________________
. ಪ್ರಥಮಾಶ್ವಾಸಂ | ೭೯ ಮೇಲೆಲ್ಲ ಬಲಂ ಕೋಟಿಗೆ ಮೇಲಷ್ಟೊಡಮನವನಿತೆ ನೆಗಟ್ಯೂರ್ವಗಂ | ಮೇಲಿಡಮಕ್ಕೆಂದುಂ ಸೋಲವು ಕಣ್ ಪರಬಲಾಬ್ಬಿಗಂ ಪರವಧುಗಂ ||
೪೭', ಧುರದೊಳ್ ಮೂಜುಂ ಲೋಕಂ ನೆರೆದಿರೆಯುಂ ಕುಡುವ ಪೊಜಕೊಳ್ ಮೇರುವೆ ಮುಂ | ದಿರೆಯುಂ ಬೀರದ ಬಿಯದಂ ತರಕ್ಕೆ ಕಿಳದೆಂದು ಚಿಂತಿಪಂ ಪ್ರಿಯಗಳಂ | ಸಮನೆನಿಸುವರ್ ಪ್ರಶಸ್ತಿ ಕ್ರಮದೊಳ್ ಸ್ವಸ್ತಿ ಸಮಧಿಗತ ಪಂಚಮಹಾ ಶ |
ಮಹಾ ಸಾಮಂತರೆನಲ್ ಸಮನೆನಿಪರೆ ಗುಣದೊಳರಿಗನೊಳ್ ಸಾಮಂತರ್' 10 ಚಾಗದ ಕಂಬಮಂ ನಿಲಿಸಿ ಬೀರದ ಶಾಸನಮಂ ನೆಗಟ್ಟಿ ಕೋ ಜೋಗದ ಮಂಡಲಂಗಳನೆ ಕೊಂಡು ಜಔತಯಂಗಳೊಳ್ ಜಸ | ಕ್ಯಾಗರಮಾದ ಬದ್ದೆಗನಿನಾ ನರಸಿಂಹನಿನತ್ತ ನಾಲ್ವೆರಲ್ ಮಗು ಪೋದು ಚಾಗದೂಳಮೊಂದಿದ ಬೀರದೂಳಂ ಗುಣಾರ್ಣವಂ ||
೫೦
ನಿಂದಲೂ ಹಟಸ್ವಭಾವದಿಂದ ಕೂಡಿ ಶತ್ರುಸೈನ್ಯಗಳನ್ನೆಲ್ಲ ಕೆಳಗುರುಳುವ ಹಾಗೆ ಮಾಡಿ ಶತ್ರುಸೇನೆಯ ರಕ್ತಸಮುದ್ರದ ಮಧ್ಯದಲ್ಲಿರುವ ಜಿಗುಳೆಯು ಬೆಳೆಯುವ ಹಾಗೆ ಬೆಳೆದನು. ೪೭. ತನ್ನ ಮೇಲೆ ದಂಡೆತ್ತಿ ಬಂದ ಸೈನ್ಯವು ಕೋಟಿಸಂಖ್ಯೆಯನ್ನು ಮೀರಿದ್ದರೂ ಪರಸ್ತ್ರೀಯು ಪ್ರಸಿದ್ದರೂಪವತಿಯಾದ ಊರ್ವಶಿಯನ್ನು ಮೀರಿದ್ದರೂ ಅವನ ಕಣ್ಣು ಮಾತ್ರ ಯಾವಾಗಲೂ ಶತ್ರುಸೇನಾಸಮುದ್ರಕ್ಕೂ ಪರವನಿತೆಗೂ ಸೋಲುವುದಿಲ್ಲ. ೪೮. ಪ್ರಿಯಗಳ್ಳನೆಂಬ ಬಿರುದಾಂಕಿತನಾದ ಆ ಅರಿಕೇಸರಿಯು ಯುದ್ದದಲ್ಲಿ ತನಗೆ ಮೂರುಲೋಕವೂ ಒಟ್ಟುಗೂಡಿ ಎಂದು ಎದುರಿಸಿದರೂ ಅದು ತನ್ನ ಪರಾಕ್ರಮದ ವ್ಯಾಪ್ತಿಗೆ ಕಿರಿದೆಂದೇ ಭಾವಿಸುತ್ತಾನೆ. ಹಾಗೆಯೇ ದಾನಮಾಡುವ ಹೊತ್ತಿನಲ್ಲಿ ಸುವರ್ಣ ಪರ್ವತವಾದ ಮೇರುಪರ್ವತವೇ ತನ್ನ ಮುಂದೆ ಇದ್ದರೂ ತನ್ನ ವ್ಯಯಶಕ್ತಿಗೆ ಅಲ್ಪವೆಂದೇ ಎಣಿಸುತ್ತಾನೆ. ೪೯. ಬಿರುದಾವಳಿಗಳನ್ನು ಹೊಗಳುವ ಪ್ರಸ್ತಾಪದಲ್ಲಿ ಮಾತ್ರ ಪಂಚಮಹಾಶಬ್ದಗಳನ್ನು (ಕೊಂಬು, ತಮಟೆ, ಶಂಖ, ಭೇರಿ, ರಾಜಘಂಟ) ಸಂಪಾದಿಸಿರುವ ಮಹಾಸಾಮಂತರು ಅರಿಕೇಸರಿಯೊಡನೆ ಸಮಾನರೆನಿಸಿಕೊಳ್ಳುತ್ತಾರೆಯೇ? ೫೦. ದಾನಶಾಸನಗಳನ್ನೂ ವೀರಸೂಚಕವಾದ ಪ್ರತಾಪಶಾಸನಗಳನ್ನೂ ಸ್ಥಾಪಿಸಿ ಅಧೀನವಾಗದ ರಾಜ್ಯಸಮೂಹಗಳನ್ನೆಲ್ಲ ವಶಪಡಿಸಿಕೊಂಡು ಮೂರುಲೋಕಗಳನ್ನೂ ತನ್ನ ಕೀರ್ತಿಗೆ ಆವಾಸಸ್ಥಾನ ಮಾಡಿ ಕೊಂಡ ಭದ್ರದೇವನಿಗಿಂತಲೂ ನರಸಿಂಹನಿಗಿಂತಲೂ ಸರ್ವವ್ಯಾಪಿಯಾದ