________________
೭೮ / ಪಂಪಭಾರತಂ
ಮಗನಾದನಾಗಿ ಚಾಗದ ನೆಗಚ್ಯೊಳ್ ಬೀರದೇಬಿಯೊಳ್ ನೆಗಟಿ ಮಗಂ | ಮಗನನೆ ಪುಟ್ಟಲೊಡಂ ಕೋ
ಜಿಗಗೊಂಡುದು ಭುವನಭವನಮರಿಕೇಸರಿಯೊಳ್ | ' ೪೨ ತರಳ || ಮದದ ನೀರೊಳೆ ಲೋಕವಾರ್ತೆಗೆ ಬೆಚ್ಚುನೀರ್ದಳಿದಾಗಳಾ
ಮದಗಜಾಂಕುಶದಿಂದ ಪರ್ಚಿಸಿ ನಾಭಿಯಂ ಮದದಂತಿ ದಂ || ತದೊಳೆ ಕಟ್ಟಿದ ತೊಟ್ಟಿಲಂ ನಯದಿಂದಮೇಟಿಗೆ ಬಾಳಕಾ
ಲದೊಳೆ ತೊಟ್ಟಿಲಿಗಂ ಗಜಪ್ರಿಯನಪ್ಪುದಂ ಸಲೆ ತೋಚಿದಂ ೪೩ ಕಂII ರುಂದ್ರಾಂಭೋಧಿ ಪರೀತ ಮ :
“ಹೀಂದ್ರರದಾರಿನ್ನರೀ ನರೇಂದ್ರಂ ಸಾಕ್ತಾ | ದಿಂದ ತಾನನ ಸಲೆ ನೆಗ ಆಂದೇಂದ್ರನ ತೋಳೆ ತೊಟ್ಟಿಲಾಗಿರೆ ಬಳದಂ || - ೪೪ ಅಮಿತಮತಿ ಗುಣದಿನ ವಿ ಕ್ರಮಗುಣದಿಂ ಶಾಶ್ವಪಾರಮುಂ ರಿಪುಬಳ ಪಾ | ರಮುಮೊಡನೆ ಸಂದುವೆನಿಸಿದ. ನಮೇಯ ಬಲಶಾಲಿ ಮನುಜ ಮಾರ್ತಾಂಡ ನೃಪಂ || ೪೫ ಉಡವಣಿ ಪಳಯದ ಮುನ್ನಮ ತೊಡಗಿ ಚಲಂ ನೆಗಟಿ ರಿಪುಬಲಂಗಳನೆ ಪಡ | ಲ್ವಡಿಸಿ ಪರಬಲದ ನೆತ್ತರ
ಕಡಲೊಳಗಣ ಜಿಗುಳೆ ಬಳೆವ ತಂದೊಳೆ ಬಳೆದಂ || ೪೬ ಹುಟ್ಟಿದ ಹಾಗಾಯಿತು. (ಅಂದರೆ ಇವನಿಂದ ಪ್ರಪಂಚಕ್ಕೆಲ್ಲ ಹಿರಿಮೆಯುಂಟಾಯಿತು' ಎಂದು ಭಾವ), ೪೩. ಅರಿಕೇಸರಿಯು ಹುಟ್ಟಿದ ಕೂಡಲೆ ಆ ಶಿಶುವಿಗೆ ಆನೆಯ ಮದೋದಕದಿಂದಲೇ ಲೋಕರೂಢಿಯಂತೆ (ಸಂಪ್ರದಾಯಾನುಸಾರವಾಗಿ) ಬೆಚ್ಚ ನೀರೆರೆದು ಮದಗಜಾಂಕುಶದಿಂದ ಹೊಕ್ಕಳ ಕುಡಿಯನ್ನು ಕತ್ತರಿಸಿ ಮದಗಜದಂತ ದಿಂದ ಮಾಡಿದ ತೊಟ್ಟಿಲಿನಲ್ಲಿ ಮಲಗಿಸಲು ಅವನು ತೊಟ್ಟಿಲ ಕೂಸಾಗಿದ್ದ ಕಾಲದಿಂದಲೂ ತಾನು 'ಗಜಪ್ರಿಯ'ನಾಗುವುದನ್ನು ಪ್ರಕಾಶಪಡಿಸಿದನು. ೪೪. ಈ ಅರಿಕೇಸರಿಯು ಸಾಕ್ಷಾತ್ ಇಂದ್ರನೇ ತಾನೆಂದು ಪ್ರಸಿದ್ದಿ ಪಡೆದ ಇಂದ್ರರಾಜನ : ತೋಳೆಂಬ ತೊಟ್ಟಿಲಿನಲ್ಲಿ ಬೆಳೆದನು. ವಿಸ್ತಾರವಾದ ಸಮುದ್ರದಿಂದ ಸುತ್ತುವರಿಯಲ್ಪಟ್ಟ
ಈ ಭೂಮಿಯಲ್ಲಿ ಇಂಥವರು ಮತ್ತಾರಿದ್ದಾರೆ? ೪೫, ಅಳತೆಗೆ ಸಿಲುಕದ ಭುಜಬಲವುಳ್ಳ ಈ ಮನುಜಮಾರ್ತಾಂಡನೃಪನು (ಮನುಷ್ಯರಲ್ಲಿ ಸೂರ್ಯನಂತಿರುವ ರಾಜನು) ತನ್ನ ವಿಶೇಷವಾದ ಬುದ್ವಿಗುಣದಿಂದಲೂ ಅಸಾಧ್ಯವಾದ ಪರಾಕ್ರಮದಿಂದಲೂ ಶಾಸ್ತ್ರದ ಎಲ್ಲೆಯನ್ನೂ ಶತ್ರುಬಲದ ಎಲ್ಲೆಯನ್ನೂ ಜೊತೆಯಲ್ಲಿಯೇ ದಾಟಿದನು. ಎಂದರೆ ಶಾಸ್ತ್ರವಿದ್ಯೆಯನ್ನೂ ಶಸ್ತವಿದ್ಯೆಯನ್ನೂ ಏಕಕಾಲದಲ್ಲಿ ಕಲಿತನು. ೪೬. ಈತನು ತನ್ನ ಸೊಂಟಕ್ಕೆ ಕಟ್ಟಿರುವ ಮಣಿಗಳು ಹರಿದು ಹೋಗುವುದಕ್ಕೆ ಮುಂಚಿನಿಂದಲೂ ಅಂದರೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗಿ