________________
೬೭೮ / ಪಂಪಭಾರತಂ
ಮ||
ಹೆಸರೊಳ್ ಲಕ್ಷ್ಮಿ ಯೆನಿನ್ನೆಗಂ ನೆಲಸಿ ತಾಂ ದುರ್ಯೋಧನೋರಸ್ಥಳಾ ವಸಥಂ ದ್ರೋಣ ನದೀಜ ಕರ್ಣ ಭುಜವೀರ್ಯಾವೇಷ್ಟಿತಂ ಮಾಡೆ ಸಂ | ತಸದಿರ್ದ೦ ಬಿಸುಟಾ ಧರಾಧಿಪತಿಯಂ ನಾರಾಯಣಾದೇಶ ಡಿಸೆ ಪಾಂಡುಪ್ರಿಯಪುತ್ರರೊಳ್ ನೆರೆಯಲೆಂದಿಂತೀಗಳಾಂ ಪೋದಂ ವ|| ಎಂಬುದುಮಶ್ವತ್ಥಾಮನಿಂತೆಂದಂ
ಚoll
ಮ||
300
ಪೊಸತಲರ್ದಂಬುಜಂಗಳೆಸಳ್ ನಡೆಪಾಡುವಳೇಂ ಪಯೋಧಿಯಂ ಪೊಸದೊಡೆ ಪುಟ್ಟ ಮುರವಿರೋಧಿಯ ಪತ್ನಿಯ ಮಿಂಚುತಿರ್ಪ ಕೂ | ರಸಿಗಳ ಮೇಲೆ ಸಂಚರಿಗೆ ವೈರಿನರಾಧಿಪಸೈನ್ಯವಾರ್ಧಿಯಂ
ಪೊಸೆದೊಡೆ ಪುಟ್ಟದೀ ನಿನಗೆ ವಹಿಸಲೆನ್ನನದೆಂತು ತೀರ್ಗುಮೋ || ೧೦೧
ಕುರುವಂಶಾಂಬರಭಾನುವಂ ಬಿಸುಡಿಸಲ್ಮಾನುಳ್ಳಿನಂ ತೀರದಾ ನಿರೆ ನಾರಾಯಣನೆಂಬನುಂ ಪ್ರಭುವ ಪೇಮ್ ನೀನೀ ಮರುಳಾತನಂ | ಬುರುಹಾಕ್ಷಿ ಬಿಸುಡಂಜದಿರ್ ನಡೆ ಕುರುಕ್ಷಾಪಾಳನಿರ್ದಲ್ಲಿಗೆಂ ದರವಿಂದಾಲಯೆಯಂ ಮಗುಟ್ಟಿದನದೇನಾ ದೌಣಿ ಶೌರ್ಯಾರ್ಥಿಯೋ || ೧೦೨
ಮ|| ಅಂತು ವಿಕಸಿತಕಮಳದಳನಯನೆಯಂ ಕಮಳೆಯನಶ್ವತ್ಥಾಮಂ ಮುಂದಿಟ್ಟು ಕುರುಕುಟುಂಬಘಟಚೇಟಿಕೆಯಂ ತರ್ಪಂತ ತಂದು ವೃಕೋದರ ಗದಾಸಂಚೂರ್ಣಿತೋರು ಯುಗಳನುಂ ಭೀಮಸೇನಚರಣಪ್ರಹರಣಗಳಿತಶೋಣಿತಾರ್ದಮೌಳಿಯುವಾಗಿ ಕೋಟಲೆಗೊಳ್ಳ ಕೌರವೇಶ್ವರನನೆಯ ಪೋಗಿ ಹಸ್ತಪ್ರಹಸ್ತಮಂಡಲಾಗನುಂ ಶೋಕವಗ್ರನುಮಾಗಿ
೧೦೦. ನನ್ನ ಹೆಸರು ಲಕ್ಷ್ಮಿಯೆಂದು. ದ್ರೋಣ ಭೀಷ್ಮಕರ್ಣರ ಬಾಹುಬಲದಿಂದ ರಕ್ಷಿತನಾದ ದುರ್ಯೋಧನನ ಎದೆಯು ಮನೆಯಾಗಿರಲು ಇಲ್ಲಿಯವರೆಗೆ ಅಲ್ಲಿ ಸಂತೋಷದಿಂದಿದ್ದೆನು. ಕೃಷ್ಣನ ಅಪ್ಪಣೆಯ ಪ್ರಕಾರ ಆ ರಾಜನನ್ನು ಬಿಸುಟು ಪಾಂಡುಪ್ರಿಯಪುತ್ರರಲ್ಲಿ ಸೇರಬೇಕೆಂದು ಈಗ ನಾನು ಹೋಗುತ್ತಿದ್ದೇನೆ. ವ ಎನ್ನಲು ಅಶ್ವತ್ಥಾಮನು ಹೀಗೆ ಹೇಳಿದನು. ೧೦೧. ಹೊಸದಾಗಿ ಅರಳಿರುವ ಕಮಲದಳಗಳ ಮೇಲೆ ಓಡಾಡುವವಳು ಸಮುದ್ರವನ್ನು ಕಡೆಯಲು ಹುಟ್ಟಿದವಳೆ, ವಿಷ್ಣುವಿನ ಹೆಂಡತಿಯೇ, ಮಿಂಚಿನಂತಿರುವ ಹರಿತವಾದ ಕತ್ತಿಗಳ ಮೇಲೆ ಸಂಚರಿಸುತ್ತೀಯೆ; ಶತ್ರುರಾಜಸೇನಾಸಮುದ್ರವನ್ನು ತಡೆಯಲು ಹುಟ್ಟಿದ ಈ ನಿನಗೆ ನನ್ನನ್ನು ಪ್ರತಿಭಟಿಸಲು ಸಾಧ್ಯವೇ, ೧೦೨. ಕುರುವಂಶವೆಂಬ ಆಕಾಶಕ್ಕೆ ಸೂರ್ಯನಾದ ದುರ್ಯೋಧನನನ್ನು ನಾನಿರುವಾಗ ನೀನು ಬಿಸಾಡಲು ಸಾಧ್ಯವಿಲ್ಲ: ನಾನಿರುವಾಗ ನಾರಾಯಣನೆಂಬುವನು ನಿನಗೆ ಯಜಮಾನನೇ ಹೇಳು, ಹೇ ಕಮಲಮುಖಿ ಈ ಹುಚ್ಚುಮಾತನ್ನು ಬಿಸಾಡು; ಹೆದರಬೇಡ; ನಡೆ, ಕೌರವಚಕ್ರವರ್ತಿಯಿರುವ ಸ್ಥಳಕ್ಕೆ ಎಂದು ಲಕ್ಷ್ಮಿಯನ್ನು ಹಿಂತಿರುಗಿಸಿದನು. ಅಶ್ವತ್ಥಾಮನ ಅಹಂಕಾರವೆಷ್ಟು? ವ| ಅರಳಿದ ಕಮಲದಳದಂತೆ ಕಣ್ಣುಳ್ಳ ಲಕ್ಷ್ಮಿಯನ್ನು ಅಶ್ವತ್ಥಾಮನು ಮುಂದಿಟ್ಟುಕೊಂಡು ಕೌರವಕುಟುಂಬ ಘಟಚೇಟಿಕೆಯನ್ನು ಕರೆದುತರುವಂತೆ ತಂದನು. ಭೀಮನ ಗದೆಯಿಂದ ಪುಡಿಮಾಡಲ್ಪಟ್ಟ ಎರಡು ತೊಡೆಯುಳ್ಳವನೂ ಭೀಮಸೇನನ ಪಾದಗಳ ಒದೆತದಿಂದ ಸುರಿದ ರಕ್ತದಿಂದ ಒದ್ದೆಯಾಗಿರುವ ತಲೆಯುಳ್ಳವನೂ ಆಗಿ ವ್ಯಥೆಪಡುತ್ತಿರುವ ದುರ್ಯೋಧನನ