________________
೭೬ | ಪಂಪಭಾರತಂ
ಸಿಂಗಂ ಮಸಗಿದವೊಲ್ ನರ ಸಿಂಗಂ ತಳಿಯ ನಗದ್ದೆ ನೆತ್ತರ್ ನಭದೊಳ್ | ಕೆಂಗುಡಿ ಕವಿದಂತಾದುದಿ ದೇಂ ಗರ್ವದ ಪಂಪೂ ಸಕಲಲೋಕಾಶ್ರಯನಾ ||
ಏಳುಂ ಮಾಳಮುಮಂ ಪಾ ಆಟಿ ತಗುಳಿದು ನರಗನುರಿಪಿದೊಡ ಕರಿಂ | ಕೇತಿಸಿದಾತನ ತೇಜದ ಬೀಬಿಲನನುಕರಿಪುವಾದುವೊಗೆದುರಿವುರಿಗಳ್ ||
೩೫
ವಿಜಯಾರಂಭ ಪುರಸ್ಕರ ವಿಜಯಗಜಂಗಳನೆ ಪಿಡಿದು ಪೂರ್ಜರ ರಾಜ | ಧ್ವಜಿನಿಯನಿದೋಡಿಸಿ ಭುಜ ವಿಜಯದ ವಿಜಯನುಮನಿಸಿದಂ ನರಸಿಂಹಂ ||
ಸಿಡಿಲವೊಅಗುವ ನರಗನ ಪಡೆಗಗಿದುಮ್ಮಳದಿನುಂಡೆಡೆಯೊಳುಣ್ಣದೆಯುಂ | ಕಡೆದೆಡೆಯೊಳ್ ಕಡೆಯದೆ ನಿಂ ದೆಡೆಯೊಳ್ ನಿಲ್ಲದಯುಮೋಡಿದಂ ಮಹಿಪಾಲಂ ||
೩೭
ಬಿದ್ದು ಯುದ್ದಮಾಡಿದ ವಿಷಯವನ್ನು ಇಂದು ಹೇಳಲು ಅದನ್ನು ಕೇಳಿ ಆ ಲಾಟದೇಶದವರು ಇನ್ನೂ ಆ ಸತ್ತವರಿಗೆ ತರ್ಪಣೋದಕವನ್ನು ಕೊಡುತ್ತಿದ್ದಾರೆ ಎನ್ನಿಸಿಕೊಳ್ಳುವ ದೃಢಸಂಕಲ್ಪದ, ಛಲದ ಬಲದ ಕಲಿಯಾದವನು ನರಸಿಂಹ. ೩೪. ನರಸಿಂಹನು ಸಿಂಹದಂತೆ ರೇಗಿ ಮೇಲೆ ಬಿದ್ದು ಯುದ್ಧಮಾಡಲು ಆಗ ಚಿಮ್ಮಿದ ರಕ್ತವು ಆಕಾಶದಲ್ಲಿ ಕೆಂಪುಬಾವುಟಗಳು ಮುಚ್ಚಿಕೊಂಡಂತಾಯಿತು. ಸಕಲ ಲೋಕಕ್ಕೂ ಆಶ್ರಯದಾತನಾದ ಆತನ ಗರ್ವದ ಹಿರಿಮೆ ಅದೆಂತಹುದೋ? ೩೫. ನರಸಿಂಹನು ಸಪ್ತಮಾನಲಗಳನ್ನು (ಮಾಳವದೇಶದ ಏಳು ಭಾಗಗಳನ್ನು ಹಾರಿಹೋಗುವಂತೆ ಪ್ರತಿಭಟಿಸಿ ಕರಿಕೇಳುವಂತೆ ಸುಡಲು ಆಗ ಎದ್ದ ಉರಿಯು ಅವನ ತೇಜಸ್ಸಿನ ಬೀಳಲುಗಳನ್ನು ಅನುಕರಿಸಿದುವು. ೩೬. ನರಸಿಂಹನು ತನ್ನ ಜೈತ್ರಯಾತ್ರೆಯಲ್ಲಿ ವಿಜಯಸೂಚಕವಾದ ಮುಂಗುಡಿಯ ಆನೆಗಳನ್ನು ಹಿಂಬಾಲಿಸಿ ಘರ್ಜರದೇಶದ ರಾಜನ ಸೈನ್ಯವನ್ನು ಹೊಡೆದೋಡಿಸಿ ತನ್ನ ಭುಜಬಲದ ಜಯದಿಂದ ಅರ್ಜುನನನ್ನು ಮೀರಿಸುವಂಥವನಾದನು. ೩೭. ಸಿಡಿಲೆರಗುವ ಹಾಗೆ ಎರಗಿದ ನರಸಿಂಹನ ಸೈನ್ಯಕ್ಕೆ ಹೆದರಿ ಮಹಿಪಾಲನೆಂಬ ರಾಜನು ಊಟಮಾಡಿದ ಸ್ಥಳದಲ್ಲಿ ಪುನಃ ಊಟಮಾಡದೆಯೂ ಮಲಗಿದ ಕಡೆಯಲ್ಲಿ ಪುನಃ ಮಲಗದೆಯೂ ನಿಂತಡೆಯಲ್ಲಿ