________________
೩೮
ಪ್ರಥಮಾಶ್ವಾಸಂ | ೭೭ ಗಂಗಾವಾರ್ಧಿಯೊಳಾತ್ತತು ರಂಗಮುಮಂ ಮಿಸಿಸಿ ನಗು ಡಾಳಪ್ರಿಯನೊಳ್ | ಸಂಗತ ಗುಣನಸಿಲತೆಯನ
ಸಂಗೊಳೆ ಭುಜವಿಜಯಗರ್ವದಿಂ ಸ್ಥಾಪಿಸಿದಂ | ಕಂ 1 ಆ ನರಸಿಂಹಮಹೀಶ ಮ.
ನೋನಯನಪ್ರಿಯ ಎಳನೀಳಾಳಕೆ ಚಂ | ದ್ರಾನನೆ ಜಾಕವ್ವ ದಲಾ ಜಾನಕಿಗಗ್ಗಳಮೆ ಕುಲದೊಳಂ ಶೀಲದೊಳಂ | ಪೊಸತಲರ್ದ ಬಿಳಿಯ ತಾವರೆ ಯೆಸಳ ನಡುವಿರ್ಪ ಸಿರಿಯುಮಾಕೆಯ ಕೆಲದೊಳ್ | ನಸು ಮಸುಳ್ಳು ತೋರ್ಪಳೆನೆ ಪೋ ಲಿಸುವೊಡೆ ಜಾಕವ್ವಗುಟಿದ ಪೆಂಡಿರ್ ದೂರೆಯೇ | ಆ ಜಾಕವ್ವಗಮಾ ವಸು ಧಾ ಜಯ ಸದ್ವಲ್ಲಭಂಗಮತಿ ವಿಶದ ಯಶೋ || ರಾಜಿತನೆನಿಪರಿಕೇಸರಿ ರಾಜಂ ತೇಜೋಗ್ನಿಮಗ್ನ ರಿಪು ನೃಪಶಲಭಂ |
೪೧ -
೩೯
ನಿಲ್ಲದೆಯೂ ಪಲಾಯನ ಮಾಡಿದನು. ೩೮. ಅಲ್ಲದೆ ನರಸಿಂಹನು ಗಂಗಾನದಿಯಲ್ಲಿ ತನ್ನ ಕುದುರೆಯನ್ನು ಮಜ್ಜನಮಾಡಿಸಿ ಪ್ರಸಿದ್ದವಾದ ಉಜ್ಜಯನಿಯಲ್ಲಿ ಗುಣಶಾಲಿ ಯಾದ ಅವನು ತನ್ನ ಕತ್ತಿಯನ್ನು ಶತ್ರುಗಳ ಪ್ರಾಣಾಪಹರಣಕ್ಕಾಗಿ ಭುಜವಿಜಯ ಗರ್ವದಿಂದ ಸ್ಥಾಪಿಸಿದನು. ೩೯. ಆ ನರಸಿಂಹರಾಜನ ಮನಸ್ಸಿಗೂ ಕಣ್ಣಿಗೂ ಪ್ರಿಯ ಳಾದವಳೂ ಚಂಚಲವಾದ ಕರಿಯ ಮುಂಗುರುಳುಳ್ಳವಳೂ ಚಂದ್ರನಂತೆ ಮುಖವುಳ್ಳ ವಳೂ ಆ ಜಾಕಲ್ವೆಯಲ್ಲವೇ! ಆಕೆಯು ಕುಲದಲ್ಲಿಯೂ ಶೀಲದಲ್ಲಿಯೂ ಸೀತಾ ದೇವಿಗೂ ಅಧಿಕಳಾದವಳೇ ಸರಿ. ೪೦. ಹೊಸದಾಗಿ ಅರಳಿದ ಬಿಳಿಯ ತಾವರೆಯ ದಳದ ಮಧ್ಯದಲ್ಲಿರುವ ಲಕ್ಷ್ಮಿದೇವಿಯೂ ಆಕೆಯ ಪಕ್ಕದಲ್ಲಿ ಸ್ವಲ್ಪ ಕಾಂತಿಹೀನಳಾಗುತ್ತಾಳೆ ಎನ್ನಲು ಉಳಿದ ಸ್ತ್ರೀಯರು ಆ ಜಾಕವ್ವಗೆ ಹೋಲಿಸಲು ಸಮಾನರಾಗುತ್ತಾರೆಯೇ. ೪೧-೪೨, ಆ ಜಾಕವ್ವಗೆ ಭೂಮಂಡಲಾಧಿಪತಿಶ್ರೇಷ್ಠನಾದ ನರಸಿಂಹನಿಗೂ ತನ್ನ ತೇಜಸ್ಸೆಂಬ ಬೆಂಕಿಯಲ್ಲಿ ಮುಳುಗಿದ ಶತ್ರುರಾಜರೆಂಬ ಪತಂಗಗಳನ್ನುಳ್ಳವನೂ ನಿರ್ಮಲವಾದ ಯಶಸ್ಸಿನಿಂದ ಕೂಡಿದವನೂ ಆದ (ಇಮ್ಮಡಿ) ಅರಿಕೇಸರಿಯೆಂಬ ರಾಜನು ಹುಟ್ಟಿದನು. ಹಾಗೆ ಅವನು ಹುಟ್ಟಿದ ಕೂಡಲೇ ತ್ಯಾಗದ ಪಂಪಿನಲ್ಲಿಯೂ ವೀರದ ವೈಭವದಲ್ಲಿಯೂ ಮಗನೆಂದರೆ ಇವನೇ ಮಗ ಎಂದೆಲ್ಲರೂ ಹೊಗಳುವ ಹಾಗೆ ಪ್ರಸಿದ್ದಿ ಪಡೆಯಲು ಈ ಅರಿಕೇಸರಿಯಿಂದ ಪ್ರಪಂಚವೆಂಬ ಮಂದಿರಕ್ಕೆ ಕೊಂಬು
1. ಇಲ್ಲಿ ಡಾಳಪ್ರಿಯನೊಳ್ ಎಂಬ ಪಾಠಕ್ಕೆ ಅರ್ಥವಾಗುವುದಿಲ್ಲ..