________________
ಪ್ರಥಮಾಶ್ವಾಸಂ (೭೫
ತರಳ || ಸುರಭಿ ದೇವತೆಯೆಂಬ ಕಾಪಿನೆ ಮಾಣುದೇಳುವುದೊಂದೆಂ ದಿರದ ಮಾಣ್ಣುದು ದೇವ ವಾರಣವೇ ಉಂಟವು ಪೋದೊಡಾ | ಖರಕರಂಗರಿದಂದ ಮಾಣ್ಣಿರೆ ಮಾಣ್ಣುವಾ ಹರಿ ನೀನೆ ಪೇ ಅರಿಯವೆಂದಿವು ಭದ್ರದೇವರ ಬಾಗದೊಳೊಗಾದುವೇ ||
ಕಂ || ಆ ಬದ್ದೆಗಂಗೆ ವೈರಿತ
ಮೋಬಳ ದಶಶತಕರಂ ವಿರಾಜಿತ ವಿಜಯ |
ಶ್ರೀ ಬಾಹು ಯುದ್ಧಮಲ್ಲನಿ
೪ಾ ಬಹು ವಿಧರಕ್ಷಣ ಪ್ರವೀಣ ಕೃಪಾಣಂ ||
ಆತ್ಮಭವನನಾರಾಧಿಪ
ನಾತ್ಮಜನಾ ನಹುಷ ಪೃಥು ಭಗೀರಥ ನಳ ಮಾ | ಹಾತರನಿಸಿ ನೆಗಟ್ಟಿ ಮ
ಹಾತಂ ನರಸಿಂಹನಳವಿನೊಳ್ ಪರಮಾತಂ ||
ಮಾಂಕರಿಸದಳವು ಗುರು ವಚ
ನಾಂಕುಶಮಂ ಪಾಟಿಯೆಡೆಗೆ ಪೂಣರ್ದರಿಬಲಮಂ | ಕಿಂಕೊಳೆ ಮಾಡೆಗಣಮ ನಿ
ರಂಕುಶಮನಿಸಿದುದು ಮುನಿಸು ಭದ್ರಾಂಕುಶನಾ ||
ತಳಸಂದು ಲಾಲರೊಳ್ ತ
ಧ್ವಜೆದೇಂ ಪೇಟೆ ಕೇಳು ಮಂಡಲಮಿನ್ನು | ತಿರುನೀರಿಕ್ಕುವುದೆನಿಸಿದ
ತಪ್ಪಿಸಲವಿನ ಚಲದ ಬಲದ ಕಲಿ ನರಸಿಂಹಂ ||
೨೯
೩೦
೩೧
8.9
೩೩
ಭದ್ರದೇವನನ್ನು ಹೋಲುವರಾರಿದ್ದಾರೆ. ೩೦-೩೧. ಆ ಭದ್ರದೇವನಿಗೆ ಶತ್ರುಗಳೆಂಬ ಕತ್ತಲೆಗೆ ಸೂರ್ಯನ ಹಾಗಿರುವವನೂ ಪ್ರಕಾಶಮಾನಳಾದ ವಿಜಯಲಕ್ಷ್ಮಿಯಿಂದ ಕೂಡಿದ ಬಾಹುವುಳ್ಳವನೂ ಭೂಮಿಯನ್ನು ನಾನಾ ರೀತಿಯಲ್ಲಿ ರಕ್ಷಣ ಮಾಡುವ ಸಾಮರ್ಥ್ಯವುಳ್ಳ ಕತ್ತಿಯುಳ್ಳವನೂ ಆದ (ಮೂರನೆಯ) ಯುದ್ಧಮಲ್ಲನು ಮಗನಾದನು. ಆ ಯುದ್ಧಮಲ್ಲ ಮಹಾರಾಜನ ಮಗನಾದ ನರಸಿಂಹನು ಪ್ರಸಿದ್ಧರಾದ ನಹುಷ, ಪೃಥು, ಭಗೀರಥ, ನಳರೆಂಬ ಮಹಾತ್ಮರನ್ನು ಮಹಿಮೆಯಲ್ಲಿ ಮೀರಿಸಿದ ಪ್ರಸಿದ್ಧಿಯುಳ್ಳವನೂ ಜ್ಞಾನದಲ್ಲಿ ಸಾಕ್ಷಾತ್ ಪರಮಾತ್ಮನೂ ಆದವನು. ೩೨. ಭದ್ರ ಜಾತಿಯ ಆನೆಗಳಿಗೆ ಅಂಕುಶಸ್ವರೂಪನಾದ ಆ ನರಸಿಂಹನ ಜ್ಞಾನವು ಕ್ರಮಪರಿಪಾಲನಾ ಸಂದರ್ಭದಲ್ಲಿ ಗುರುವಚನವೆಂಬ ಅಂಕುಶವನ್ನು ನಿರಾಕರಿಸುವುದಿಲ್ಲ. ಆದರೆ ಪ್ರತಿಭಟಿಸಿದ ಶತ್ರುವನ್ನು ಇದಿರಿಸುವ ಸಂದರ್ಭದಲ್ಲಿ ಭದ್ರಾಂಕುಶನ ಕೋಪವು ತಡೆಯಿಲ್ಲದುದು ಎಂದೆನಿಸಿಕೊಂಡಿತು. (ಅಂದರೆ ನ್ಯಾಯ ಪರಿಪಾಲನೆಯಲ್ಲಿ ಅವನ ವಿವೇಕವು ಗುರುಜನರ ಆದೇಶವನ್ನು ಉಲ್ಲಂಘಿಸುತ್ತಿರದಿದ್ದರೂ ಶತ್ರುಸೈನ್ಯ ದೊಡನೆ ಯುದ್ಧಮಾಡುವಾಗ ಅವನ ಕೋಪವು ಯಾವ ಅಂಕೆಗೂ ಸಿಕ್ಕುತ್ತಿರಲಿಲ್ಲ). ೩೩. ನರಸಿಂಹನು ಎಂದೋ ಹಟದಿಂದ ಲಾಟದೇಶದ (ದಕ್ಷಿಣ ಗುಜರಾತು) ಮೇಲೆ