲಿ ಎಲ್ಲಿ ನೋಡಿದರೂ) ಬೆಳೆದ ತೆನೆಯ ಭಾರದಿಂದ ಬಾಗಿರುವ ಗದ್ದೆಗಳೇ, ಆ ಗದ್ದೆಗಳನ್ನು ಬಳಸಿಕೊಂಡಿರುವ ಹೂವಿನಿಂದ ಕೂಡಿರುವ ಕೊಳಗಳೇ, ಆ ಹೂಗೋಳಗಳ ಸುತ್ತಲಿರುವ ವಿಚಿತ್ರವಾದ ತೋಟದ ಸಮೂಹಗಳೇ. ಆ ತೋಟವನ್ನು ಆವರಿಸಿಕೊಂಡಿರುವ ಮದಿಸಿದ ದುಂಬಿಗಳ ಗುಂಪುಗಳ ಆ ದೇಶವೆಂಬ ಸ್ತ್ರೀಯ ವಕ್ರವಾದ ಮುಂಗುರುಳಿನಂತೆ ಕಾಣುತ್ತದೆ. ೫೪. ಆ ನಾಡಿನ ಒಳಭಾಗದಲ್ಲಿ ಸುಂದರವೂ ವಿವಿಧವೂ ಆದ ಎಲೆ ಹಣ್ಣು ಹೂವುಗಳಿಂದ ಕೂಡಿದ ಕಾಡು ಮದ್ದಾನೆಗಳನ್ನು ಬೆಳೆಸುತ್ತದೆ. ಮಳೆಯಿಂದಲೇ ಬೆಳೆಯುವ ಹೊಲಗಳು ಸುವಾಸನಾಯುಕ್ತವಾದ ಬತ್ತವನ್ನು ಬೆಳೆಸುತ್ತವೆ. ರಮ್ಯವಾದ ತೋಟದ ಸಾಲುಗಳು ವಿರಹಿಗಳಿಗೆ ಪ್ರೀತಿಯನ್ನು ಹೆಚ್ಚಿಸುತ್ತವೆ. ಆ ದೇಶದ ನಾಡಿನಲ್ಲಿಯೂ ಕಾಡಿನಲ್ಲಿಯೂ ಬೆಳೆಯುವ ಬೆಳಸು ಇನಿದಾದ ಬೆಳಸಾಗಿವೆ. ೫೫. (ಅಲ್ಲಿಯ) ಹೂವು ಹಣ್ಣು ಮಲ್ಲಿಗೆಗಳೂ ರಸಯುಕ್ತವಾದ ಮಾವುಗಳೂ ಎಂದೂ ಮುಗಿದುಹೋಗವು ಎಂದಮೇಲೆ ಸಂಸಾರಸಾರ ಸರ್ವಸ್ವಫಲ ಬೇರೆ ಯಾವುದಿದೆ? ೫೬, ಆ ನಾಡಿನ ರಸಯುಕ್ತವಾದ ಕಬ್ಬು ಬೆರಳಿನಿಂದ ಮಿಡಿದರೇ ರಸವನ್ನು ಚೆಲ್ಲುತ್ತದೆ. ದುಂಬಿಗಳು ಅರಳಿದ ಒಂದು ಹೂವಿನ ವಾಸನೆಯಿಂದಲೇ ತೃಪ್ತಿಹೊಂದಿ ಮುಖವನ್ನು ತಿರುಗಿಸುವುವು. ಗಿಳಿಗಳು ಒಂದು ಹಣ್ಣಿನ ರಸವನ್ನು ಕುಡಿಯುವುದರಿಂದಲೇ ಅಜೀರ್ಣವನ್ನು ಹೊಂದುವುವು. ಅಂದರೆ ಅಲ್ಲಿಯ ಕಬ್ಬು, ಹೂವು, ಹಣ್ಣು ರಸಯುಕ್ತವಾಗಿವೆ.