________________
ತ್ರಯೋದಶಾಶ್ವಾಸಂ / ೬೭೭ ಪೋದನನ್ನೆಗಂ ವೇಣೀಸಂಹಾರೋರುಭಂಗ ಮಕುಟಭಂಗಂಗಳೆಂಬ ತನ್ನ ಮಹಾ ಪ್ರತಿಜ್ಞೆಯಂ ನೆಪಿದ ಭೀಮಸೇನನಳವನಳವಲ್ಲದ ಪೊಗಟ್ಟು ಚಕ್ರಿ ಕಾಲ ಕುಶಲನಪುದಣಿನಶ್ವತ್ಥಾಮನಿನಪ್ಪನಾಗತ ಬಾಧಾವಿಘಾತಮಂ ಮಾಡಲೆಂದರುಮಂ ನೀಲಗಿರಿಗೊಡಗೊಂಡು ಪೋಗುತ್ತುಮಲ್ಲಿರ್ದ ಬೀಡುಮನಾ ಬೀಡಿಂಗ ಕಾಪಾಗಿ ಧೃಷ್ಟದ್ಯುಮ್ಮ ಶಿಖಂಡಿ ಚೇಕಿತಾನ ಯುಧಾಮನ್ನೂತ್ರ ಮೌಜಸರುಮಂ ಶ್ರುತ ಸೋಮಕ ಪ್ರಮುಖರಪ್ಪ ಪಂಚ ಪಾಂಡವರುಮಂ ಪೇಟ್ಟು ಹಸ್ತಿನಪುರಕ್ಕೆ ಕಳಿಸಿದನ್ನೆಗಮಿತ್ರ ಕೃಪ ಕೃತವರ್ಮ ಸಮೇತನಶ್ವತ್ಥಾಮಂ ದುರ್ಯೊಧನನಿರ್ದಡೆಯಳೆಯದ ಗಾಂಗೇಯರಿಂದಮಿರ್ದಡೆಯನಳೆದು ಕೊಳವದಲ್ಲಿಯುಂ ಕಾಣದ ಕೊಳುಗುಳದೊಳುಸುತ್ತುಂ ಬರ್ಪಂ ತೊಟ್ಟನೆ ಕಟ್ಟದಿರೊಲ್ಚಂ ಪಿಡಿದಡಗೆಯ ಚಾಮರದ ದಕ್ಷಿಣಹಸ್ತದ ಪದದೊಳೊಡಂ
ಬಡ ನಸು ಮಾಸಿ ಪಾಡದ ರೂಪಿನೊಳುಣುವ ಗಾಡಿ ನಾಡ ಕ | ಶೌಡ ತೊಡಂಕಿ ಪೀಳಿದ ಕುರುಳೆ ಚಿತ್ತದೊಳಾದ ಬೇಸಜಂ |
ನುಡಿವವೊಲಾಗೆ ಬರ್ಪ ಕಮಳಾಯತನೇಯನಿಂದುವಯಂ | ೯೯ ವ|| ಕಂಡು ನೀನಾರ್ಗೆನೆಂಬೆಯಲ್ಲಿ ಪೋದಷೆಯೆನೆ
ತಮ್ಮನಾದ ಕೃಷ್ಣನ ಮನಸ್ಸನ್ನು ನೋಯಿಸಲಾರದೆಯೂ ಭಗ್ನಮನೋರಥನಾಗಿ ದ್ವಾರಾವತಿಗೆ ಹೋದನು. ಅಷ್ಟರಲ್ಲಿ ವೇಣೀಸಂಹಾರ (ಮುಡಿಯನ್ನು ಕಟ್ಟುವುದು) ಊರುಭಂಗ (ತೊಡೆಯನ್ನು ಮುರಿಯುವುದು) ಮಕುಟಭಂಗ (ಕಿರೀಟವನ್ನು ಒಡೆಯುವುದು) ಎಂಬ ತನ್ನ ಮಹಾಪ್ರತಿಜ್ಞೆಗಳನ್ನು ಪೂರ್ಣಮಾಡಿದ ಭೀಮಸೇನನ ಶಕ್ತಿಯನ್ನು ಅಳತೆಮೀರಿ ಕೃಷ್ಣನು ಹೊಗಳಿದನು. ಕಾಲಕುಶಲನಾದುದರಿಂದ ಅಶ್ವತ್ಥಾಮನಿಂದ ಮುಂದೆ ಬರುವ ವಿಪತ್ತಿಗೆ ಪರಿಹಾರಮಾಡುವುದಕ್ಕೆಂದು ಅಯ್ದು ಜನ ಪಾಂಡವರನ್ನು ನೀಲಗಿರಿಗೆ ತನ್ನ ಜೊತೆಯಲ್ಲಿ ಕರೆದುಕೊಂಡು ಹೋದನು. ಆ ಬೀಡಿಗೆ ರಕ್ಷಕರಾಗಿ ಧೃಷ್ಟದ್ಯುಮ್ಮ, ಶಿಖಂಡಿ, ಚೇಕಿತಾನ, ಯುಧಾಮನ್ನೂತ್ತಮೌಜಸ ರನ್ನೂ ಶ್ರುತಸೋಮಕರೇ ಮುಖ್ಯರಾದ ಪಂಚಪಾಂಡವರನ್ನೂ ಗೊತ್ತು ಮಾಡಿ (ಇರಹೇಳಿ) ಪಾಂಡವರನ್ನು ಹಸ್ತಿನಾಪಟ್ಟಣಕ್ಕೆ ಕಳುಹಿಸಿದನು. ಅಷ್ಟರಲ್ಲಿ ಈ ಕಡೆ ಕೃಪಕೃತವರ್ಮರೊಡಗೂಡಿದ ಅಶ್ವತ್ಥಾಮನು ದುರ್ಯೊಧನನಿದ್ದ ಸ್ಥಳವನ್ನು ತಿಳಿಯದೆ ಭೀಷ್ಕರಿಂದ ದುರ್ಯೊಧನನಿದ್ದ ಸ್ಥಳವನ್ನು ತಿಳಿದು ಕೊಳಕ್ಕೆ ಬಂದು ಅಲ್ಲಿಯೂ ಕಾಣದೆ ಯುದ್ಧಭೂಮಿಯಲ್ಲಿ ಹುಡುಕುತ್ತ ಬರುತ್ತಿದ್ದವನು ಥಟಕ್ಕನೆ ಎದುರುಗಡೆಯಲ್ಲಿ ೯೯. ಎಡಗೈಯಲ್ಲಿ ಚಾಮರವೂ ಬಲಗೈಯಲ್ಲಿ ಕಮಲದ ಹೂವೂ ಮನೋಹರವಾಗಿರಲು ಸ್ವಲ್ಪ ತೇಜೋಹೀನವಾಗಿ ಸ್ವಭಾವಸ್ಥಿತಿ ಕೆಟ್ಟು ಆಕಾರವನ್ನು ಹೊರಹೊಮ್ಮುತ್ತಿರುವ ಸೌಂದರ್ಯವು ವಿಶೇಷವಾಗಿ ಕಣ್ಣನ್ನು ಆಕರ್ಷಿಸಲು ಸಿಕ್ಕಾಗಿ ಕೆದರಿರುವ ಕುರುಳುಗಳು ಮನಸ್ಸಿನ ಬೇಸರನ್ನು ನುಡಿಯುವ ಹಾಗಿರಲು (ಎದುರಿಗೆ) ಬರುತ್ತಿದ್ದ ಕಮಳದಂತೆ ವಿಸ್ತಾರವಾದ ಕಣ್ಣುಳ್ಳ ಚಂದ್ರಮುಖಿಯನ್ನು ನೋಡಿದನು. ವ ನೀನಾರು? ನಿನ್ನ ಹೆಸರೇನು? ಎಲ್ಲಿಗೆ ಹೋಗುತ್ತಿದ್ದೀಯೆ ಎನ್ನಲು