________________
ತ್ರಯೋದಶಾಶ್ವಾಸಂ | ೬೭೯
ಚಂ|| ನೆಗಲ್ಲಿ ನೆಗಗಾವಡೆಯೊಳಂ ಪಡೆಯಿಲ್ಲದೆ ಪೂಣ್ಣು ಸಂದ ವೈ ರಿಗಳನ ಕೊಂದು ವಾರಿಧಿಪರೀತಮಹೀತಳಮಂ ನಿಮಿರ್ಚಿ ಜೆ | ಟ್ಟಿಗರನಯೋನಿಸಂಭವರನಾಳರಿವರ್ಗದೊಳಾಂತು ಕಾದೆಯುಂ
ಬಗೆ ದೊರೆಕೊಂಡುದಿಲ್ಲಿದು ವಿಧಾತನ ದೋಷಮೋ ನಿನ್ನ ದೋಷಮೋ ||೧೦೩
ಕಂ
ಆದೊಡಮೆನ್ನಂ ಬಂಚಿಸಿ
ಪೋದುದಳ್ ನಿನಗೆ ಪಗೆವರಿಂದಿನಿತಡಾ ಯಾದಿತ್ಯತೇಜ ಬೆಸಸಿದಿ
ರಾದ ಪೃಥಾಸುತರನುಟೆಯಲೀಯದೆ ಕೊಲೈಂ ||
704
ವ|| ಎಂಬುದುಂ ಫಣಿಕೇತನಂ ನೆತ್ತಿಯಿಂದೂದುಗುವ ನೆತ್ತರ ಧಾರೆಯಿಂ ಮೆತ್ತಿದ ಕಣ್ಣಳನೊತ್ತಂಬದಿಂ ತದಶ್ವತ್ಥಾಮನ ಮೊಗಮಂ ನೋಡಿ
ಚoll
ಎನಗಿನಿತೊಂದವಸ್ಥೆ ವಿಧಿಯೋಗದಿನಾದುದಿದರ್ಕೆ ನೀನು
ನಿತು ಮನಃಕ್ಷತಂಬಡದಿರಾಗದು ಪಾಂಡವರಂ ಗೆಲಲ್ ಪುರಾ | ತನಪುರುಷಂ ಮುರಾರಿ ಕೆಲದೊಳ್ ನಿಲೆ ನೀಂ ಕೊಲಲಾರ್ಪೊಡಾಗದೆಂ ಬೆನೆ ತಲೆದೊಟ್ಟಿ ವೈರಿಗಳನೆನ್ನಸುವುಳ್ಳಿನಮೆಯೆವಾ ಗಡಾ ||
೧೦೫
'ವ|| ಎಂಬುದುಂ ಪಾಂಡವರನಿಕ್ಕಿದೊಸಗೆವಾತನೀಗಳೆ ಕೇಳಿಸುವನೆಂದು ಸರೋಜ ನಿಳಯೆಯನನ್ನ ಬರ್ಪನ್ನಮರಸನನಗಲದೆ ವಿಕಸಿತಶತಪತ್ರಾತಪತ್ರದ ತಣ್ಣೆಲುಮಂ ಕುಂದಲೀಯದಿರೆಂದು ನಿಯಮಿಸಿ ರುದ್ರಾವತಾರಂ ಕೃಪ ಕೃತವರ್ಮ ಸಮೇತನರಸನ ಬೀಳ್ಕೊಂಡು ಪೋದನಾಗಳ್
ಹತ್ತಿರಕ್ಕೆ ಬಂದು ನೋಡಿದನು. ಕೈಯಿಂದ ಕತ್ತಿಯು ಕಳಚಿಕೊಂಡಿತು, ದುಃಖದಿಂದ ವಿಶೇಷಖಿನ್ನನಾದನು. ೧೦೩. ದುರ್ಯೋಧನ ಮಾಡಿದ ಕಾರ್ಯದಲ್ಲಿ ಎಲ್ಲಿಯೂ ನಿಂದೆಯಿಲ್ಲದೆ ನಿರ್ವಹಿಸಿ, ಪ್ರಸಿದ್ಧರಾದ ಶತ್ರುಗಳನ್ನು ಕೊಂದು, ಸಮುದ್ರದಿಂದ ಸುತ್ತುವರಿಯಲ್ಪಟ್ಟು ಭೂಮಿಯನ್ನು ವಿಸ್ತರಿಸಿ, ಶೂರರಾದ ಅಯೋನಿಜರಾದವರಿಗೆ ಸ್ವಾಮಿ (ಒಡೆಯ)ಯಾಗಿದ್ದು, ಶತ್ರುವರ್ಗವನ್ನು ಎದುರಿಸಿ ಯುದ್ಧಮಾಡಿದರೂ ನಿನಗೆ ಇಷ್ಟಾರ್ಥವು ಲಭಿಸಲಿಲ್ಲವಲ್ಲಾ. ಇದು ವಿಧಿಯ ದೋಷವೋ ನಿನ್ನ ದೋಷವೋ ? ೧೦೪, ನನ್ನನ್ನು ವಂಚಿಸಿ ಹೋದುದರಿಂದ ನಿನಗೆ ಶತ್ರುಗಳಿಂದ ಇಷ್ಟು ಅವಮಾನವಾಯಿತು. ಸೂರ್ಯತೇಜಸ್ಸುಳ್ಳವನೇ ಆಜ್ಞೆಮಾಡು, ಪ್ರತಿಭಟಿಸಿದ ಪಾಂಡವರನ್ನು ಉಳಿಯುವುದಕ್ಕೆ ಅವಕಾಶವಿಲ್ಲದಂತೆ ಕೊಲ್ಲುತ್ತೇನೆ ಎಂದನು. ವ|| ಸರ್ಪಧ್ವಜನಾದ ದುರ್ಯೋಧನನು ತಲೆಯಿಂದ ಜಿನುಗಿ ಹರಿಯುತ್ತಿರುವ ರಕ್ತಪ್ರವಾಹದಿಂದ ಅಂಟಿಕೊಂಡಿದ್ದ ಕಣ್ಣುಗಳನ್ನು ಬಲಾತ್ಕಾರದಿಂದ ತೆರೆದು ಅಶ್ವತ್ಥಾಮನ ಮುಖವನ್ನು ನೋಡಿ ಹೇಳಿದನು ೧೦೫. ನನಗೆ ಇಷ್ಟೊಂದು ಕಷ್ಟದ ಸ್ಥಿತಿ ವಿಧಿಯ ಕಟ್ಟಳೆಯಿಂದ ಆಯಿತು. ಇದಕ್ಕೆ ನೀನು ದುಃಖಪಟ್ಟು ಮನಸ್ಸಿನಲ್ಲಿ ನೋಯಬೇಡ. ಆದಿಪುರುಷನಾದ ಕೃಷ್ಣನು ಅವರ ಪಕ್ಕದಲ್ಲಿರುವಾಗ ನೀನು ಪಾಂಡವರನ್ನು ಗೆಲ್ಲಲಾಗುವುದಿಲ್ಲ. ಹಾಗೆ ನೀನು ಅವರನ್ನು ಕೊಲ್ಲಲು ಸಮರ್ಥನಾದರೆ ನಾನು ಬೇಡವೆನ್ನುತ್ತೇನೆಯೇ? ನನ್ನ ಪ್ರಾಣಗಳಿರುವಾಗಲೇ ಶತ್ರುಗಳನ್ನು