________________
೮೦) ಪಂಪಭಾರತ ಮliz|ಎನೆ ಸಂದುಂ ವೀರವೈರಿಕ್ಷಿತಿಪಗಜಘಟಾಟೋಪಕುಂಭಸ್ಥಳೀಭೇ
ದನನುಗೋದ್ರಾಸಿ ಭಾಸ್ಕದ್ದುಜಪರಿಘನನಾರೂಢಸರ್ವಜ್ಞನಂ ವೈ | ರಿ ನರೇಂದ್ರೋದ್ಧಾಮ ದರ್ಪೊದ್ದಳನನನ ಕಥಾನಾಯಕಂ ಮಾಡಿ ಸಂದ ರ್ಜುನನೊಳ್ ಪೋಲೀ ಕಥಾಭಿತ್ತಿಯನನುನಯದಿಂ ಪೇಬಲೆಂದುಕೊಂಡಂll
೫೧
ವ ಅದೆಂತನೆ-ಸಮುನಿಷ ರತ್ನಮಾಲಾ ಪ್ರಭಾಭೀಲಾರುಣ ಜಲಪ್ತವಾವಿಳ ವಿಳೋಳವೀHರಯ ಪ್ರದಾರಿತ ಕುಳಾಚಲೋದಧಿಪರೀತವಾಗಿರ್ದ ಜಂಬೂದ್ವೀಪ ದೂಳಗುಂಟು ನಾಡು ಕುರುಜಾಂಗಣನಾಮದಿಂ ಅಂತಾ ಕುರುಜಾಂಗಣ ವಿಷಯದೊಳ್
ಚಂ || ಜಲಜಲನೊಲ್ಕುತಿರ್ಪ ಪರಿಕಾಲ ಪರಿಕಾಲೊಳಳುರ್ಕಗೊಂಡ ನೈ
ದಿಲ ಪೊಸವೂ ಪೊದು ಪೊಸ ನೈದಿಲ ಕಂಪನೆ ಬೀಟಿ ಕಾಯ ಕಂ | ಗೊಲೆಯೊಳೆ ಜೋಲ್ವ ಶಾಳಿ ನವಶಾಳಿಗೆ ಪಾಯ್ಸ ಶುಕಾಳಿ ತೋಜ ಕೆ ಝೂಲಗಳಿನೊಪ್ಪಿ ತೋಟಿ ಸಿರಿ ನೋಡುಗುಮಾ ವಿಷಯಾಂತರಾಳದೊಳ್ ||
ದಾನಗುಣದಲ್ಲಿಯೂ ಅವನಲ್ಲಿ ಸಹಜವಾಗಿರುವ ವೀರ್ಯಗುಣದಲ್ಲಿಯೂ ಗುಣಾರ್ಣವ ಬಿರುದಾಂಕಿತನಾದ ಅರಿಕೇಸರಿಯು ನಾಲ್ಕು ಬೆರಳಷ್ಟು ಮೇಲಾಗಿದ್ದಾನೆ. ೫೧. ಎಂದು ಪ್ರಸಿದ್ಧನಾದವನೂ ಶತ್ರುರಾಜರ ಆನೆಗಳ ಸಮೂಹದ ಬಲಿಷ್ಟವಾದ ಕುಂಭಸ್ಥಳವನ್ನು ಸೀಳುವವನೂ ಭಯಂಕರವೂ ಬಲಿಷ್ಠವೂ ಆದ ಕತ್ತಿಯಿಂದ ಪ್ರಕಾಶಮಾನವಾದ ತೋಳೆಂಬ ಪರಿಘಾಯುಧವುಳ್ಳವನೂ ಆರೂಢಸರ್ವಜ್ಞನೆಂಬ ಬಿರುದುಳ್ಳವನೂ ವೈರಿರಾಜರ ವಿಶೇಷವಾದ ಅಹಂಕಾರವನ್ನು ಅಡಗಿಸುವವನೂ ಆದ ಅರಿಕೇಸರಿಯನ್ನೇ ಈ ಕತೆಗೆ ನಾಯಕನನ್ನಾಗಿ ಮಾಡಿ ಪ್ರಸಿದ್ಧನಾದ ಅರ್ಜುನನೊಡನೆ ಹೋಲಿಸುವ ಈ ಕಥಾಚಿತ್ರವನ್ನು ಹೇಳಬೇಕೆಂದು ಪ್ರೀತಿಯಿಂದ ಅಂಗೀಕಾರ ಮಾಡಿದ್ದೇನೆ. ವು ಅದು ಹೇಗೆಂದರೆ ವಿಶೇಷವಾಗಿ ಪ್ರಕಾಶಿಸುತ್ತಿರುವ ವಿಧವಿಧವಾದ ರತ್ನಗಳ ಕಾಂತಿಯಿಂದ ಭೇದಿಸಲ್ಪಟ್ಟ ಕೆಂಪುನೀರಿನಿಂದ ಕಲುಷಿತವೂ ಚಂಚಲವೂ ಆದ ಅಲೆಗಳ ವೇಗದಿಂದ ಸೀಳಲ್ಪಟ್ಟ ಕುಲಪರ್ವತಗಳನ್ನುಳ್ಳ, ಸಮುದ್ರದಿಂದ ಆವೃತವೂ ಆದ ಜಂಬೂದ್ವೀಪದಲ್ಲಿ ಕುರುಜಾಂಗಣವೆಂಬ ಹೆಸರಿನಿಂದ ಕೂಡಿದ ನಾಡೊಂದುಂಟು. ಹಾಗಿರುವಾಗ ಕುರುಜಾಂಗಣ ದೇಶದಲ್ಲಿ ೫೨. ಜಲಜಲ ಎಂದು ಶಬ್ದ ಮಾಡುತ್ತ ಪ್ರವಾಹವಾಗಿ ಹರಿಯುವ ಕಾಲುವೆಗಳು, ಆ ಕಾಲುವೆಗಳಲ್ಲಿ ಹರಡಿಕೊಂಡಿರುವ ಹೊಸದಾದ ನೆಯ್ದಿಲೆಯ ಹೂವು, ಸುತ್ತಲೂ ವ್ಯಾಪಿಸಿರುವ ಹೊಸನೆಯ್ದಿಲ ಹೂವಿನ ಸುಗಂಧವನ್ನು ಸೂಸಿ ಫಲ ಬಿಟ್ಟಿರುವ ಕೆಂಪುಗೊಂಚಲಿನ ಜೋತುಬಿದ್ದಿರುವ ಬತ್ತ, ಆ ಹೊಸ ಬತ್ತಕ್ಕೆ ಹಾಯ್ದು ಬರುವ ಗಿಣಿಗಳ ಗುಂಪು - ಇವು ಕಾಣುತ್ತಿರಲು ಆ ಗದ್ದೆಗಳಿಂದ ಮನೋಹರವಾಗಿ ತೋರುವ ಆ ದೇಶದಲ್ಲಿ ಲಕ್ಷ್ಮೀದೇವಿಯು ಸದಾ ನಲಿದಾಡುತ್ತಿದ್ದಾಳೆ. ಅಂದರೆ ಆ ಭಾಗವು ಸದಾ