________________
೮೨) ಪಂಪಭಾರತಂ
ಸುತ್ತಿಗೆದ ರಸದ ತೋಳಿಗಳೆ ಮುತ್ತಿನ ಮಾಣಿಕದ ಪಲವುಮಾಗರಮೆ ಮದೋ ! ನತ್ರ ಮದಕರಿ ವನಂಗಳ ಸುತ್ತಲುಮಾ ನೆಲದ ಸಿರಿಯನೇನಂ ಪೊಗಂ || -
೫೭
ವ|| ಅಂತು ಸೊಗಯಿಸುವ ಕುರುಜಾಂಗಣ ವಿಷಯಕ್ಕೆ ರಾಜದ್ರಾಜಧಾನಿಯಾಗಿರ್ದು ಹರಜಟಾಜೂಟಕ್ಕೆ ಚಂದ್ರಲೇಖೆಯಿರ್ಪಂತೆ ದಿಕ್ಕರಿಕಟತಟಕ್ಕೆ ಮದಲೇಖೆಯಿರ್ಪಂತ ಕೈಟಭಾರಾತಿಯ ವಿಶಾಲೊರಸ್ಥಳಕ್ಕೆ ಕೌಸ್ತುಭಮಿರ್ಪಂತೆ ಸೊಗಯಿಸುತಿರ್ದುದು ಹಸ್ತಿನಪುರವೆಂಬುದು ಪೊಬಿಲಲ್ಲಿ
ರಗಳೆ || ಅದರ ಪೊವೊಲೀಲ ವಿಶಾಳ ಕನಕ ಕೃತಕ ಗಿರಿಗಳಿಂ ಫಳಪ್ರಕೀರ್ಣತರುಗಳಿಂ
ನನೆಯ ಕೊನೆಯ ತಳಿರ ಮುಗುಳ ವನಲತಾನಿಕುಂಜದಿಂ ಪ್ರಸೂನ ರಜದ ಪುಂಜದಿಂ ಗಗನತಳಮೆ ಪಳೆದು ಬಿಟ್ಟುದೆನಿಪ ಬಹುತಟಾಕದಿಂ ಕುಕಿ ನಲಿವ ಕೋಕದಿಂ ಸುರಿವ ಸುರಯಿಯರಲ ಮುಗುಳೆ ಮೊಗಸಿದಳಿಕುಳಂಗಳಿಂ ತೊದಲ್ನ ಶಿಶು ಶುಕಂಗಳಿಂ ತೆಗೆಯ ಬೀರರವದ ಮೇಲೆ ಪರಿವ ಮದಗಜಗಳಿಂ ಚಳತ್ತುರಂಗಮಂಗಳಿಂ ಲವಣ ಜಳಧಿ ಬಳಸಿದಂತೆ ಬಳಸಿದಗದ ನೀಳದಿಂದುದಗ್ರ ಕನಕಶಾಳದಿಂ
೫೭. ಆ ನಾಡಿನ ಸುತ್ತಲೂ ಸಿದ್ದರಸದ ಮಡುಗಳೇ, ಮುತ್ತುರತ್ನಗಳಿಂದ ಮಾಡಿದ ಮನೆಗಳೇ, ಮದ್ದಾನೆಗಳಿಂದ ಕೂಡಿದ ಕಾಡುಗಳೇ, ಆ ನೆಲದ ಸಂಪತ್ತನ್ನು ಏನೆಂದು ಹೊಗಳಲಿ. ವ|| ಹಾಗೆ ಸೊಗಯಿಸುತ್ತಿರುವ ಕುರುಜಾಂಗಣದೇಶಕ್ಕೆ ಪ್ರಕಾಶಮಾನವಾದ ರಾಜಧಾನಿ ಹಸ್ತಿನಾಪುರ. ಅದು ಈಶ್ವರನ ಜಟೆಯ ಸಮೂಹಕ್ಕೆ ಚಂದ್ರಲೇಖೆಯ ಹಾಗೆಯೂ ದಿಗ್ಗಜಗಳ ಗಂಡಸ್ಥಲಕ್ಕೆ ಮದಲೇಖೆಯ ಹಾಗೆಯೂ ವಿಷ್ಣುವಿನ ವಿಶಾಲವಾದ ವಕ್ಷಸ್ಥಳಕ್ಕೆ ಕೌಸ್ತುಭಮಣಿಯ ಹಾಗೆಯೂ ಸೊಗಯಿಸುತ್ತಿದೆ. ಆ ಪಟ್ಟಣದಲ್ಲಿ ೫೮. ಆ ಪಟ್ಟಣದ ಹೊರಭಾಗದಲ್ಲಿರುವ ಚಿನ್ನದಿಂದ ಮಾಡಿದ ಕೃತಕಪರ್ವತಗಳಿಂದಲೂ ಹಣ್ಣುಗಳಿಂದಲೂ ತುಂಬಿರುವ ಗಿಡಗಳಿಂದಲೂ ಹೂವು, ಕುಡಿ, ಚಿಗುರು, ಮೊಗ್ಗುಗಳಿಂದ ಕೂಡಿದ ತೋಟದ ಬಳ್ಳಿಮಾಡಗಳಿಂದಲೂ ಹೂವಿನ ಪರಾಗದ ರಾಶಿಗಳಿಂದಲೂ ಆಕಾಶಪ್ರದೇಶವೇ ಹರಿದು ಕೆಳಗೆ ಬಿದ್ದಿದೆ ಎನ್ನಿಸಿಕೊಳ್ಳುವ ವಿಶೇಷವಾದ ಸರೋವರಗಳಿಂದಲೂ ಶಬ್ದಮಾಡುತ್ತಿರುವ ಕೋಗಿಲೆಗಳಿಂದಲೂ ತಾನಾಗಿ ಸುರಿಯುತ್ತಿರುವ ಸುರಗಿಯ ಹೂವಿನ ಮೊಗ್ಗುಗಳಿಗೆ ಮುತ್ತಿಕೊಂಡಿರುವ ದುಂಬಿಯ ಸಮೂಹದಿಂದಲೂ ತೊದಲುಮಾತನಾಡುತ್ತಿರುವ ಗಿಳಿಯ ಮರಿಗಳಿಂದಲೂ ವೀರಶಬ್ದಗಳಿಂದ ಮುನ್ನಡೆಸಲು ಮುಂದಕ್ಕೆ ನುಗ್ಗುತ್ತಿರುವ ಮದ್ದಾನೆಗಳಿಂದಲೂ ಚಲಿಸುತ್ತಿರುವ ಕುದುರೆಗಳಿಂದಲೂ ಲವಣಸಮುದ್ರವೇ ಬಳಸಿಕೊಂಡಂತೆ ಸುತ್ತುವರಿದಿರುವ ಕಂದಕಗಳ ಹರವಿನಿಂದಲೂ, ಎತ್ತರವಾದ ಚಿನ್ನದ ಗೋಡೆಯಿಂದಲೂ ಒಳಭಾಗದಲ್ಲಿ